ಕೊನೆಯ ಕ್ಷಣದಲ್ಲಿ ಎಚ್ಚೆತ್ತುಕೊಂಡ 'ಅಭಿಮನ್ಯು' ನಿಖಿಲ್ ಕುಮಾರ್

Recommended Video

Kurukshetra : ಕೊನೆಗೂ ಕುರುಕ್ಷೇತ್ರದ ಅಭಿಮನ್ಯು ಪಾತ್ರಕ್ಕೆ ಡಬ್ಬಿಂಗ್ ಮಾಡಲು ಬಂದ ನಿಖಿಲ್ ಕುಮಾರಸ್ವಾಮಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ ಕುರುಕ್ಷೇತ್ರ ರಿಲೀಸ್ ಗೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ. ಚಿತ್ರದಲ್ಲಿ ದೊಡ್ಡ ದೊಡ್ಡ ಸ್ಟಾರ್ ಇದ್ದರು ಇದೂ ದರ್ಶನ್ ಸಿನಿಮಾ ಅಂತಾನೆ ಖ್ಯಾತಿ ಗಳಿಸಿದೆ. ಸದ್ಯ ಆಗಸ್ಟ್ 2ರ ಬದಲಿಗೆ ಆಗಸ್ಟ್ 9ಕ್ಕೆ ರಿಲೀಸ್ ಡೇಟನ್ನು ಪೋಸ್ಟ್ ಪೋನ್ ಮಾಡಿಕೊಂಡಿರುವ ಕುರುಕ್ಷೇತ್ರ ಈಗ ಬೇರೆ ಬೇರೆ ಭಾಷೆಯಲ್ಲಿ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದೆ.

ತಮಿಳು, ತೆಲುಗು, ಹಿಂದಿಯಲ್ಲಿ ಪ್ರಮೋಷನ್ ನಲ್ಲಿ ಚಿತ್ರತಂಡ ತೊಡಗಿಕೊಂಡಿದ್ರೆ ಮತ್ತೊಂದೆಡೆ ಚಿತ್ರದ ಅಭಿಮನ್ಯು ಪಾತ್ರಧಾರಿ ಡಬ್ಬಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಹೌದು, ಚಿತ್ರ ರಿಲೀಸ್ ಗೆ ಸಮೀಪಿಸುತ್ತಿದ್ರೆ ಇತ್ತ ನಿಖಿಲ್ ಕುಮಾರ್ ಈಗ ಎಚ್ಚೆತ್ತುಕೊಂಡು ಡಬ್ಬಿಂಗ್ ಮಾಡುವುದಾಗಿ ಹೇಳಿಕೊಂಡಿದ್ದಾರೆ.

ಚುನಾವಣೆಯ ನಂತರ ನಿಖಿಲ್ ಎಲ್ಲೋಗಿದ್ದಾರೆ ಎನ್ನುವ ಬಗ್ಗೆ ಯಾವುದೆ ಮಾಹಿತಿ ಇರಲಿಲ್ಲ. ಮಂಡ್ಯ ಚುನಾವಣೆಯ ಸೋಲಿನಿಂದ ಬೇಸರಕೊಂಡಿದ್ದ ನಿಖಿಲ್ ಸಾಮಾಜಿಕ ಜಾಲತಾಣದ ಮೂಲಕ ಒಂದು ಪೋಸ್ಟ್ ಮಾಡಿ ಸೈಲೆಂಟ್ ಆಗಿದ್ರು. ಆದ್ರೀಗ ಕುರುಕ್ಷೇತ್ರ ರಿಲೀಸ್ ಸಮಯದಲ್ಲಿ ಡಬ್ಬಿಂಗ್ ಗೆ ಹೊರಟಿದ್ದಾರೆ.

ಕುರುಕ್ಷೇತ್ರಕ್ಕೆ ನಿಖಿಲ್ ಡಬ್ಬಿಂಗ್

ಕುರುಕ್ಷೇತ್ರಕ್ಕೆ ನಿಖಿಲ್ ಡಬ್ಬಿಂಗ್

ಕುರುಕ್ಷೇತ್ರ ಸಿನಿಮಾ ರಿಲೀಸ್ ಹತ್ತಿರವಾಗುತ್ತಿದೆ. ಇನ್ನೇನು ಆಗಸ್ಟ್ 9ಕ್ಕೆ ಸಿನಿಮಾ ತೆರೆಗೆ ಬರುತ್ತೆ. ಈಗಾಗಲೆ ಪ್ರಮೋಷನ್ ನಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಆದ್ರೆ ಇಂದು ನಿಖಿಲ್ ಕುಮಾರ ಸ್ವಾಮಿ ಚಿತ್ರಕ್ಕೆ ಡಬ್ ಮಾಡುತ್ತಿದ್ದಾರೆ. ಇಂದು ಸಂಜೆ 6.30ರ ಸುಮಾರಿಗೆ ನಿಖಿಲ್ ಆಕಾಶ್ ಸ್ಟೂಡಿಯೋದಲ್ಲಿ ಡಬ್ಬಿಂಗ್ ಗೆ ಹಾಜರಾಗಲಿದ್ದಾರೆ.

