ಕ್ಯಾಪ್ಟನ್ ಸುದೀಪ್ ತುಂಬಾನೇ ಸ್ಟ್ರಿಕ್ಟ್: ಕಿಚ್ಚನನ್ನು ಕಂಡರೆ ತಂಡದಲ್ಲಿರುವವರಿಗೆ ನಡುಕ.!

Recommended Video

ಶಿಸ್ತಿಗೆ ಮಾದರಿ ಕಿಚ್ಚ ಸುದೀಪ್ | Filmibeat Kannada

ಕಿಚ್ಚ ಸುದೀಪ್... ಅದ್ಭುತ ನಟ, ಪ್ರತಿಭಾವಂತ ನಿರ್ದೇಶಕ ಮಾತ್ರ ಅಲ್ಲ, ಉತ್ತಮ ಕ್ರಿಕೆಟಿಗ ಕೂಡ ಹೌದು. ಸ್ಯಾಂಡಲ್ ವುಡ್ ತಾರೆಯರನ್ನೆಲ್ಲಾ ಕ್ರಿಕೆಟ್ ಆಡಲು ಒಂದೇ ಸೂರಿನಡಿ ಕರೆ ತಂದವರು ಇದೇ ಸುದೀಪ್.

ಸಿಸಿಎಲ್ (ಸೆಲೆಬ್ರಿಟಿ ಕ್ರಿಕೆಟ್ ಲೀಗ್) ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ನಮ್ಮ ಕಿಚ್ಚ ಸುದೀಪ್ ಕ್ಯಾಪ್ಟನ್. ಸಿಸಿಎಲ್ ನಲ್ಲಿ ಎರಡು ಬಾರಿ ಕರ್ನಾಟಕ ಬುಲ್ಡೋಜರ್ಸ್ ಚಾಂಪಿಯನ್ ಆಗುವುದಕ್ಕೆ 'ಅಭಿನಯ ಚಕ್ರವರ್ತಿ' ಸುದೀಪ್ ಕಾರಣ. ಅಷ್ಟೇ ಅಲ್ಲ, ಸ್ಯಾಂಡಲ್ ವುಡ್ ನಲ್ಲಿ ನಡೆಯುತ್ತಿರುವ ಕನ್ನಡ ಚಲನಚಿತ್ರ ಕಪ್ (ಕೆಸಿಸಿ) ಗೆ ಇದೇ ಸುದೀಪ್ ರೂವಾರಿ.

ತೆರೆಮೇಲೆ ಸೂಪರ್ ಸ್ಟೈಲಿಶ್ ಆಗಿ ಕಾಣುವ ಸುದೀಪ್, ತಮ್ಮ ತಂಡದ ಕ್ರಿಕೆಟಿಗರಿಗೆ ಮಾತ್ರ ಟೆರರ್. ಟೀಮ್ ಪಾಲಿಗೆ ಸುದೀಪ್ ಸ್ಟ್ರಿಕ್ಟ್ ಕ್ಯಾಪ್ಟನ್.

ಕ್ಯಾಪ್ಟನ್ ಆಗಿ ಸುದೀಪ್ ಎಷ್ಟು ಸ್ಟ್ರಿಕ್ಟ್ ಅನ್ನೋದನ್ನ ನಟ ಹಾಗೂ ಕ್ರಿಕೆಟ್ ಆಟಗಾರ ಪ್ರದೀಪ್ ಬಾಯಿಬಿಟ್ಟಿದ್ದಾರೆ. ಮುಂದೆ ಓದಿರಿ....

'ಮಜಾ ಟಾಕೀಸ್'ನಲ್ಲಿ ಕೆಸಿಸಿ ಆಟಗಾರರು

'ಮಜಾ ಟಾಕೀಸ್'ನಲ್ಲಿ ಕೆಸಿಸಿ ಆಟಗಾರರು

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ಕೆಸಿಸಿ ಪಂದ್ಯಾವಳಿಯ ನಟರು/ಆಟಗಾರರು ಅತಿಥಿಗಳಾಗಿ ಭಾಗವಹಿಸಿದ್ದರು. ಈ ವೇಳೆ ಕ್ಯಾಪ್ಟನ್ ಸುದೀಪ್ ಬಗ್ಗೆ ನಟ ಪ್ರದೀಪ್ ಮಾತನಾಡಿದರು.

ಸೃಜನ್ ಕೇಳಿದ ಪ್ರಶ್ನೆ

ಸೃಜನ್ ಕೇಳಿದ ಪ್ರಶ್ನೆ

''ಕ್ರಿಕೆಟ್ ಮ್ಯಾಚ್ ಪ್ರ್ಯಾಕ್ಟೀಸ್ ಗೆ ಕರೆಕ್ಟ್ ಟೈಮ್ ಗೆ ಹೋಗುತ್ತೀರಲ್ಲಾ.. ಅದಕ್ಕೆ ಕಾರಣ ಏನು.?'' ಎಂದು ನಟ ಪ್ರದೀಪ್ ಗೆ ಸೃಜನ್ ಲೋಕೇಶ್ ಪ್ರಶ್ನಿಸಿದರು. ಅದಕ್ಕೆ ನಟ ಪ್ರದೀಪ್ ಕೊಟ್ಟ ಉತ್ತರ ಹೀಗಿತ್ತು.

ಪ್ರದೀಪ್ ಕೊಟ್ಟ ಉತ್ತರ ಏನು.?

ಪ್ರದೀಪ್ ಕೊಟ್ಟ ಉತ್ತರ ಏನು.?

