For Quick Alerts
  ALLOW NOTIFICATIONS  
  For Daily Alerts

  'ಸಲಾರ್'ನಲ್ಲಿ ನಟಿಸುತ್ತಿರುವ ಪ್ರಮೋದ್, ಪ್ರಭಾಸ್ ಬಗ್ಗೆ ಹೇಳಿದ್ದು ಹೀಗೆ

  |

  'ರತ್ನನ್ ಪ್ರಪಂಚ', 'ಪ್ರೀಮಿಯರ್ ಪದ್ಮಿನಿ' ಇನ್ನೂ ಕೆಲವು ಸಿನಿಮಾಗಳ ಮೂಲಕ ಗಮನ ಸೆಳೆದಿದ್ದ ನಟ ಪ್ರಮೋದ್‌ರ ನಟನಾ ಪ್ರತಿಭೆಗೆ ತಕ್ಕ ಪಾತ್ರ ಅವರನ್ನು ಅರಸಿ ಬಂದಿದೆ. ಪ್ರಮೋದ್ ಈಗ ಪ್ರಭಾಸ್‌ ಜೊತೆ ಬಹುಕೋಟಿ ಬಜೆಟ್‌ ಸಿನಿಮಾ 'ಸಲಾರ್‌'ನಲ್ಲಿ ನಟಿಸುತ್ತಿದ್ದಾರೆ.

  'ಸಲಾರ್' ಸಿನಿಮಾದಲ್ಲಿ ಪ್ರಮೋದ್ ನಟಿಸುತ್ತಾರೆಂಬ ಸುದ್ದಿ ಮೊದಲೇ ಕೇಳಿ ಬಂದಿತ್ತಾದರೂ ಅದು ಎಷ್ಟರ ಮಟ್ಟಿಗೆ ಪ್ರಮುಖ ಪಾತ್ರವಾಗಿರಲಿದೆ, ಯಾವಾಗ ಚಿತ್ರೀರಕಣ ಎಂಬಿತ್ಯಾದಿ ಮಾಹಿತಿಗಳು ಹೊರಬಿದ್ದಿರಲಿಲ್ಲ. ಇದೀಗ 'ಸಲಾರ್' ನಿರ್ದೇಶಕ ಪ್ರಶಾಂತ್ ನೀಲ್ ಅವರೇ ಪ್ರಮೋದ್ ನಟನೆಯನ್ನು ಹೊಗಳಿದ್ದಲ್ಲದೆ, ಅವರಿಗಾಗಿಯೇ ಪಾತ್ರವನ್ನು ಇನ್ನಷ್ಟು ದೊಡ್ಡದು ಮಾಡಿದ್ದಾಗಿ ಹೇಳಿದ್ದಾರೆ.

  'ರತ್ನನ್ ಪ್ರಪಂಚ' ಖ್ಯಾತಿಯ ಪ್ರಮೋದ್‌ಗೆ ಖುಲಾಯಿಸಿದ ಅದೃಷ್ಟ; ಪ್ರಶಾಂತ್ ನೀಲ್ ಚಿತ್ರಕ್ಕೆ ಆಯ್ಕೆ!'ರತ್ನನ್ ಪ್ರಪಂಚ' ಖ್ಯಾತಿಯ ಪ್ರಮೋದ್‌ಗೆ ಖುಲಾಯಿಸಿದ ಅದೃಷ್ಟ; ಪ್ರಶಾಂತ್ ನೀಲ್ ಚಿತ್ರಕ್ಕೆ ಆಯ್ಕೆ!

  ಪ್ರಮೋದ್‌, ಪ್ರಸ್ತುತ ತಮ್ಮ ಕನ್ನಡ ಸಿನಿಮಾ 'ಬಾಂಡ್ ರವಿ'ಯ ಪ್ರಚಾರ ಕಾರ್ಯದಲ್ಲಿದ್ದಾರೆ. ಇದೇ ಸಮಯದಲ್ಲಿ ತಮ್ಮ 'ಸಲಾರ್' ಸಿನಿಮಾದ ಅನುಭವ, ಪಾತ್ರ, ಪ್ರಭಾಸ್‌ ಜೊತೆ ಒಡನಾಟ, ಅವರೊಟ್ಟಿಗಿನ ಮಾತುಕತೆ, ಅವರಿಂದ ಕಲಿತ ವಿಷಯ ಇನ್ನಿತರೆಗಳ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದಾರೆ.

