ಮಾಂಸಹಾರ ಮುಟ್ಟದೆ ಸಿಕ್ಸ್ ಪ್ಯಾಕ್ ಮಾಡಿದ ಕನ್ನಡ 'ನಟ'
Recommended Video

ಕನ್ನಡದ ಪ್ರತಿಭಾವಂತ ನಟ ನಟರಾಜ್ ಇತ್ತೀಚಿಗಷ್ಟೆ ಗಣೇಶ ಹಬ್ಬಕ್ಕೆ ಸಿಕ್ಕಾಪಟ್ಟೆ ಡ್ಯಾನ್ಸ್ ಮಾಡಿದ್ದರು. ಅರ್ಥಾತ್ ಗಣೇಶ ಹಬ್ಬದ ವಿಶೇಷವಾಗಿ ಅವರ 'ಕಳ್ಬೊಟ್ಟದ ದರೋಡೆಕೋರರು' ಸಿನಿಮಾದ ಹಾಡು ಬಿಡುಗಡೆಯಾಗಿತ್ತು.
ಗಣೇಶ ಹಬ್ಬದ ಹಾಡಿನ ಮೂಲಕ ಅಭಿಮಾನಿಗಳಿಗೆ ಶುಭಾಶಯ ತಿಳಿಸಿದ್ದ ನಟರಾಜ್ ಈಗ ದಸರಾ ಹಬ್ಬದ ಸಮಯಕ್ಕೆ ಮತ್ತೆ ಒಂದು ಹೊಸ ಸುದ್ದಿಯೊಂದಿಗೆ ಬಂದಿದ್ದಾರೆ. ವಿಶೇಷ ಅಂದರೆ, 'ರಾಮಾ ರಾಮಾ ರೇ' ಖ್ಯಾತಿಯ ನಟರಾಜ್ ಈಗ ಸಿಕ್ಸ್ ಪ್ಯಾಕ್ ನಟರಾಜ್ ಆಗಿದ್ದಾರೆ.
ಒಂದು ಹೊಸ ಪಾತ್ರಕ್ಕೆ ತಯಾರಾಗಲು ಜಿಮ್ ಗೆ ಹೋದ ನಟರಾಜ್ ಸಿಕ್ಸ್ ಪ್ಯಾಕ್ ನೊಂದಿಗೆ ಹೊರ ಬಂದಿದ್ದಾರೆ. ಮೂರು ತಿಂಗಳುಗಳ ಕಾಲ ಬೆವರು ಸುರಿಸಿ ಸುಂದರ ದೇಹ ಪಡೆದುಕೊಂಡಿದ್ದಾರೆ. ಅಚ್ಚರಿ ಎಂದರೆ, ಯಾವುದೇ ಮಾಂಸಹಾರ ಸೇವಿಸದೆ ನಟರಾಜ್ ಸಿಕ್ಸ್ ಪ್ಯಾಕ್ ಮಾಡಿದ್ದಾರೆ. ಮುಂದೆ ಓದಿ..

ಕಾಲೇಜು ಹುಡುಗನ ಪಾತ್ರಕ್ಕಾಗಿ
ನಟರಾಜ್ ಒಂದು ಹೊಸ ಸಿನಿಮಾವನ್ನು ಮಾಡಬೇಕಿತ್ತು. ಈ ಸಿನಿಮಾದಲ್ಲಿ ಅವರದ್ದು ಕಾಲೇಜು ಹುಡುಗನ ಪಾತ್ರವಾಗಿತ್ತು. ಅದ್ದರಿಂದ ಮಾನಸಿಕ ಹಾಗೂ ದೈಹಿಕವಾಗಿ ಆ ಪಾತ್ರಕ್ಕೆ ಅವರು ತಯಾರಾಗಲು ಶುರು ಮಾಡಿದರು. ಆದರೆ, ಕಾರಣಾಂತರಗಳಿಂದ ಆ ಸಿನಿಮಾದಲ್ಲಿ ನಟಿಸಲು ಸಾಧ್ಯ ಆಗಲಿಲ್ಲ.

