ನಿಖಿಲ್ ಟೀಸರ್ ಬಗ್ಗೆ ಟಾಲಿವುಡ್ ಮಂದಿ ಹೇಗೆಲ್ಲಾ ಮಾತಾಡ್ತಿದ್ದಾರೆ ನೋಡಿ.!

By Bharath Kumar

ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಅಭಿನಯದ 'ಸೀತಾರಾಮ ಕಲ್ಯಾಣ' ಚಿತ್ರದ ಟೀಸರ್ ಬಿಡುಗಡೆಯಾಗಿ, ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ಆಗಿದೆ. ಈ ಟೀಸರ್ ನಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ನಿಖಿಲ್ ಆಕ್ಷನ್.

ನಿಖಿಲ್ ಇಷ್ಟರ ಮಟ್ಟಿಗೆ ಮಾಸ್ ಆಗಿ ನೋಡಬಹುದಾ ಅಂತ ಖುಷಿಯಾಗಿದ್ದಾರೆ. ಈ ಆಕ್ಷನ್ ನೋಡಿ ಸ್ಯಾಂಡಲ್ ವುಡ್ ಮಂದಿ ಅಚ್ಚರಿಯಾಗಿದ್ದಾರೆ. ಆದ್ರೆ, ಟಾಲಿವುಡ್ ಮಂದಿ ಮಾತ್ರ ಪಕ್ಕಾ ಇದು ನಮ್ಮದೇ ಅಂತಿದ್ದಾರೆ.

'ಸೀತಾರಾಮ ಕಲ್ಯಾಣ' ರೀಮೇಕ್ ಅಂತೆ.! ಹೀಗಂತಾ ಟೀಸರ್ ನೋಡಿದ ಬಹುತೇಕರು ಕಾಮೆಂಟ್ ಮಾಡ್ತಿದ್ದಾರೆ. ಅದರಲ್ಲೂ 'ಸೀತಾರಾಮ ಕಲ್ಯಾಣ' ಟೀಸರ್ ನೋಡಿದ ತೆಲುಗು ಮಂದಿಯಂತು ಇದು ಅಲ್ಲು ಅರ್ಜುನ್ ಚಿತ್ರದ ರೀಮೇಕ್ ಅಂತಿದ್ದಾರೆ. ಹೀಗೆ, ಭರ್ಜರಿಯಾಗಿ ಮೂಡಿಬಂದಿರುವ ಟೀಸರ್ ಅಲ್ಲು ಅರ್ಜುನ್ ಸಿನಿಮಾದ ರೀಮೇಕ್ ಅಂತ ಹೇಳಲು ಕಾರಣವೂ ಇದೆ. ಏನದು.? ಮುಂದೆ ಓದಿ.....

'ಸರೈನೋಡು' ರೀಮೇಕ್.!

'ಸರೈನೋಡು' ರೀಮೇಕ್.!

ಸೀತಾರಾಮ ಕಲ್ಯಾಣ, 2016ರಲ್ಲಿ ಅಲ್ಲು ಅರ್ಜುನ್ ಅಭಿನಯಿಸಿದ್ದ ತೆಲುಗು ಬ್ಲಾಕ್ ಬಸ್ಟರ್ ಸಿನಿಮಾ 'ಸರೈನೋಡು' ಚಿತ್ರದ ರೀಮೇಕ್ ಎನ್ನುತ್ತಿದ್ದಾರೆ. ಅದಕ್ಕೆ ಪುಷ್ಠಿ ನೀಡುವಂತೆ ಟೀಸರ್ ನಲ್ಲಿ ಕೆಲವು ದೃಶ್ಯಗಳು ಹೋಲಿಕೆ ಆಗುತ್ತಿದೆ. ಇದನ್ನ ಗಮನಿಸಿದ ತೆಲುಗು ಚಿತ್ರಪ್ರೇಮಿಗಳು ಇದು ಅಲ್ಲು ಅರ್ಜುನ್ ಸಿನಿಮಾದಿಂದ ತೆಗೆದುಕೊಂಡಿರುವ ದೃಶ್ಯ ಎನ್ನುತ್ತಿದ್ದಾರೆ.

ಅಲ್ಲು ಅರ್ಜುನ್ ಫೈಟ್

ಅಲ್ಲು ಅರ್ಜುನ್ ಫೈಟ್

ಅಷ್ಟಕ್ಕೂ, ಇಷ್ಟು ದೊಡ್ಡದಾಗಿ ಚರ್ಚೆಯಾಗಲು ಕಾರಣ ಸೀತಾರಾಮ ಕಲ್ಯಾಣ ಚಿತ್ರದ ಫೈಟ್. ಈ ಫೈಟ್ ನೋಡಿದ್ರೆ, ಸೇಮ್ ಟು ಸೇಮ್ ಸರೈನೋಡು ಚಿತ್ರದ ಫೈಟ್ ನೋಡಿದಂತೆ ಭಾಸವಾಗುತ್ತೆ. ಅಷ್ಟರ ಮಟ್ಟಿಗೆ ಹೋಲಿಕೆಯಾಗುತ್ತಿದೆ. ಸರೈನೋಡು ಚಿತ್ರದ ಫೈಟ್ ನಲ್ಲಿ ಕಾಣಿಸುವ ಅಲ್ಲು ಅರ್ಜುನ್ ಮಾಸ್ ಲುಕ್, ಎಂಟ್ರಿ, ಆಕ್ಷನ್ ಹಾಗೂ ಫೈಟ್ ನಡೆಯುವ ಸನ್ನಿವೇಶ ಹೀಗೆ ಎಲ್ಲವೂ 'ಸೀತಾರಾಮ ಕಲ್ಯಾಣ'ದಲ್ಲಿ ಕಾಣುತ್ತಿದೆ.