  ಎರಡು ಷೆಡ್ಯೂಲ್ ಚಿತ್ರೀಕರಣ ಮಾಡಿದ್ದೇನೆ: ಪ್ರಮೋದ್

  ಎರಡು ಷೆಡ್ಯೂಲ್ ಚಿತ್ರೀಕರಣ ಮಾಡಿದ್ದೇನೆ: ಪ್ರಮೋದ್

  ''ಸಿನಿಮಾದಲ್ಲಿ ನನ್ನ ಪಾತ್ರ ಏನು ಎಂಬುದು ನಾನು ಈಗಲೇ ಹೇಳುವಂತಿಲ್ಲ. ನನಗೂ ಅವರು ಪೂರ್ತಿಯಾಗಿ ಹೇಳಿಲ್ಲ. ಆದರೆ ಅದೊಂದು ಬಹಳ ಎನರ್ಜಿ ಬೇಡುವ ಪಾತ್ರ ಎಂಬುದು ನನಗೆ ಗೊತ್ತಾಗಿದೆ. ಅದೇ ರೀತಿ ಎನರ್ಜಿ ನೀಡಿ ನಾನು ನಟಿಸಿದ್ದೇನೆ. ನನ್ನ ಪ್ರದರ್ಶನ ಅವರಿಗೆ ಇಷ್ಟವಾಗಿದೆ. ಎರಡು ಷೆಡ್ಯೂಲ್ ಚಿತ್ರೀಕರಣ ಮುಗಿದಿದೆ. ಅವರದ್ದು ಸಾಕಷ್ಟು ಮುಗಿದಿದೆ. ನನ್ನ ಇನ್ನೊಂದೆರಡು ಷೆಡ್ಯೂಲ್‌ನ ಚಿತ್ರೀಕರಣ ಅವರೊಟ್ಟಿಗೆ ಇವೆ. ನನ್ನ ಹೆಚ್ಚಿನ ದೃಶ್ಯಗಳು ಪ್ರಭಾಸ್ ಜೊತೆಗೇ ಇವೆ'' ಎಂದು 'ಸಲಾರ್' ಸಿನಿಮಾದ ಚಿತ್ರೀಕರಣದ ಬಗ್ಗೆ ಪ್ರಮೋದ್ ಹೇಳಿದ್ದಾರೆ.

  ಪ್ರಭಾಸ್ ನಿಜವಾಗಿಯೂ ಡಾರ್ಲಿಂಗ್: ಪ್ರಮೋದ್

  ಪ್ರಭಾಸ್ ನಿಜವಾಗಿಯೂ ಡಾರ್ಲಿಂಗ್: ಪ್ರಮೋದ್

  ''ಪ್ರಭಾಸ್ ಅದ್ಭುತವಾದ ವ್ಯಕ್ತಿ. ಅವರನ್ನು ಡಾರ್ಲಿಂಗ್ ಎನ್ನುತ್ತಾರೆ, ನಿಜವಾಗಿಯೂ ಅವರು ಡಾರ್ಲಿಂಗೇ! ಆಕ್ಷನ್ ಹೇಳಿದಾಗ ಅವರು ರೆಬೆಲ್ ಸ್ಟಾರ್ ಆಗುತ್ತಾರೆ ಆದರೆ ಕಟ್ ಹೇಳಿದ ಬಳಿಕ ಸ್ನೇಹಿತರಾಗಿಬಿಡುತ್ತಾರೆ. ಅವರು ದೊಡ್ಡ ನಟ ಅವರು ಸ್ನೇಹಮಯವಾಗಿ ನಡೆದುಕೊಳ್ಳದೇ ಇದ್ದರೂ ಯಾರೂ ಪ್ರಶ್ನೆ ಮಾಡುವುದಿಲ್ಲ. ಹಾಗಿದ್ದರೂ ಅವರು ಎಲ್ಲರೊಟ್ಟಿಗೆ ಬೆರೆಯುತ್ತಾರೆ ಪ್ರೀತಿಯಿಂದ ಮಾತನಾಡುತ್ತಾರೆ. ನಮ್ಮೊಟ್ಟಿಗೆ ಮಾತನಾಡುತ್ತಾರೆ. ನನ್ನನ್ನು ಕನ್ನಡ ಸಿನಿಮಾಗಳ ಬಗ್ಗೆ ಕೇಳಿದರು. ನನ್ನ ಸಿನಿಮಾಗಳ ಬಗ್ಗೆ ಕೇಳಿ ತಿಳಿದುಕೊಂಡರು. ನನ್ನನ್ನು ಸಹ ಸರ್ ಎಂದೇ ಮಾತನಾಡಿಸುತ್ತಾರೆ ಪ್ರಭಾಸ್, ಅಷ್ಟು ಸರಳ ಅವರು'' ಎಂದಿದ್ದಾರೆ ಪ್ರಮೋದ್.

