ಮೊದಲ ವಾರಾಂತ್ಯಕ್ಕೆ 'ದಿ ವಿಲನ್' 50 ಕೋಟಿ ಗಳಿಕೆ: ಭವಿಷ್ಯ ನುಡಿದ ಖ್ಯಾತ ನಟ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ 'ದಿ ವಿಲನ್' ಸಿನಿಮಾ ತೆರೆಮೇಲೆ ಬಂದಿದೆ. ಮೊದಲ ದಿನ ಮೊದಲ ಶೋ ನೋಡಿದ ಪ್ರೇಕ್ಷಕರು ಸಿನಿಮಾ ಸೂಪರ್, ಚಿಂದಿ ಚಿತ್ರಾನ್ನ, ರೆಕಾರ್ಡ್ ಬ್ರೇಕ್, ಬಾಕ್ಸ್ ಆಫೀಸ್ ಉಡೀಸ್ ಅಂತೆಲ್ಲಾ ಹೇಳ್ತಿದ್ದಾರೆ.

ಮತ್ತೊಂದೆಡೆ ಸಿನಿಮಾಗೆ ನೆಗಿಟೀವ್ ಕಾಮೆಂಟ್ ಗಳು ಬಂದಿದೆ. ಚಿತ್ರವನ್ನ ಇನ್ನೂ ಅದ್ಭುತವಾಗಿ ಮಾಡಬಹುದಿತ್ತು. ಆದ್ರೆ, ನಿರೀಕ್ಷೆ ಮಟ್ಟ ತಲುಪಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದರು.

ಹೀಗಿರುವಾಗ, ಕನ್ನಡದ ಖ್ಯಾತ ನಟರೊಬ್ಬರ ವಿಲನ್ ಸಿನಿಮಾ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಮೊದಲ ವಾರದಲ್ಲೇ ಈ ಸಿನಿಮಾ 50 ಕೋಟಿ ಗಳಿಸಲಿದೆ ಎಂದು ಹೇಳಿದ್ದಾರೆ. ಇದು ಎಷ್ಟರ ಮಟ್ಟಿಗೆ ನಿಜಾ ಆಗುತ್ತೋ ಸದ್ಯಕ್ಕೆ ಗೊತ್ತಿಲ್ಲ. ಈ ಹೇಳಿಕೆ ಈಗ ಚರ್ಚೆಗೆ ಕಾರಣವಾಗಿದೆ. ಅಷ್ಟಕ್ಕೂ ಈ ಹೇಳಿಕೆ ನೀಡಿದ ನಟ ಯಾರು.? ಮುಂದೆ ಓದಿ.....

50 ಕೋಟಿ ಬಗ್ಗೆ ಜಗ್ಗೇಶ್ ಟ್ವೀಟ್

50 ಕೋಟಿ ಬಗ್ಗೆ ಜಗ್ಗೇಶ್ ಟ್ವೀಟ್

ಮೊದಲಿನಿಂದಲೂ ದಿ ವಿಲನ್ ಸಿನಿಮಾ ಬಗ್ಗೆ ವಿಶ್ವಾಸ ವ್ಯಕ್ತಪಡಿಸುತ್ತಿದ್ದ ಹಿರಿಯ ನಟ ಜಗ್ಗೇಶ್ ಈಗ, ಬಾಕ್ಸ್ ಆಫೀಸ್ ಲೆಕ್ಕಾಚಾರ ಹಾಕಿದ್ದಾರೆ. ಸದ್ಯ, ವಿಲನ್ ಸಿನಿಮಾದ ಓಪನಿಂಗ್ ನೋಡಿರುವ ಜಗ್ಗೇಶ್ ಈ ಸಿನಿಮಾ 50 ಕೋಟಿ ಗಳಿಸಲಿದೆ ಎಂದಿದ್ದಾರೆ.

