ಬಾಲಿವುಡ್ ಗೆ ಎಂಟ್ರಿ ಕೊಟ್ಟ 'ದಿಯಾ' ಪೃಥ್ವಿ ಅಂಬರ್; ಯಾವ ಸಿನಿಮಾ?

By ಫಿಲ್ಮ್ ಡೆಸ್ಕ್

ದಿಯಾ ಸಿನಿಮಾ ಮೂಲಕ ಕನ್ನಡ ಚಿತ್ರ ಪ್ರೇಕ್ಷಕರ ಮನ ಗೆದ್ದಿರುವ ನಟ ಪೃಥ್ವಿ ಅಂಬರ್ ಈಗ ಬಾಲಿವುಡ್ ನಲ್ಲಿ ಮಿಂಚಲು ಸಜ್ಜಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ದಿಯಾ ಸಿನಿಮಾದ ಆದಿ ಪಾತ್ರದ ಮೂಲಕ ಕನ್ನಡ ಪ್ರೇಕ್ಷಕರ ಹೃದಯ ಗೆದ್ದಿರುವ ಪೃಥ್ವಿ ಸದ್ಯ ಸಾಲು ಸಾಲು ಕನ್ನಡದ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಕನ್ನಡ ಸಿನಿಮಾಗಳ ಜೊತೆಗೆ ಹಿಂದಿ ಸಿನಿಮಾಗೂ ಗ್ರೀನ್ ಸಿಗ್ನಲ್ ನೀಡುವ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಅಂದಹಾಗೆ ಪೃಥ್ವಿ ಹಿಂದಿಯಲ್ಲಿ ಮಿಂಚಲು ಸಜ್ಜಾಗಿರುವುದು ದಿಯಾ ಸಿನಿಮಾದ ರಿಮೇಕ್ ನಲ್ಲಿ. ಹೌದು, ಕನ್ನಡದ ಸೂಪರ್ ಹಿಟ್ ದಿಯಾ ಸಿನಿಮಾ ಬಾಲಿವುಡ್ ಗೆ ರಿಮೇಕ್ ಆಗುತ್ತಿದೆ. ಹಿಂದಿ ರಿಮೇಕ್ ನಲ್ಲೂ ಪೃಥ್ವಿ ಆದಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಈ ಮೂಲಕ ಪೃಥ್ವಿ ಆದಿಯಾಗಿ ಮತ್ತೆ ಹಿಂದಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ವಿಶೇಷ ಎಂದರೆ ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು, ನಟ ಪೃಥ್ವಿ ಸಹ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಸುಳಿವು ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿರುವ ಪೃಥ್ವಿ ಲಕ್ನೋದಲ್ಲಿರುವ ಫೋಟೋ ಹಂಚಿಕೊಂಡಿದ್ದಾರೆ.

Kannada actor Pruthvi Ambaar make his bollywood debut with Dia Hindi Remake


ಕೆಎಸ್ ಅಶೋಕ್ ನಿರ್ದೇಶನದ ದಿಯಾ ಸಿನಿಮಾದಲ್ಲಿ ಖುಷಿ ರವಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ದೀಕ್ಷಿತ್ ಶೆಟ್ಟಿ ಮತ್ತು ಪೃಥ್ವಿ ಅಂಬರ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು. 2020 ಪ್ರಾರಂಭದಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾಗೆ ಕನ್ನಡ ಚಿತ್ರಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಚಿತ್ರಮಂದಿರಗಳಲ್ಲಿ ಮಾತ್ರವಲ್ಲದೆ ಒಟಿಟಿಯಲ್ಲಿ ರಿಲೀಸ್ ಆದಾಗಲು ಜನ ಮುಗಿಬಿದ್ದು ಸಿನಿಮಾ ವೀಕ್ಷಿಸಿದ್ದರು. ಕರ್ನಾಟಕದಲ್ಲಿ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯಲ್ಲೂ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಹಿಂದಿ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗುತ್ತಿದೆ.

Kannada actor Pruthvi Ambaar make his bollywood debut with Dia Hindi Remake

ಹಿಂದಿಯಲ್ಲಿ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ, ಮತ್ತೋರ್ವ ನಾಯಕ ಯಾರು ಎನ್ನುವ ಬಗ್ಗೆ ಮಾಹಿತಿ ರಿವೀಲ್ ಆಗಿಲ್ಲ. ಮೂಲಗಳ ಪ್ರಕಾರ ಹೊಸ ಪ್ರತಿಭೆಗಳನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗುತ್ತಿದೆ. ದಿಯಾ ಹಿಂದಿ ರಿಮೇಕ್ ಚಿತ್ರೀಕರಣವನ್ನು ಡೆಹರಾಡೂನ್ ಮತ್ತು ಮಸ್ಸೂರಿಯಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ.

ಅಂದಹಾಗೆ ನಟ ಪೃಥ್ವಿ ಅಂಬರ್ ಸ್ಯಾಂಡಲ್ ವುಡ್ ನಲ್ಲಿ ಸದ್ಯ ಲೈಫ್ ಈಸ್ ಬ್ಯೂಟಿಫುಲ್, ಶಿವಪ್ಪ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತುಳು ಸಿನಿಮಾರಂಗದಲ್ಲಿ ಮಿಂಚಿರುವ ಪೃಥ್ವಿ ದಿಯಾ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ.

More from Filmibeat

English summary
Kannada actor Pruthvi Ambaar make his bollywood debut with Dia Hindi Remake.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X