ವರ್ಕೌಟ್ ನಿಲ್ಲಿಸಲಿಲ್ಲ
ಆ ಪಾತ್ರಕ್ಕಾಗಿ ವರ್ಕೌಟ್ ಪ್ರಾರಂಭ ಮಾಡಿದ್ದ ನಟರಾಜ್ ಅದನ್ನು ಮಾತ್ರ ನಿಲ್ಲಿಸಲಿಲ್ಲ. ಅವರ ಜಿಮ್ ಟ್ರೈನರ್ ಶ್ರೀನಿವಾಸ್ ಕೂಡ ಸಿಕ್ಸ್ ಪ್ಯಾಕ್ ಮಾಡಲು ಸಲಹೆ ನೀಡಿದರು. ಸಿಕ್ಸ್ ಪ್ಯಾಕ್ ಮಾಡಬೇಕು ಎಂದಾಗ ಮಾಂಸಹಾರ ತಿನ್ನಲೇಬೇಕು ಎನ್ನುವುದು ಅನೇಕರ ಕಲ್ಪನೆ ಆದರೆ, ನಟರಾಜ್ ಮಾಂಸ ಮುಟ್ಟದೆ ಸಿಕ್ಸ್ ಪ್ಯಾಕ್ ಮಾಡಲು ಹೊರಟರು.

ಸಸ್ಯಹಾರ ದಿಂದ ಸಿಕ್ಸ್ ಪ್ಯಾಕ್
ಅಪ್ಪಟ್ಟ ಸಸ್ಯಹಾರಿಯಾಗಿದ್ದ ನಟರಾಜ್ ಮುಂಚೆಯೇ ತಮ್ಮ ಟ್ರೈನರ್ ಗೆ ಹೇಳಿದ್ದರು. ಬರೀ ಚಪಾತಿ, ಮೊಳಕೆ ಕಾಳುಗಳು, ಹಣ್ಣು ತರಕಾರಿಗಳನ್ನ ತಿಂದು ದೇಹವನ್ನು ಹುರಿಗಟ್ಟಿಸಿದರು. ಸಸ್ಯಹಾರ ಮಾತ್ರ ಸೇರಿಸಿ ಸಿಕ್ಸ್ ಪ್ಯಾಕ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಅವರ ಡಯಟ್ ಮೇಲೆ ಶ್ರೀನಿವಾಸ್ ಅವರು ಕೂಡ ಕಾಳಜಿ ತೆಗೆದುಕೊಳ್ಳುತ್ತಿದ್ದರಂತೆ.

ಪ್ರತಿ ದಿನ ನಾಲ್ಕು ಗಂಟೆ ವರ್ಕೌಟ್
ಸೂಕ್ತ ಆಹಾರದ ಜೊತೆಗೆ ಮೂರು ತಿಂಗಳು ಅವರ ಜಿಮ್ ನಲ್ಲಿ ಕಷ್ಟ ಪಟ್ಟಿದ್ದಾರೆ. ಪ್ರತಿ ದಿನ ಬೆಳಗ್ಗೆ ಎರಡು ಗಂಟೆ ಹಾಗೂ ಸಂಜೆ ಎರಡು ಗಂಟೆ ವರ್ಕೌಟ್ ಮಾಡಿದ್ದಾರೆ. ನಿರಂತರ ಪರಿಶ್ರಮದ ನಂತರ ಸಿಕ್ಸ್ ಪ್ಯಾಕ್ ನಲ್ಲಿ ದರ್ಶನ ನೀಡಿದ್ದಾರೆ.

ಮುಂದಿನ ಸಿನಿಮಾ ಅವಕಾಶಗಳು
ವರ್ಕೌಟ್ ಶುರು ಮಾಡಿದ ಸಿನಿಮಾದಲ್ಲಿ ನಟಿಸದೆ ಇದ್ದರೂ ಸಿಕ್ಸ್ ಪ್ಯಾಕ್ ಬಂದ ಮೇಲೆ ಇನ್ನಷ್ಟು ಸಿನಿಮಾಗಳ ಅವಕಾಶ ನಟರಾಜ್ ಅವರ ಪಾಲಾಗಿವೆ. ಕಾಡಿನ ಕಥೆಯುಳ್ಳ ಒಂದು ಸಿನಿಮಾದಲ್ಲಿ ಅವರು ನಟಿಸುತ್ತಿದ್ದು ಡಿಸೆಂಬರ್ ನಲ್ಲಿ ಆ ಚಿತ್ರದ ಶೂಟಿಂಗ್ ಶುರು ಆಗಲಿದೆ. ಇದರೊಂದಿಗೆ ಡಿ ಸತ್ಯ ಪ್ರಕಾಶ್ ಜೊತೆ ಒಂದು ಸಿನಿಮಾ ಹಾಗೂ ಒಂದು ಕಾಮಿಡಿ ಸಿನಮಾವನ್ನು ನಟರಾಜ್ ಒಪ್ಪಿಕೊಂಡಿದ್ದಾರೆ.


Click it and Unblock the Notifications











