ಎರಡು ಶೇಡ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಪ್ರಜ್ವಲ್ ದೇವರಾಜ್

ಸ್ಯಾಂಡಲ್ ವುಡ್ ನ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರ್ ಬಳಿ ಸಾಲು ಸಾಲು ಸಿನಿಮಾಗಳಿವೆ. ಐದಾರು ಸಿನಿಮಾಗಳಲ್ಲಿ ಬ್ಯುಸಿ ಇರುವ ಪ್ರಜ್ವಲ್ ಈಗ ಮತ್ತೊಂದು ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. 'ಜಂಟಲ್ ಮೆನ್', 'ಇನ್ಸ್ ಪೆಕ್ಟರ್ ವಿಕ್ರಮ್', 'ರುದಿರಾ' ಹಾಗೂ ಇನ್ನು ಹೆಸರಿಡದ ಪಿಸಿ ಶೇಖರ್ ನಿರ್ದೇಶನದ ಚಿತ್ರದಲ್ಲಿ ಪ್ರಜ್ವಲ್ ಬ್ಯುಸಿಯಾಗಿದ್ದಾರೆ.

ಕೈತುಂಬ ಸಿನಿಮಾಗಳಿದ್ದರು ಈಗ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಪ್ರಜ್ವಲ್ ಲೈಫ್ ಜೊತೆ ಒಂದು ಸೆಲ್ಫಿ ಚಿತ್ರದ ನಂತರ ಮತ್ತೆ ತೆರೆ ಮೇಲೆ ಬಂದಿಲ್ಲ. ಪ್ರಜ್ವಲ್ ಸಿನಿಮಾಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಒಮ್ಮೆಗೆ ಧಮಾಕ ನೀಡಲಿದ್ದಾರೆ ಪ್ರಜ್ವಲ್.

ಇತ್ತೀಚಿಗಷ್ಟೆ ರಿಲೀಸ್ ಆದ 'ಡಾಟರ್ ಆಫ್ ಪಾರ್ವತಮ್ಮ' ಚಿತ್ರ ನಿರ್ಮಿಸಿದ್ದ ಶಶಿಧರ್ ನಿರ್ಮಾಣದ ಚಿತ್ರದಲ್ಲಿ ಪ್ರಜ್ವಲ್ ನಾಯಕನಾಗಿ ಮಿಂಚಲಿದ್ದಾರೆ. ಚಿತ್ರಕ್ಕೆ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಾಕಷ್ಟು ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸಮಾಡಿದ್ದ ಕುಮಾರ್ ಈಗ ಪೂರ್ಣ ಪ್ರಮಾಣ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕುಮಾರ್ ಈ ಹಿಂದೆ ಶಿವರಾಜ್ ಕುಮಾರ್ ಗೆ ಚಿತ್ರ ನಿರ್ದೇಶನ ಮಾಡಬೇಕಿತ್ತು. ಆದ್ರೆ ಕಾರಣಾಂತರಗಳಿಂದ ಸಾಧ್ಯವಾಗಿರಲ್ಲಿಲ್ಲ.

Kannada actor Prajwal Devaraj is signing a new film and Directed by Kumar

ಅಂದ್ಹಾಗೆ ಚಿತ್ರದಲ್ಲಿ ಪ್ರಜ್ವಲ್ ಅವರು ಎರಡು ಶೇಡ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಪ್ರಜ್ವಲ್ ಗೋಸ್ಕರವೆ ತಯಾರಿಸಿದ ಕಥೆ ಇದಾಗಿದೆಯಂತೆ. ಈ ಚಿತ್ರದಲ್ಲಿ ಪ್ರಜ್ವಲ್ ಅವರ ಲುಕ್ ಸಂಪೂರ್ಣವಾಗಿ ಭಿನ್ನವಾಗಿರಲಿದೆಯಂತೆ. ಸದ್ಯ ಚಿತ್ರದ ಬಗ್ಗೆ ಹೆಚ್ಚೇನು ಬಿಟ್ಟುಕೊಡದ ಚಿತ್ರತಂಡ ಟೈಟಲ್ ಲಾಂಚ್ ಗೆ ದೊಡ್ಡ ಕಾರ್ಯಕ್ರಮ ಮಾಡಿ ನಂತರ ಒಂದಿಷ್ಟು ಮಾಹಿತಿಯನ್ನು ಬಹಿರಂಗ ಪಡಿಸಲಿದೆಯಂತೆ.

More from Filmibeat

English summary
Kannada actor Prajwal Devaraj is signing a new film. Directed by Kumar. Untitled as yet the new film will mark the directorial debut of Kumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X