ಸುದೀಪ್ 'ಫ್ಯಾಂಟಮ್' ಸಿನಿಮಾಗೆ ಎಂಟ್ರಿ ಕೊಟ್ಟ ಸ್ಯಾಂಡಲ್ ವುಡ್ ನ ಖ್ಯಾತ ನಟ

Recommended Video

Sudeep's phantom movie welcome sandalwood star | SUDEEP | PHANTOM | ANUP BANDARI | SANDALWOOD

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 'ಕೋಟಿಗೊಬ್ಬ-3' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಕಿಚ್ಚನ ಕೋಟಿಗೊಬ್ಬ-3 ಸಿನಿಮಾದ ಜೊತೆಗೆ ಮತ್ತೊಂದು ಸಿನಿಮಾ ಸಖತ್ ಸದ್ದು ಮಾಡುತ್ತಿದೆ. ಹೌದು, ನಿರ್ದೇಶಕ ಅನೂಪ್ ಭಂಡಾರಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ 'ಫ್ಯಾಂಟಮ್' ಸಿನಿಮಾದಲ್ಲಿ ಕಿಚ್ಚ ನಾಯಕನಾಗಿ ಅಬ್ಬರಿಸಲಿದ್ದಾರೆ.

ಬಹುನಿರೀಕ್ಷೆಯ ಬಹುಕೋಟಿಯ 'ಫ್ಯಾಂಟಮ್' ಸಿನಿಮಾದ ಪ್ರಿ-ಪ್ರೊಡಕ್ಷನ್ ಕೆಲಸ ಭರ್ಜರಿಯಾಗಿ ನಡೆಯುತ್ತಿದೆ. ಕಿಚ್ಚ ಸುದೀಪ್ ಬಿಟ್ಟರೆ ಚಿತ್ರಕ್ಕೆ ಸ್ಟಾರ್ ಕಾಸ್ಟ್ ಇನ್ನೂ ಫೈನಲ್ ಆಗಿರಿಲ್ಲ. ಆದರೀಗ ಚಿತ್ರಕ್ಕೆ ಸ್ಯಾಂಡಲ್ ವುಡ್ ನ ಮತ್ತೊರ್ವ ನಟ ಎಂಟ್ರಿ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಅದೂ ಮತ್ಯಾರು ಅಲ್ಲ ನಟ ಅನೂಪ್ ಭಂಡಾರಿ.

ಸುದೀಪ್ ಜೊತೆ ನಿರೂಪ್ ಭಂಡಾರಿ

ಸುದೀಪ್ ಜೊತೆ ನಿರೂಪ್ ಭಂಡಾರಿ

'ಫ್ಯಾಂಟಮ್' ಸಿನಿಮಾಗೆ ನಿರೂಪ್ ಭಂಡಾರಿ ಎಂಟ್ರಿ ಕೊಡುವ ಮೂಲಕ ಮೊದಲ ಬಾರಿಗೆ ನಿರೂಪ್ ಸ್ಯಾಂಡಲ್ ವುಡ್ ನ ಸ್ಟಾರ್ ನಟ ಸುದೀಪ್ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. 'ರಂಗಿತರಂಗ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ನಿರೂಪ್ ಈಗಾಗಲೆ ಮೂರು ಸಿನಿಮಾಗಳಲ್ಲಿ ನಾಯಕನಾಗಿ ಮಿಂಚಿದ್ದಾರೆ. 'ರಾಜರಥ' ಮತ್ತು 'ಆಧಿ ಲಕ್ಷ್ಮಿ ಪುರಾಣ' ಸಿನಿಮಾದಲ್ಲಿ ಮಿಂಚಿರುವ ನಿರೂಪ್ ಈಗ 'ಫ್ಯಾಂಟಮ್' ಸಿನಿಮಾ ಸೇರಿಕೊಂಡಿದ್ದಾರೆ.