''ಸಿಸಿಎಲ್ ಮೊದಲ ಮತ್ತು ಎರಡನೇ ಆವೃತ್ತಿಯಲ್ಲಿ ಫೈನಲ್ಸ್ ಗೆ ಬಂದು ಸೋತ್ವಿ. ಅದರಲ್ಲೂ ಎರಡನೇ ಸೀಸನ್ ನಲ್ಲಿ ಒಂದು ರನ್ ನಿಂದ ಸೋತ್ವಿ. ಸಿಕ್ಕಾಪಟ್ಟೆ Frustration ಇತ್ತು. ಮುಂದಿನ ಬಾರಿ ಗೆಲ್ಲಲೇಬೇಕು ಅಂತ ನಿರ್ಧಾರ ಮಾಡಿದ್ವಿ. ಸುದೀಪ್ ಸರ್ ತುಂಬಾನೇ ಸ್ಟ್ರಿಕ್ಟ್ ಆಗಿದ್ರು'' - ನಟ ಪ್ರದೀಪ್

ಯಾರೂ ಧೂಮ್ರಪಾನ ಮಾಡುವ ಹಾಗಿಲ್ಲ

ಯಾರೂ ಧೂಮ್ರಪಾನ ಮಾಡುವ ಹಾಗಿಲ್ಲ

''ಟೀಮ್ ನಲ್ಲಿ ಯಾರೂ ಧೂಮ್ರಪಾನ, ಮದ್ಯಪಾನ ಮಾಡುವ ಹಾಗಿಲ್ಲ. ರಾತ್ರಿ ನಾವೆಲ್ಲ ರೂಮ್ ನಲ್ಲಿ ಇರುವಾಗ, ಕಾರಿಡಾರ್ ನಲ್ಲಿ ನಡೆದಾಡುತ್ತಿದ್ದರು. ಯಾರಾದರೂ ಲೈಟ್ ಆನ್ ಮಾಡಿದ್ದರೆ, ಬಾಗಿಲು ತಟ್ಟಿ ಬೈದು ಮಲಗಿಸುತ್ತಿದ್ದರು. ರಾತ್ರಿ ಹತ್ತು ಗಂಟೆ ಮೇಲೆ ಯಾರೂ ಮಾತನಾಡುವ ಹಾಗಿಲ್ಲ. ಹೊರಗೆ ಬರುವ ಹಾಗಿಲ್ಲ. ಅಷ್ಟು ಸ್ಟ್ರಿಕ್ಟ್ ಆಗಿ ಡಿಸಿಪ್ಲಿನ್ಡ್ ಆಗಿ ಇಟ್ಟಿದ್ದರು ನಮ್ಮನ್ನ ಆವಾಗ'' - ನಟ ಪ್ರದೀಪ್

ಒಂದು ನಿಮಿಷ ಲೇಟ್ ಆದರೂ...

ಒಂದು ನಿಮಿಷ ಲೇಟ್ ಆದರೂ...

''ಬೆಳಗ್ಗೆ 5.30 ಗೆ ನಾವು ಪ್ರ್ಯಾಕ್ಟೀಸ್ ಗೆ ರಿಪೋರ್ಟ್ ಆಗಬೇಕು. ಅಪ್ಪಿ ತಪ್ಪಿ 5.31 ಗೆ ಬಂದರೂ, ಅವತ್ತು ಪ್ರ್ಯಾಕ್ಟೀಸ್ ನಲ್ಲಿ ಬೌಲಿಂಗ್ ಇಲ್ಲ, ಬ್ಯಾಟಿಂಗ್ ಇಲ್ಲ, ಫೀಲ್ಡಿಂಗ್ ಇಲ್ಲ. ವಾಪಸ್ ಹೋಗಬೇಕು. ನಮ್ಮನ್ನ ಒಳಗೆ ಸೇರಿಸುತ್ತಿರಲಿಲ್ಲ.! ಒಟ್ನಲ್ಲಿ 5.29 ಒಳಗೆ ರಿಪೋರ್ಟ್ ಆಗಬೇಕು'' - ನಟ ಪ್ರದೀಪ್

ಶ್ರದ್ಧೆಯಿಂದ ಗೆಲುವು ಸಾಧ್ಯ

ಶ್ರದ್ಧೆಯಿಂದ ಗೆಲುವು ಸಾಧ್ಯ

''ಅವರು 5 ಗಂಟೆಗೆ ಬಂದು ಅಟೆಂಡೆನ್ಸ್ ಬುಕ್ ಹಿಡಿದುಕೊಂಡು ಕೂರುತ್ತಿದ್ದರು. ಯಾರು ರೆಗ್ಯುಲರ್ ಆಗಿ ಪ್ರ್ಯಾಕ್ಟೀಸ್ ಗೆ ಬರ್ತಾರೆ, ಅವರಿಗೆ ಫೋನ್ ಕೊಡ್ತೀನಿ ಅಂತ ಹೇಳಿದ್ದರು. ನಮಗೆ ಫೋನ್ ಗಿಂತ ಪ್ರೀತಿ ಮುಖ್ಯ. 5.29 ಆಯ್ತು ಅಂದ್ರೆ ಕಾರ್ ನ ಸರಿಯಾಗಿ ನಿಲ್ಲಿಸದೇ, ಅವರ ಮುಂದೆ ಮೊದಲು ಹೋಗಿ ಹಾಜರಿ ಹಾಕಿ ಬರ್ತಿದ್ವಿ. ಸಾರಾಂಶ ಏನು ಅಂದ್ರೆ, ಆ ವರ್ಷ ನಾವು ಸಿ.ಸಿ.ಎಸ್ ಗೆದ್ವಿ. ಶ್ರದ್ಧೆಯಿಂದ ಗೆಲುವು ಸಾಧ್ಯ'' - ನಟ ಪ್ರದೀಪ್

More from Filmibeat

English summary
Kannada Actor Pradeep speaks about CCL Captain Kiccha Sudeep.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X