ನಿಖಿಲ್ ಡಬ್ಬಿಂಗ್ ವಿಚಾರ ಚರ್ಚೆಯಾಗಿತ್ತು

ನಿಖಿಲ್ ಡಬ್ಬಿಂಗ್ ವಿಚಾರ ಚರ್ಚೆಯಾಗಿತ್ತು

ಈಗಾಗಲೆ ಕುರುಕ್ಷೇತ್ರ ಚಿತ್ರದ ಟೀಸರ್ ಮತ್ತು ಟ್ರೈಲರ್ ರಿಲೀಸ್ ಆಗಿದೆ. ಚಿತ್ರದಿಂದ ರಿಲೀಸ್ ಆದ ಮೊದಲ ಟೀಸರ್ ನಲ್ಲಿ ನಿಖಿಲ್ ಡಬ್ ಮಾಡಿದ್ದರು. ಆದ್ರೆ ನಂತರ ರಿಲೀಸ್ ಆದ ಟ್ರೈಲರ್ ನಲ್ಲಿ ನಿಖಿಲ್ ಧ್ವನಿ ಮಾಯವಾಗಿತ್ತು. ಇದರಿಂದ ಚಿತ್ರದಲ್ಲಿ ನಿಖಿಲ್ ಡಬ್ ಮಾಡಿಲ್ಲ ಎನ್ನುವ ಮಾತುಗಳು ಭಾರಿ ಚರ್ಚಿಯಾಗಿತ್ತು. ರವಿಚಂದ್ರನ್ ಬಿಟ್ಟರೆ ಉಳಿದೆಲ್ಲ ಕನ್ನಡ ನಟರು ಅವರವರ ಪಾತ್ರಕ್ಕೆ ಅವರೆ ಡಬ್ ಮಾಡಿದ್ದಾರೆ. ಆದ್ರೆ ನಿಖಿಲ್ ಈಗ ಡಬ್ ಮಾಡುತ್ತಿದ್ದಾರೆ.

 ಚಿತ್ರದ ಪೋಸ್ಟ್ ಪೋನ್ ಗೆ ಇದೇನಾ ಕಾರಣ?

ಚಿತ್ರದ ಪೋಸ್ಟ್ ಪೋನ್ ಗೆ ಇದೇನಾ ಕಾರಣ?

ಕುರುಕ್ಷೇತ್ರ ರಿಲೀಸ್ ತಡವಾಗುತ್ತಿರುವುದು ನಿಖಿಲ್ ಕಾರಣದಿಂದ ಎನ್ನುವ ಮಾತುಗಳು ಈ ಹಿಂದೆ ಇಂದನು ಕೇಳಿ ಬರುತ್ತಿತ್ತು. ಆದ್ರೀಗ ರಿಲೀಸ್ ಸಮಯದಲ್ಲಿ ಡಬ್ಬಿಂಗ್ ಗೆ ಹೊರಟಿರುವುದನ್ನು ನೋಡಿದ್ರೆ ಇದು ನಿಜ ಇರಬಹುದು ಎನ್ನುವ ಅನುಮಾನ ಕಾಣುತ್ತಿದೆ. ಆಗಸ್ಟ್ 2ಕ್ಕೆ ರಿಲೀಸ್ ಮಾಡಲು ಪ್ಲಾನ್ ಮಾಡಿಕೊಂಡಿದ್ದ ಚಿತ್ರತಂಡ ದಿಢೀರನೆ ಮುಂದಕ್ಕೆ ಹೋಗಿರುವ ಅಸಲಿ ಕಾರಣ ಇದೇನಾ ಎನ್ನುವ ಅನುಮಾನ ಎಲ್ಲರನ್ನು ಕಾಡುತ್ತಿದೆ.

ಆಡಿಯೋ ರಿಲೀಸ್ ಗೂ ಬಂದಿರಲ್ಲಿಲ್ಲ ನಿಖಿಲ್

ಆಡಿಯೋ ರಿಲೀಸ್ ಗೂ ಬಂದಿರಲ್ಲಿಲ್ಲ ನಿಖಿಲ್

ಕುರುಕ್ಷೇತ್ರ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲು ನಿಖಿಲ್ ಕಾಣಿಸಿಕೊಂಡಿರಲಿಲ್ಲ. ಚಿತ್ರದಲ್ಲಿ ಅಭಿನಯಿಸದ ಎಲ್ಲಾ ಕಲಾವಿದರು ಆಡಿಯೋ ರಿಲೀಸ್ ವೇದಿಕೆಮೇಲಿದ್ದರು ಆದ್ರೆ ನಿಖಿಲ್ ಗೈರು ಎದ್ದು ಕಾಣುತ್ತಿತ್ತು. ಆಡಿಯೋ ರಿಲೀಸ್ ಮಾತ್ರವಲ್ಲದೆ ಪ್ರಮೋಷನ್ ನಲ್ಲು ಭಾಗಿಯಾಗುತ್ತಿಲ್ಲ ನಿಖಿಲ್. ಚುನಾವಣೆಯ ನಂತರ ನಿಖಿಲ್ ಎಲ್ಲಿಯು ಕಾಣಿಸಿಕೊಂಡಿಲ್ಲ. ಆದ್ರಿವತ್ತು ಅಭಿಮನ್ಯು ಪಾತ್ರಕ್ಕೆ ಡಬ್ಬಿಂಗ್ ಮಾಡುವ ಮೂಲಕ ಮತ್ತೆ ದರ್ಶನ ನೀಡುತ್ತಿದ್ದಾರೆ.

More from Filmibeat

English summary
Kannada actor Nikhil Kumaraswamy is Dubbing to Abhimanyu character in Kurukshetra.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X