'ಕಿಲ್ಲಿಂಗ್ ವೀರಪ್ಪನ್' ಆಡಿಯೋ ಲಾಂಚ್ ಮಾಡಲಿರುವ ಪವರ್ ಸ್ಟಾರ್
ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಆಕ್ಷನ್-ಕಟ್ ಹೇಳಿರುವ ಈ ವರ್ಷದ ಬಹುನಿರೀಕ್ಷಿತ 'ಕಿಲ್ಲಿಂಗ್ ವೀರಪ್ಪನ್', ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಕ್ಷಣಗಣನೆ ಶುರುವಾಗಿದೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಲೀಡ್ ರೋಲ್ ನಲ್ಲಿ ಮಿಂಚಿರುವ 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಇಂದು (ನವೆಂಬರ್ 2) ರಾತ್ರಿ ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನೆರವೇರಲಿದೆ.[ನವೆಂಬರ್ 2 ರಂದು 'ಕಿಲ್ಲಿಂಗ್ ವೀರಪ್ಪನ್' ಆಡಿಯೋ ಲಾಂಚ್]
ಕಾರ್ಯಕ್ರಮಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಸ್ಪೆಷಲ್ ಗೆಸ್ಟ್ ಆಗಿ ಆಗಮಿಸಲಿದ್ದಾರೆ. ಜೊತೆಗೆ ರಾಕಿಂಗ್ ಸ್ಟಾರ್ ಯಶ್ ಹಾಗೂ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಚಿತ್ರದ ಆಡಿಯೋ ಲಾಂಚ್ ಮಾಡಲಿದ್ದಾರೆ
ಅಂದಹಾಗೆ 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಹಾಡೊಂದಕ್ಕೆ ಪವರ್ ಸ್ಟಾರ್ ತಮ್ಮ ಧ್ವನಿ ನೀಡಿದ್ದು, ಇದೇ ಮೊದಲ ಬಾರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಈ ಚಿತ್ರದ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ.[ದೀಪಾವಳಿಗೆ ಸಖತ್ ಸದ್ದು ಮಾಡಲಿದೆ ಕಿಲ್ಲಿಂಗ್ ವೀರಪ್ಪನ್!]
ಕುಖ್ಯಾತ ಕಾಡುಗಳ್ಳ ವೀರಪ್ಪನ್ ಅವರ ನಿಜ ಜೀವನ ಚರಿತ್ರೆಯಾಧರಿತ ಕಥೆಯನ್ನು ರೀಲ್ ಗೆ ಇಳಿಸಿರುವ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ಸದ್ಯಕ್ಕೆ ಎಲ್ಲರಲ್ಲೂ ಭಾರಿ ಕುತೂಹಲವನ್ನು ಸೃಷ್ಟಿಸಿದೆ. ಈಗಾಗಲೇ ಕುಂಬಳಕಾಯಿ ಒಡೆದಿರುವ ಚಿತ್ರತಂಡ ಇದೇ ದೀಪಾವಳಿ ಹಬ್ಬಕ್ಕೆ ಚಿತ್ರಬಿಡುಗಡೆ ಮಾಡುವ ಮೂಲಕ ಪಟಾಕಿ ಸಿಡಿಸಿ ಹಬ್ಬ ಆಚರಿಸಲಿದೆ.


Click it and Unblock the Notifications