ಮೂರನೆ ಭಾರಿ ಒಂದಾಗುತ್ತಿರುವ ಅಣ್ಣ-ತಮ್ಮ

ಮೂರನೆ ಭಾರಿ ಒಂದಾಗುತ್ತಿರುವ ಅಣ್ಣ-ತಮ್ಮ

ಅನೂಪ್ ಭಂಡಾರಿ ನಿರ್ದೇಶನದ ಚಿತ್ರಗಳಲ್ಲಿ ಸಹೋದರ ನಿರೂಪ್ ಭಂಡಾರಿ ಇದ್ದೇ ಇರುತ್ತಾರೆ. ಅನೂಪ್ ನಿರ್ದೇಶನದ ರಂಗಿತರಂಗ ಮತ್ತು ರಾಜರಥ ಎರಡು ಸಿನಿಮಾಗಳಲ್ಲಿಯೂ ನಿರೂಪ್ ಹೀರೋ ಆಗಿ ಮಿಂಚಿದ್ದರು. ಈಗ 'ಫ್ಯಾಂಟಮ್' ಚಿತ್ರದ ಮೂಲಕ ಮೂರನೆ ಬಾರಿಗೆ ಒಂದಾಗುತ್ತಿದ್ದಾರೆ ಸ್ಯಾಂಡಲ್ ವುಡ್ ನ ಭಂಡಾರಿ ಬ್ರದರ್ಸ್.

ಸುದೀಪ್ ಅಕ್ಕನ ಮಗನನ್ನು ಕರೆತರುವ ಪ್ಲಾನ್ ಇತ್ತು

ಸುದೀಪ್ ಅಕ್ಕನ ಮಗನನ್ನು ಕರೆತರುವ ಪ್ಲಾನ್ ಇತ್ತು

ಅಭಿನಯ ಚಕ್ರವರ್ತಿ ಸುದೀಪ್ ಸೋದರಳಿಯ ಈ ಸಿನಿಮಾ ಮೂಲಕ ಮೊದಲ ಬಾರಿಗೆ ಬಣ್ಣ ಹಚ್ಚ ಬೇಕಿತ್ತಂತೆ. ನಿರೂಪ್ ಭಂಡಾರಿ ಜಾಗಕ್ಕೆ ಮೊದಲು ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ಅವರನ್ನು ಕರೆತರಲು ಚಿತ್ರತಂಡ ಪ್ಲಾನ್ ಮಾಡಿತ್ತು. ಆದರೆ ಕೊನೆಯದಾಗಿ ನಿರೂಪ್ ಭಂಡಾರಿ ಅವರನ್ನು ಆಯ್ಕೆ ಮಾಡಲಾಗಿದೆ. ಆದರೆ ಸಂಚಿತ್ ಹೀರೋ ಆಗಿ ಸಧ್ಯದಲ್ಲೇ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ.

2020 ರಲ್ಲಿ ಸೆಟ್ಟೇರಲಿದೆ ಸಿನಿಮಾ

2020 ರಲ್ಲಿ ಸೆಟ್ಟೇರಲಿದೆ ಸಿನಿಮಾ

ಬಹುನಿರೀಕ್ಷೆಯ ಫ್ಯಾಟಂ ಸಿನಿಮಾ ಮುಂದಿನ ವರ್ಷಾರಂಭದಲ್ಲಿ ಸೆಟ್ಟೇರುವ ಸಾದ್ಯತೆ ಇದೆ. ಕೋಟಿಗೊಬ್ಬ-3 ಚಿತ್ರೀಕರಣದಲ್ಲಿ ಸುದೀಪ್ ಈ ಸಿನಿಮಾ ಮುಗಿಸಿ ನಂತರ 'ಫ್ಯಾಂಟಮ್' ತಂಡ ಸೇರಿಕಳ್ಳಲಿದ್ದಾರೆ. ಜೊತೆಗೆ ಸಲ್ಮಾನ್ ಖಾನ್ ಜೊತೆ ತೆರೆಹಂಚಿಕೊಂಡಿರುವ ದಬಾಂಗ್-3 ಸಿನಿಮಾ ಇದೆ ತಿಂಗಳು 20ಕ್ಕೆ ತೆರೆಗೆ ಬರುತ್ತಿದೆ. ಇದೆಲ್ಲ ಮುಗಿದ ಬಳಿಕ 'ಫ್ಯಾಂಟಮ್' ಸಿನಿಮಾ ಸೆಟ್ಟೇರಲಿದೆ.

More from Filmibeat

English summary
Kannada actor Nirup Bhandari entered to Sudeep starrer Phantom movie, This movie will directed By Anup Bhandari.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X