For Quick Alerts
  ALLOW NOTIFICATIONS  
  For Daily Alerts

  ವಿದೇಶದಲ್ಲಿ ಜಾಲಿ ಮಾಡುತ್ತಿರುವ ಪ್ರಜ್ವಲ್ ದೇವರಾಜ್ ದಂಪತಿ

  |

  ನಟ ಪ್ರಜ್ವಲ್ ದೇವರಾಜ್ ಮತ್ತು ಪತ್ನಿ ರಾಗಿಣಿ ಚಂದ್ರನ್ ಇಬ್ಬರು ಸಿನಿಮಾದಿಂದ ಕೊಂಚ ಬ್ರೇಕ್ ತೆಗೆದುಕೊಂಡು ವಿದೇಶ ಪ್ರವಾಸ ಮಾಡುತ್ತಿದ್ದಾರೆ. ವಿದೇಶದ ಸುಂದರ ತಾಣಗಳಲ್ಲಿ ಸುತ್ತಾಡುತ್ತಿರುವ ಸ್ಯಾಂಡಲ್ ವುಡ್ ನ ಈ ಕ್ಯೂಟ್ ಜೋಡಿ ಒಂದಿಷ್ಟು ಫೋಟೋಗಳನ್ನ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

  ಪ್ರಜ್ವಲ್ ಮತ್ತು ಪತ್ನಿ ರಾಗಿಣಿ ಇಬ್ಬರು ಇಟಲಿ ಮತ್ತು ಪೋಲೆಂಡ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುತ್ತಾಡುತ್ತಿದ್ದಾರೆ. ಪ್ರತಿ ವರ್ಷ ಬೇಸಿಗೆಯ ರಜೆಯಲ್ಲಿ ಪ್ರಜ್ವಲ್ ವಿದೇಶಿ ಪ್ರವಾಸ ಕೈಗೊಳ್ಳುತ್ತಾರಂತೆ. ಬಿಸಿಲಿನ ತೀವ್ರತೆ ತಪ್ಪಿಸಿಕೊಂಡು ಕೆಲದಿನಗಳ ಕಾಲ ವಿದೇಶದ ಸುಂದರ ತಾಣಗಳನ್ನು ಸುತ್ತಾಗಿ ಜಾಲಿ ಮಾಡಿ ಬರುತ್ತಾರಂತೆ.

  ಲಾಯರ್ ಆದ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ

  ಈ ಬಾರಿ ಪತ್ನಿ ರಾಗಿಣಿ ಜೊತೆ 10 ದಿನಗಳ ಇಟಲಿ ಪ್ರವಾಸಕ್ಕೆ ತೆರಳಿರುವ ಪ್ರಜ್ವಲ್ ಪತ್ನಿ ಜೊತೆ ತಹರೇವಾರಿ ಫೋಟೋಗಳನ್ನು ಅಪ್ ಲೋಡ್ ಮಾಡಿದ್ದಾರೆ. ಈ ಕ್ಯೂಟ್ ಜೋಡಿಯ ಸುಂದರ ಫೋಟೋಗಳಿಗೆ ಅಭಿಮಾನಿಗಳಿಂದ ಸಾಕಷ್ಟು ಲೈಕ್ಸ್ ಮತ್ತು ಕಮೆಂಟ್ ಗಳು ಹರಿದುಬರುತ್ತಿವೆ.

  ವಿ.ವಿ.ಪುರಂನಲ್ಲಿ ಬಾದಾಮಿ ಹಾಲು ಮಾರಿದ ಪ್ರಜ್ವಲ್ ದೇವರಾಜ್

  ಪ್ರಜ್ವಲ್ ಕೈಯಲ್ಲಿ ಸದ್ಯ ಸಾಲು ಸಾಲು ಸಿನಿಮಾಗಳಿವೆ. 'ಇನ್ಸ್ ಪೆಕ್ಟರ್ ವಿಕ್ರಮ್', 'ಜೆಂಟಲ್ ಮ್ಯಾನ್', 'ಅರ್ಜುನ್ ಗೌಡ' ಸೇರಿದಂತೆ ಸಾಕಷ್ಟು ಸಿನಿಮಾಗಳಿವೆ. ಇನ್ನು ಪತ್ನಿ ರಾಗಿಣಿ ಚಂದ್ರನ್ ಕೂಡ ಮೊದಲ ಬಾರಿಗೆ ನಾಯಕಿಯಾಗಿ 'ಲಾ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಪುನೀತ್ ರಾಜ್ ಕುಮಾರ್ ನಿರ್ಮಾಣದ ಪಿ ಆರ್ ಕೆ ಪ್ರೊಡಕ್ಷನ್ ನಲ್ಲಿ ಮೂಡಿಬಂದಿರುವ ಸಿನಿಮಾ.

  English summary
  Kannada actor Prajwal Devaraj and his wife Ragini enjoying in Italy for summer vacation. Their trip photos are viral in social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X