  'ನನ್ನ ಸಿನಿಮಾ ಟ್ರೈಲರ್ ನೋಡಿ ಖುಷಿ ಪಟ್ಟರು ಪ್ರಭಾಸ್'

  'ನನ್ನ ಸಿನಿಮಾ ಟ್ರೈಲರ್ ನೋಡಿ ಖುಷಿ ಪಟ್ಟರು ಪ್ರಭಾಸ್'

  ''ನಾನು ನನ್ನ 'ಬಾಂಡ್ ರವಿ' ಸಿನಿಮಾದ ಟ್ರೈಲರ್ ತೋರಿಸಿದೆ. ಚೆನ್ನಾಗಿದೆ ಎಂದು ಹೇಳಿ ಸುಮ್ಮನೆ ಆಗಿಬಿಡಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ, ಆ ಟ್ರೈಲರ್ ಅನ್ನು ವಿಶ್ಲೇಷಣೆಗೊಳಪಡಿಸಿದರು. ಚೆನ್ನಾಗಿ ಕಾಣುತ್ತಿದ್ದೀರಿ ಎಂದರು. ಆಕ್ಷನ್ ಚೆನ್ನಾಗಿದೆ ಎಂದರು. ಉದ್ದ ಇದ್ದೀರಲ್ಲ? ಡ್ಯಾನ್ಸ್ ಮಾಡಲು ಕಷ್ಟ ಆಗಲಿಲ್ಲವೇ ಎಂದು ಪ್ರಶ್ನೆ ಮಾಡಿದರು. ಹೀಗೆ ಅವರು ಆಸಕ್ತಿ ತೋರಿಸಿ ಆಪ್ಯಾಯಮಾನವಾಗಿ ಮಾತನಾಡುತ್ತಾರೆ. ಎದುರಿರುವವರಿಗೂ ಒಳ್ಳೆಯ ಸ್ಪೇಸ್ ನೀಡುತ್ತಾರೆ'' ಎಂದಿದ್ದಾರೆ ಪ್ರಮೋದ್.

  ನೋಡಿ ಕಲಿಯುತ್ತಿದ್ದೇನೆ: ನಟ ಪ್ರಮೋದ್

  ನೋಡಿ ಕಲಿಯುತ್ತಿದ್ದೇನೆ: ನಟ ಪ್ರಮೋದ್

  'ಸಲಾರ್' ಸೆಟ್ಟನಲ್ಲಿರುವವರೆಲ್ಲ ಸ್ಟಾರ್ ನಟರು. ನಾವಿನ್ನೂ ಈಗ ಬೆಳೆಯುತ್ತಿರುವವರು. ಅಲ್ಲಿ ಅವರನ್ನು ನೋಡಿ ಕಲಿಯುವುದು ನನಗೆ ಸಾಕಷ್ಟಿದೆ. ಅವರು ಹೇಗೆ ನಟಿಸುತ್ತಾರೆ, ಹೇಗೆ ವರ್ತಿಸುತ್ತಾರೆ. ಅಭಿಮಾನಿಗಳೊಟ್ಟಿಗೆ ಹೇಗೆ ನಡೆದುಕೊಳ್ಳುತ್ತಾರೆ, ಹೇಗೆ ಮಾತನಾಡಿಸುತ್ತಾರೆ ಇದೆಲ್ಲವನ್ನೂ ನೋಡುತ್ತಿದ್ದೇನೆ, ನೋಡಿ ಕಲಿಯುತ್ತಿದ್ದೇನೆ ಎಂದಿದ್ದಾರೆ ಪ್ರಮೋದ್. ಇದೇ ಪ್ರಮೋದ್ ಅಭಿನಯದ ಕನ್ನಡ ಸಿನಿಮಾ 'ಬಾಂಡ್ ರವಿ' ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರ ಕಾರ್ಯದಲ್ಲಿ ಪ್ರಮೋದ್ ಬ್ಯುಸಿಯಾಗಿದ್ದಾರೆ.

  English summary
  Kannada actor Pramod shared his experience of acting in Telugu movie Salaar with actor Prabhas. He said Prabhas is darling in real life also.
  Monday, November 21, 2022, 18:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X