ಲೈಫ್ ಜೊತೆ ಸೆಲ್ಫಿ ತೆಗೆದುಕೊಂಡ ನಂತರ ಹೊಸ ಚಿತ್ರಕ್ಕೆ ಪ್ರೇಮ್ ಗ್ರೀನ್ ಸಿಗ್ನಲ್

ಲವ್ಲಿ ಸ್ಟಾರ್ ಪ್ರೇಮ್ ವರ್ಷಗಳ ಬಳಿಕ ಮತ್ತೆ ಎಂಟ್ರಿ ಕೊಡುತ್ತಿದ್ದಾರೆ. ಈ ಹಿಂದೆ 'ಲೈಫ್ ಜೊತೆ ಒಂದು ಸೆಲ್ಫಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಪ್ರೇಮ್ ಆ ನಂತರ ಯಾವ ಸಿನಿಮಾದಲ್ಲೂ ಅಭಿನಯಿಸಿರಲಿಲ್ಲ. ಹಾಗಾಗಿ ಪ್ರೇಮ್ ಈಗ ಏನು ಮಾಡುತ್ತಿದ್ದಾರೆ? ಲವ್ಲಿ ಸ್ಟಾರ್ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಆದರೀಗ ಆ ಕುತೂಹಕ್ಕೆ ತೆರೆ ಎಳೆದಿದ್ದಾರೆ ಪ್ರೇಮ್.

ಹೌದು, ಪ್ರೇಮ್ ಮುಂದಿನ ಸಿನಿಮಾ ಅನೌನ್ಸ್ ಆಗಿದೆ. ಈ ಬಾರಿ ನೆನಪಿರಲಿ ಪ್ರೇಮ್ ಹೊಸ ನಿರ್ದೇಶಕನ ಜೊತೆ ಬರುತ್ತಿದ್ದಾರೆ. ನ್ಯೂರಾಲಜಿಸ್ಟ್ ಡಾ. ರಾಘವೇಂದ್ರ ನಟ ಪ್ರೇಮ್ ಹೊಸ ಸಿನಿಮಾದ ನಿರ್ದೇಶನದ ಜವಬ್ದಾರಿ ವಹಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ.

ಇನ್ನೂ ಹೆಸರಿಡದ ಪ್ರೇಮ್ ಹೊಸ ಸಿನಿಮಾದ ಬಗ್ಗೆ ಈಗಾಗಲೆ ಕುತೂಹಲ ಹೆಚ್ಚಾಗಿದೆ. ಚಿತ್ರದ ಬಗ್ಗೆ ಹೆಚ್ಚೇನು ಬಿಟ್ಟುಕೊಡದ ಚಿತ್ರತಂಡ ಸದ್ಯ ಪ್ರೀ-ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಇನ್ನೂ ಈ ಸಿನಿಮಾದ ವಿಶೇಷತೆ ಅಂದರೆ ಇದು ಪ್ರೇಮ್ ಅಭಿನಯದ 25ನೇ ಸಿನಿಮಾ. ತಮ್ಮ 25ನೇ ಸಿನಿಮಾ ಸ್ವಲ್ಪ ವಿಭಿನ್ನವಾಗಿರಬೇಕೆಂದು ಸಿನಿಮಾ ನಿರ್ದೇಶನದ ಹೊಣೆಯನ್ನು ಹೊಸ ನಿರ್ದೇಶಕರಿಗೆ ಕೊಟ್ಟಿದ್ದಾರಂತೆ.

kannada actor prem signed his 25th movie

ಈಗಾಗಲೆ ಸಾಕಷ್ಟು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಪ್ರೇಮ್ 25ನೇ ಚಿತ್ರದಲ್ಲಿ ನಾಲ್ಕು ಗೆಟಪ್ ನಲ್ಲಿ ಮಿಂಚಲಿದ್ದಾರಂತೆ. 'ಪಲ್ಲಕ್ಕಿ', 'ಚಾರ್ಮಿನಾರ್', 'ಚೌಕ', 'ಲೈಫ್ ಜೊತೆ ಒಂದು ಸೆಲ್ಫಿ' ಚಿತ್ರಗಳಂತಹ ಹಿಟ್ ಸಿನಿಮಾಗಳನ್ನು ನೀಡಿರುವ ಪ್ರೇಮ್ ಪ್ರತಿಯೊಂದು ಸಿನಿಮಾದಲ್ಲಿಯೂ ವಿನೂತನ ಪಾತ್ರದ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಹಾಗಾಗಿ ಈ ಸಿನಿಮಾದಲ್ಲಿ ಪ್ರೇಮ್ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಅಭಿಮಾನಿಗಳ ಸದ್ಯದ ಕುತೂಹಲ.

More from Filmibeat

English summary
kannada actor prem signed his 25th movie. he is get chance to new director to direct his 25 movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X