For Quick Alerts
  ALLOW NOTIFICATIONS  
  For Daily Alerts

  ಕಾಂಗ್ರೆಸ್-ಜೆಡಿಎಸ್ ಅಪವಿತ್ರ ಮೈತ್ರಿ ವಿರುದ್ಧ ನಟ ಜಗ್ಗೇಶ್ ಆಕ್ರೋಶ

  By Harshitha
  |

  ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ವಿಧಾನ ಸೌಧದ ಮೆಟ್ಟಿಲುಗಳ ಮೇಲೆ ಇಂದು ಸಂಜೆ 4.30 ಕ್ಕೆ ಎಚ್.ಡಿ.ಕುಮಾರಸ್ವಾಮಿ ಅವರ ಪದಗ್ರಹಣ ನಡೆಯಲಿದೆ.

  ಕಾಂಗ್ರೆಸ್ ಹಾಗೂ ಜೆಡಿಎಸ್ ನವರ ಅಪವಿತ್ರ ಮೈತ್ರಿಯನ್ನು ವಿರೋಧಿಸಿ ಭಾರತೀಯ ಜನತಾ ಪಕ್ಷ ಇವತ್ತು ರಾಜ್ಯಾದ್ಯಂತ ಕರಾಳ ದಿನ ಆಚರಣೆ ಮಾಡುತ್ತಿದೆ. ನಗರದಲ್ಲಿ ಬಿಜೆಪಿ ಪಕ್ಷದ ನಾಯಕರು, ಕಾರ್ಯಕರ್ತರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

  ಈ ವೇಳೆ ಮಾತಿಗಳಿದ ನಟ ಹಾಗೂ ರಾಜಕಾರಣಿ ಜಗ್ಗೇಶ್, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಮಾತಿನಭರದಲ್ಲಿ ಭಾವೋದ್ವೇಗಕ್ಕೆ ಒಳಗಾದ ಜಗ್ಗೇಶ್ ''ಇನ್ನು ಮೂರು ತಿಂಗಳಲ್ಲಿ ಮುಖಭಂಗ ಆಗಲಿಲ್ಲ ಅಂದ್ರೆ ಬೃಂದಾವನದಲ್ಲಿ ರಾಯರು ಇಲ್ಲ'' ಎಂದರು. ಮುಂದೆ ಓದಿರಿ...

  ಅಪವಿತ್ರ ಮೈತ್ರಿ ವಿರುದ್ಧ ಜಗ್ಗೇಶ್ ಗರಂ

  ಅಪವಿತ್ರ ಮೈತ್ರಿ ವಿರುದ್ಧ ಜಗ್ಗೇಶ್ ಗರಂ

  ''ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಇನ್ನು ಮೂರು ತಿಂಗಳಲ್ಲಿ ಮುಖಭಂಗ ಆಗಲಿಲ್ಲ ಅಂದ್ರೆ ಬೃಂದಾವನದಲ್ಲಿ ರಾಯರು ಇಲ್ಲ ಎಂಬ ಮಾತನ್ನ ನಾನು ಹೇಳಲು ಇಷ್ಟ ಪಡುತ್ತೇನೆ. ಯಾಕಂದ್ರೆ, ಸರ್ಕಾರ ರಚನೆ ಮಾಡುವ ಮುಂಚೆ ಕಾಂಗ್ರೆಸ್ಸಿಗರು ಯಾವ ರೀತಿಯಾದ ಪದಪುಂಜಗಳನ್ನು ಜೆಡಿಎಸ್ ಮೇಲೆ ಪ್ರಯೋಗ ಮಾಡಿದ್ದರು. ಜೆಡಿಎಸ್ ನವರು ಕೂಡ ಕಾಂಗ್ರೆಸ್ ವಿರುದ್ಧ ತೊಡೆ ತಟ್ಟಿ ನಿಂತಿದ್ದನ್ನ ಎಲ್ಲರೂ ನೋಡಿದ್ದಾರೆ. ಈಗ ಯಾವ ಮಾನ ಮರ್ಯಾದೆ ಇಟ್ಟುಕೊಂಡು ಅಧಿಕಾರಕ್ಕಾಗಿ ಎಲ್ಲವನ್ನೂ ತ್ಯಜಿಸಿ, ಒಟ್ಟಾಗಿ ಬಿಟ್ಟರೆ ಜನ ಮಾತ್ರ ಆಶೀರ್ವಾದ ಮಾಡುವುದಿಲ್ಲ'' ಎಂದು ನಟ ಜಗ್ಗೇಶ್ ತಮ್ಮ ಆಕ್ರೋಶ ಹೊರಹಾಕಿದರು.