ನಮ್ಮ ಸಿನಿಮಾ ನಮ್ಮ ಹೆಮ್ಮೆ

ನಮ್ಮ ಸಿನಿಮಾ ನಮ್ಮ ಹೆಮ್ಮೆ

ಇನ್ನು ದಿ ವಿಲನ್ ಚಿತ್ರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದಕ್ಕೆ ಜಗ್ಗೇಶ್ ಖುಷಿ ವ್ಯಕ್ತಪಡಿಸಿದ್ದಾರೆ. ವಿಲನ್ ಅಬ್ಬರ ನೋಡಿ ಪರಭಾಷೆ ಚಿತ್ರಗಳು ಎದರಿದೆ. ಕನ್ನಡ ಚಿತ್ರವೊಂದರ ಸದ್ದು ಕೇಳಿ ಹೆಮ್ಮೆಯಾಯಿತು ಎಂದಿರುವ ಜಗ್ಗೇಶ್ ಪೈರಸಿ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಭಾರಿ ಚರ್ಚಗೆ ಕಾರಣವಾಯ್ತು ಟ್ವೀಟ್

ಭಾರಿ ಚರ್ಚಗೆ ಕಾರಣವಾಯ್ತು ಟ್ವೀಟ್

ಜಗ್ಗೇಶ್ ಅವರು ಈ ಟ್ವೀಟ್ ನಿಂದ ಭಾರಿ ಚರ್ಚೆ ನಡೆಯುತ್ತಿದೆ. ಕೆಲವರು ಹೌದು ಈ ಸಿನಿಮಾ 50 ಕೋಟಿ ದಾಟುತ್ತೆ ಎಂದು ಹೇಳುತ್ತಿದ್ದರೇ, ಮತ್ತೆ ಕೆಲವರು ಮೊದಲು ಸಿನಿಮಾ ನೋಡಿ, ಆಮೇಲೆ ಈ ಮಾತು ಹೇಳಿ ಎಂದು ಕಾಲೆಳೆಯುತ್ತಿದ್ದಾರೆ.

ಸಿನಿಮಾ ನೋಡಿಲ್ಲ ಜಗ್ಗೇಶ್

ಸಿನಿಮಾ ನೋಡಿಲ್ಲ ಜಗ್ಗೇಶ್

ಸದ್ಯ ವಿಲನ್ ಚಿತ್ರದ ಹಾವಳಿ, ಅಬ್ಬರ, ಘರ್ಜನೆ ನೋಡಿ ಈ ಟ್ವೀಟ್ ಮಾಡಿರುವ ಜಗ್ಗೇಶ್ ಸದ್ಯದಲ್ಲೇ ಸಿನಿಮಾ ನೋಡಲಿದ್ದಾರಂತೆ. ಚಿತ್ರಮಂದಿರಕ್ಕೆ ಬಂದು ವಿಲನ್ ನೋಡುತ್ತೇನೆ ಎಂದು ಹೇಳಿದ್ದಾರೆ.

ನಾಲ್ಕು ದಿನದಲ್ಲಿ ರೆಕಾರ್ಡ್

ನಾಲ್ಕು ದಿನದಲ್ಲಿ ರೆಕಾರ್ಡ್

ದಸರಾ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿರುವ ವಿಲನ್ ಸಿನಿಮಾ ಮೊದಲ ದಿನದ ಅತಿ ಹೆಚ್ಚು ಶೋ ಕಂಡಿದೆ. ಟಿಕೆಟ್ ಬೆಲೆ ಕೂಡ ಹೆಚ್ಚು ಮಾಡಿದ್ದು, ಬಹುತೇಕ ಶೋ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಇನ್ನು ಶುಕ್ರವಾರ, ಶನಿವಾರ ಮತ್ತು ಭಾನುವಾರ ಕೂಡ ರಜೆ ಇರುವುದರಿಂದ ಮತ್ತು ಟಕೆಟ್ ಬುಕ್ಕಿಂಗ್ ಆಗಿರುವುದರಿಂದ ಬಹುಶಃ ಕಲೆಕ್ಷನ್ ನಲ್ಲಿ ಈ ಸಿನಿಮಾ ದಾಖಲೆ ಬರೆಯುವುದು ಪಕ್ಕಾ.

More from Filmibeat

English summary
Kannada actor jaggesh has taken his twitter account to with the villian movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X