ನವ ಬಾಳಿಗೆ ಕಾಲಿಟ್ಟ ಪ್ರಜ್ವಲ್ ದೇವರಾಜ್-ರಾಗಿಣಿ

By Harshitha

ಸ್ಯಾಂಡಲ್ ವುಡ್ ನ ದಿ ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ ಆಗಿದ್ದ ಪ್ರಜ್ವಲ್ ದೇವರಾಜ್ ಇಂದು ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ತಮ್ಮ ದೀರ್ಘಕಾಲದ ಗೆಳತಿ ರಾಗಿಣಿ ಚಂದ್ರನ್ ಜೊತೆ ಹೊಸ ಬಾಳಿಗೆ ಅಡಿ ಇಟ್ಟಿದ್ದಾರೆ.

ಇಂದು ಬೆಳಗ್ಗೆ 10.30 ರಿಂದ 12 ಗಂಟೆ ವರೆಗೆ ಇದ್ದ ಶುಭ ಧನುರ್ ಲಗ್ನದಲ್ಲಿ ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ಚಂದ್ರನ್ ಹಸೆ ಮಣೆ ಏರಿದರು. 11.05 ರ ಸುಮಾರಿಗೆ ರಾಗಿಣಿ ಚಂದ್ರನ್ ರವರ ಕುತ್ತಿಗೆಗೆ ಪ್ರಜ್ವಲ್ ದೇವರಾಜ್ ಮಾಂಗಲ್ಯಧಾರಣೆ ಮಾಡಿದರು. [ಪ್ರಜ್ವಲ್ ದೇವರಾಜ್ ಮನದನ್ನೆ ರಾಗಿಣಿ ಚಂದ್ರನ್ ಕುರಿತು...]

prajwal-devaraj-marriage

ಇಂದ್ರಲೋಕವೇ ಧರೆಗಿಳಿದಷ್ಟು ಅದ್ದೂರಿಯಾಗಿ, ಅಷ್ಟೇ ಸಾಂಪ್ರದಾಯಿಕವಾಗಿ ಡೈನಾಮಿಕ್ ಸ್ಟಾರ್ ದೇವರಾಜ್ ಪುತ್ರ ಪ್ರಜ್ವಲ್-ರಾಗಿಣಿ ಚಂದ್ರನ್ ಮದುವೆ ನಡೆಯಿತು. ['ರೀಲ್' ಹೀರೋ ಪ್ರಜ್ವಲ್ ದೇವರಾಜ್ 'ರಿಯಲ್' ಪ್ರೇಮ್ ಕಹಾನಿ]

ಅಯ್ಯರ್ ಮತ್ತು ಒಕ್ಕಲಿಗ ಸಂಪ್ರದಾಯದಂತೆ ಮದುವೆ ನೆರವೇರಿತು. ಗಣಪತಿ ಪೂಜೆಯೊಂದಿಗೆ ಇಂದು ಬೆಳಗ್ಗೆ ಶಾಸ್ತ್ರಗಳು ಪ್ರಾರಂಭವಾಗಿ, ಶಾಸ್ತ್ರೋಕ್ತವಾಗಿ ವರಪೂಜೆ, ಕಂಕಣ ಶಾಸ್ತ್ರ ಮತ್ತು ಉಯ್ಯಾಲೆ ಶಾಸ್ತ್ರ ನಡೆಯಿತು.

prajwal-devaraj-marriage

ಮದುವೆ ಪ್ರಯುಕ್ತ ತಂದೆ ದೇವರಾಜ್ ಉಡುಗೊರೆಯಾಗಿ ನೀಡಿದ್ದ BMW 520D ಸೀರೀಸ್ ಕಾರ್ ನಲ್ಲಿ ಪ್ರಜ್ವಲ್ ದೇವರಾಜ್ ಮದುವೆ ಮಂಟಪಕ್ಕೆ ಆಗಮಿಸಿದರು. [ಚಿತ್ರಗಳು : ಪ್ರಜ್ವಲ್ ದೇವರಾಜ್ ಮದುವೆ ತಯಾರಿ ಸಂಭ್ರಮ]

ಬೆಂಗಳೂರಿನ ಅರಮನೆ ಮೈದಾನದ 'ದಿ ಗ್ರ್ಯಾಂಡ್ ಕೆಸಲ್'ನಲ್ಲಿ ಪ್ರಜ್ವಲ್ ದೇವರಾಜ್-ರಾಗಿಣಿ ಚಂದ್ರನ್ ಮದುವೆ ನಡೆಯುತ್ತಿದೆ. ಸಂಜೆ 7 ಗಂಟೆಗೆ ಆರತಕ್ಷತೆ ಕಾರ್ಯಕ್ರಮ ಪ್ರಾರಂಭವಾಗಲಿದೆ.

More from Filmibeat

English summary
Kannada Actor Prajwal Devaraj has tied knot with his long-time girlfriend Ragini Chandran today (October 25th) in Palace Grounds, Bengaluru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X