ಮ್ಯಾನರಿಸಂ ಕೂಡ ಗಮನ ಸೆಳೆಯುತ್ತೆ

ಮ್ಯಾನರಿಸಂ ಕೂಡ ಗಮನ ಸೆಳೆಯುತ್ತೆ

ಟೀಸರ್ ನಲ್ಲಿ ನಿಖಿಲ್ ಕುಮಾರ್ ಅವರದೊಂದು ಮ್ಯಾನರಿಸಂ ಇದೆ. ಫೈಟ್ ಮಧ್ಯೆ ತಮ್ಮ ಶರ್ಟ್ ಕೆಳಗೆ ಎಳೆದುಕೊಳ್ಳುವ ದೃಶ್ಯ. ಕಾಕತಾಳೀಯ ಅಂದ್ರೆ ಇದೇ ಮ್ಯಾನರಿಸಂ ಸರೈನೋಡು ಚಿತ್ರದಲ್ಲಿ ಅಲ್ಲು ಅರ್ಜುನ್ ಮಾಡಿದ್ದಾರೆ. ಹೀಗಾಗಿ, ಇದು ಮತ್ತಷ್ಟು ಚರ್ಚೆಗೆ ಕಾರಣವಾಗುತ್ತಿದೆ.

ಮ್ಯೂಸಿಕ್ ಕೂಡ ಲಿಂಕ್ ಇದೆ

ಮ್ಯೂಸಿಕ್ ಕೂಡ ಲಿಂಕ್ ಇದೆ

ದೃಶ್ಯ ಹೋದರೇ ಹೋಗಲಿ, ಟೀಸರ್ ನಲ್ಲಿ ಬರುವ ಹಿನ್ನೆಲೆ ಸಂಗೀತ ಕೂಡ ಸರೈನೋಡು ಚಿತ್ರದ ಹಿನ್ನೆಲೆ ಸಂಗೀತವನ್ನ ಹೋಲುತ್ತಿದೆ. ಇದು ಆಡಿಕೊಳ್ಳುವವರು ಬಾಯಿಗೆ ಆಹಾರವಾಗಿದೆ. ಅಂದ್ಹಾಗೆ, 'ಸೀತಾರಾಮ ಕಲ್ಯಾಣ'ಕ್ಕೆ ಅನುಪ್ ರೂಬೆನ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

ಇದಕ್ಕೆ ಕಾರಣ ತೆಲುಗು ಸ್ಟಂಟ್ ಮಾಸ್ಟರ್

ಇದಕ್ಕೆ ಕಾರಣ ತೆಲುಗು ಸ್ಟಂಟ್ ಮಾಸ್ಟರ್

ಅಂದ್ಹಾಗೆ, ಸೀತಾರಾಮ ಕಲ್ಯಾಣ ಚಿತ್ರಕ್ಕೆ ಸ್ಟಂಟ್ ಮಾಡಿರುವುದು ತೆಲುಗು ಲೋಕದ ಫೈಟ್ ಮಾಸ್ಟರ್. ಬಹುಶಃ ಅಲ್ಲಿನ ಫೈಟ್ ಗಳ ರೀತಿಯಲ್ಲೇ ಈ ಫೈಟ್ ಮಾಡಿಸಿರಬಹುದು ಅಷ್ಟೇ.

ಇದು ರೀಮೇಕ್ ಸಿನಿಮಾ ಅಲ್ಲ

ಇದು ರೀಮೇಕ್ ಸಿನಿಮಾ ಅಲ್ಲ

ಸೀತಾರಾಮ ಕಲ್ಯಾಣ ಚಿತ್ರ ರೀಮೇಕ್ ಅಲ್ಲ ಎಂದು ಈಗಾಗಲೇ ಚಿತ್ರತಂಡ ಖಚಿತಪಡಿಸಿದೆ. ನಟ ನಿಖಿಲ್ ಕುಮಾರ್, ಎಚ್ ಡಿ ಕುಮಾರಸ್ವಾಮಿ ಹಾಗೂ ನಿರ್ದೇಶಕ ಹರ್ಷ ರೀಮೇಕ್ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಟೀಸರ್ ನೋಡಿದ ಮಾತ್ರಕ್ಕೆ ಇದು ರೀಮೇಕ್ ಎನ್ನುವುದು ಸರಿಯಲ್ಲ.

More from Filmibeat

English summary
Kannada actor Nikhil Kumar starrer seetha rama kalyana movie is not a remake of Allu Arjun's sarrainodu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X