ಹೆಣ್ಣು ವೇಷ ತೊಟ್ಟಿರುವ ಕನ್ನಡದ ಈ ನಟ ಯಾರು?
ಒಬ್ಬ ಕಲಾವಿದ ಎಲ್ಲ ರೀತಿಯ ಪಾತ್ರಗಳನ್ನು ಮಾಡಬೇಕು. ಬೇರೆ ಬೇರೆ ವೇಷ ತೊಟ್ಟು ತೆರೆ ಮೇಲೆ ಬರಬೇಕು ಆಗಲೇ ನೋಡುಗರಿಗೆ ಒಂದು ಮಜಾ ಸಿಗುತ್ತದೆ. ಅದೇ ರೀತಿ ಸದ್ಯ ಕನ್ನಡ ಒಬ್ಬ ನಟ ಹೆಣ್ಣು ವೇಷದಲ್ಲಿ ಕಾಣಿಸಿಕೊಂಡಿದ್ದಾರೆ.
ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಟ, 'ರಾಮ ರಾಮ ರೇ' ಖ್ಯಾತಿಯ ನಟರಾಜ್ ಚಾಲೆಂಜಿಂಗ್ ಪಾತ್ರಗಳನ್ನು ಮಾಡುತ್ತಾರೆ. ಈ ಹಿಂದೆಯಿಂದಲೂ ಅಂತಹ ಪಾತ್ರಗಳನ್ನು ಮಾಡಿಕೊಂಡು ಬಂದ ಅವರು ತಾವು ನಟಿಸಿದ್ದ ಒಂದು ಪಾತ್ರದ ಫೋಟೋವನ್ನು ನಿನ್ನೆ ಇನ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಈ ಫೋಟೋ ನೋಡಿದರೆ ಇದು ನಟರಾಜ್ ಅವರೇನಾ ಎಂದು ಆಶ್ಚರ್ಯ ಆಗುತ್ತದೆ.

ಅಂದಹಾಗೆ, ನಟರಾಜ್ ನಾಲ್ಕು ವರ್ಷಗಳ ಹಿಂದೆ ಕಲಾಗಂಗೋತ್ರಿ ಮಂಜು ಅವರ ನಿರ್ದೇಶನದಲ್ಲಿ ಬಂದ 'ಇದೇ ಪ್ರೀತಿ ಪ್ರೇಮ' ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಈ ಧಾರಾವಾಹಿಯನ್ನು ಬಿ.ಸುರೇಶ್ ನಿರ್ದೇಶನ ಮಾಡಿದ್ದರು. ಈ ಧಾರಾವಾಹಿಯಲ್ಲಿ ಮರೀಚಿಕೆ ಎಂಬ ಪಾತ್ರವನ್ನು ನಟರಾಜ್ ನಿರ್ವಹಿಸುತ್ತಿದ್ದು, ಆ ಫೋಟೋವನ್ನು ಈಗ ಹಂಚಿಕೊಂಡಿದ್ದಾರೆ.
ಇನ್ನು, 'ರಾಮಾ ರಾಮಾ ರೇ' ಯಶಸ್ಸಿನ ನಂತರ ನಟರಾಜ್ 'ಕಳ್ಬೆಟ್ಟದ ದರೋಡೆಕೋರರು' ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ಈ ಸಿನಿಮಾ ಟ್ರೇಲರ್ ಬಿಡುಗಡೆಯಾಗಿದ್ದು, ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಸಿನಿಮಾವನ್ನು ದೀಪಕ್ ಮದುವನಹಳ್ಳಿ ನಿರ್ದೇಶನ ಮಾಡಿದ್ದಾರೆ.


Click it and Unblock the Notifications











