ಶ್ರುತಿ ಹರಿಹರನ್ ಫೋಸ್ಟ್ ಗೆ ನೆಟ್ಟಿಗರ ಕಮೆಂಟ್ಸ್ ನೋಡಿ ಸಿಡಿದೆದ್ದ ಪ್ರಥಮ್

Recommended Video

ಶ್ರುತಿ ಹರಿಹರನ್ ಫೋಸ್ಟ್ ಗೆ ನೆಟ್ಟಿಗರ ಕಮೆಂಟ್ಸ್ ನೋಡಿ ಸಿಡಿದೆದ್ದ ಪ್ರಥಮ್ | Filmieat Kannada

ಸ್ಯಾಂಡಲ್ ವುಡ್ ನಟಿ ಶ್ರುತಿ ಹರಿಹರಿಹನ್ ಇತ್ತೀಚಿಗಷ್ಟೆ ತಾಯಿಯಾಗುತ್ತಿರುವ ಸಂತಸದ ವಿಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಮೀ ಟೂ ಅಭಿನಯದ ನಂತರ ಶ್ರುತಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಅಲ್ಲದೆ ಶ್ರುತಿ ಬಳಿ ಯಾವುದೆ ಸಿನಿಮಾಗಳಿಲ್ಲ. ಹಾಗಾಗಿ ಶ್ರುತಿ ಎಲ್ಲಿದ್ದಾರೆ, ಏನ್ಮಾಡ್ತಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು.

ಆದ್ರೀಗ ತಿಂಗಳುಗಳ ಬಳಿಕ ಶ್ರುತಿ ಗುಡ್ ನ್ಯೂಸ್ ಜೊತೆ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯ ಖುಷಿಯಲ್ಲಿರುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಆದ್ರೆ ಶ್ರುತಿ ಈ ಪೋಸ್ಟ್ ಹಾಕುತ್ತಿದ್ದಂತೆ ನೆಟ್ಟಿಗರು ತರಹೇವಾರಿ ಕಮೆಂಟ್ಸ್ ಗಳನ್ನು ಹಾಕುತ್ತಿದ್ದಾರೆ.

Kannada actor Pratham slams to sruthi hariharan fan in social media

ಕೆಟ್ಟಕೆಟ್ಟದಾಗಿ ಕಮೆಂಟ್ ಗಳು ಹರಿದು ಬರುತ್ತಿರುವುದುನ್ನು ನೋಡಿ ನಟ ಪ್ರಥಮ್ ರೊಚ್ಚಿಗೆದ್ದಿದ್ದಾರೆ. ನೆಟ್ಟಿಗರ ಕೆಳ ಮಟ್ಟದ ಕಮೆಂಟ್ ಗಳಿಗೆ ಪ್ರತಿಕ್ರಿಯೆ ನೀಡಿದ ಪ್ರಥಮ್ "ಮುಖ್ಯವಾದ ವಿಷಯ. ಸಾಮಾನ್ಯವಾಗಿ ನಾನು ಯಾರ ಪ್ರೊಫೈಲ್ ನಲ್ಲು ಕಮೆಂಟ್ ಮಾಡಲ್ಲ. ನಿಮ್ಗೆ ಯಾರ ಮೇಲೆ ಎಷ್ಟೇ ವಿರೋಧ ಇದ್ರೂ ಇಟ್ಕೊಳಿ, ನಿಮ್ಮಿಷ್ಟ.ಇನ್ನೂ ಹೊಟ್ಟೆಯಲ್ಲಿರೋ ಮಗುವಿನ ಬಗ್ಗೆ ಇಷ್ಟೆಲ್ಲಾ ವಿರೋಧವಾ? ಗುರು ಆ ಮಗುವಿನ character certificate ಕೊಡೋಕೆ ನೀವೆಲ್ಲ ಯಾರಪ್ಪ?" ಎಂದು ಖಾರವಾಗಿ ಹೇಳಿದ್ದಾರೆ.

"ಮುಖ್ಯವಾದ ವಿಚಾರ ಅರ್ಜುನ್ ಸರ್ಜಾರಿಗೆ ಟ್ಯಾಗ್ ಮಾಡೋ ಚಿಲ್ಲರೆ ಬುದ್ಧಿ ಬಿಡಿ. ಪ್ರಪಂಚನೇ ನೋಡದೇ ಇರೋ ಮಗು ಬಗ್ಗೆ ಯಾಕ್ರೋ ಪಾಪದ ಮಾತಾಡ್ತೀರಾ? ನೆನಪಿರಲಿ..‌ನಿಮ್ಮಿಷ್ಟ ನಿಮ್ಮ ಲೈಫು. ಆದ್ರೆ ಇನ್ನು ಹುಟ್ಟದೇ ಇರೋ ಮಗುಗೆ character certificate ಬೇಡ. ಅವ್ರ ಲೈಫು ಅವ್ರಿಷ್ಟ. ಯಾರನ್ನೂ ಮುಜಗರ ಮಾಡ್ಬೇಡಿ. ಇದರ ಬಗ್ಗೆ ಯಾರು ಮಾತಾಡ್ಲಿಲ್ಲ. ನಾನು ಮಾತಾಡಿದೆ" ಎಂದು ನೆಟ್ಟಿಗರ ವಿರುದ್ಧ ರೊಚ್ಚಿಗೊದ್ದಿದ್ದಾರೆ ಪ್ರಥಮ್.

Kannada actor Pratham slams to sruthi hariharan fan in social media

ಪ್ರಥಮ್ ನೀಡಿರುವ ಪ್ರತಿಕ್ರಿಯೆಗೆ ಶ್ರುತಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಮ್ಮ ಹೇಳಿಕೆಯನ್ನು ಪ್ರಶಂಸಿಸುತ್ತೇನೆ ಎಂದು ಶ್ರುತಿ ಪ್ರಥಮ್ ಗೆ ಹೇಳಿದ್ದಾರೆ. ಶ್ರುತಿ ಹಾಕಿರುವ ಫೋಸ್ಟ್ ಬಗ್ಗೆ ಸಾಮಾಜಿ ಜಾಲತಾಣದಲ್ಲಿ ತೀರ ಕೆಳಮಟ್ಟದ ಕಮೆಂಟ್ಸ್ ಗಳು ಹರಿದುಬರುತ್ತಿವೆ. ಅಲ್ಲದೆ ಶ್ರುತಿ ಪೋಸ್ಟ್ ಅನ್ನು ಅರ್ಜುನ್ ಸರ್ಜಾ ಅವರಿಗೆ ಟ್ಯಾಗ್ ಮಾಡಿ ವಿಕ್ರುತಿ ಮೆರೆಯುತ್ತಿದ್ದಾರೆ.

More from Filmibeat

English summary
Kannada actor Pratham slams to Sruthi Hariharan fan in social media. Fans are trolling the shruti pregnant news.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X