  ಗೂಗಲ್ ನಲ್ಲಿ ರಾಧಿಕಾ ಕುಮಾರಸ್ವಾಮಿ ಮೇಲೆ ಎಲ್ಲರ ಕಣ್ಣು.!ಗೂಗಲ್ ನಲ್ಲಿ ರಾಧಿಕಾ ಕುಮಾರಸ್ವಾಮಿ ಮೇಲೆ ಎಲ್ಲರ ಕಣ್ಣು.!

  ಈ ವೇದಿಕೆಯಿಂದಲೇ ಶುರುವಾಗಲಿ...

  ಈ ವೇದಿಕೆಯಿಂದಲೇ ಶುರುವಾಗಲಿ...

  ''ನಾಡಿನ ಜನರೆಲ್ಲರೂ ನಿಮ್ಮನ್ನ ಮಕಾಡೆ ಮಲಗಿಸಿ, ಮನೆಗೆ ಕಳುಹಿಸುವಂತಹ ಕೆಲಸವನ್ನು ಮಾಡುವುದಕ್ಕೆ ನಾಂದಿ ಈ ವೇದಿಕೆಯಿಂದಲೇ ಶುರುವಾಗಲಿ. ಸುಮಾರು 16 ಜಿಲ್ಲೆಗಳಲ್ಲಿ ಒಂದೇ ಒಂದು ಸೀಟ್ ನ ತೆಗೆದುಕೊಳ್ಳಲು ಆಗದೇ ಇರುವಂಥವರು ಈಗ ಸರ್ಕಾರ ಮಾಡುವ ಆಸೆಯಲ್ಲಿದ್ದಾರೆ. ಆದ್ರೆ, 105 ಸೀಟ್ ಪಡೆದಿರುವ ಯಡಿಯೂರಪ್ಪ ಸರ್ಕಾರ ಮಾಡುವುದರಲ್ಲಿ ಏನು ತಪ್ಪು ಎಂಬ ಜನರ ಪ್ರಶ್ನೆಯೇ ನಮ್ಮ ಪ್ರಶ್ನೆ'' ಅಂತ ಜಗ್ಗೇಶ್ ಕಿಡಿಕಾರಿದರು.

  ವಿಧಾನಸೌಧದಲ್ಲಿ ಪ್ರಮಾಣವಚನ: ಯಾರೂ ಪೂರ್ಣಾವಧಿ ಆಡಳಿತ ನಡೆಸಿಲ್ಲ!

  ನಾಯಿ ನರಿಗಳೆಲ್ಲ ಒಂದಾಗಿವೆ

  ನಾಯಿ ನರಿಗಳೆಲ್ಲ ಒಂದಾಗಿವೆ

  ''ಜನರ ಆಸೆಯೇ ನಮ್ಮ ಆಸೆ. ಕಾದು ನೋಡಿ... ನಿಮ್ಮ ತಂತ್ರಕ್ಕೆ ನಾವೂ ಕೂಡ ಪ್ರತಿ ತಂತ್ರ ಮಾಡಿ ನಿಮ್ಮನ್ನ ಮಕಾಡೆ ಮಲಗಿಸುತ್ತೇವೆ. ರಾಜ್ಯದಲ್ಲಿ ಮೋದಿಯೆಂಬ ಸಿಂಹವನ್ನು ಅಡ್ಡಗಟ್ಟಲು, ನಾಯಿ-ನರಿಗಳೆಲ್ಲ ಒಂದಾಗಿವೆ'' - ಜಗ್ಗೇಶ್.

  ಭ್ರಮೆಯಲ್ಲಿದ್ದಾರೆ.!

  ಭ್ರಮೆಯಲ್ಲಿದ್ದಾರೆ.!

  ''ನಿರುದ್ಯೋಗಿ ಸಂಸ್ಥೆಗಳು ಮೋದಿಯವರ ಹೊಡೆತಗಳನ್ನು ತಾಳಲಾರದೆ ಮೂಲೆಗುಂಪಾದಂತಹ ಎಲ್ಲರೂ ಇವತ್ತು ಒಂದು ವೇದಿಕೆ ಸೇರಿ ಮೋದಿಯನ್ನು ಮಣಿಸಲು ನಾವಿದ್ದೇವೆ ಎಂಬ ಭ್ರಮೆಯಲ್ಲಿ ಬಂದು ನಿಂತಿದ್ದಾರೆ'' - ಜಗ್ಗೇಶ್

  English summary
  Kannada Actor, BJP Politician Jaggesh slams Congress JDS Alliance.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X