ನವರಸ ನಾಯಕನ ಜೊತೆ ಪುನೀತ್ ರಾಜ್ ಕುಮಾರ್ ಸಿನಿಮಾ

ಪವರ್ ಸ್ಟಾರ್ ಪುನೀತ್ ರಾಜ್ ಮತ್ತು ನವರಸ ನಾಯಕ ಜಗ್ಗೇಶ್ ಒಂದೆ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಸ್ವತಹ ಪುನೀತ್ ರಾಜ್ ಕುಮಾರ್ ಬಹಿರಂಗ ಪಡಿಸಿದ್ದಾರೆ. ಜಗ್ಗೇಶ್ ದೊಡ್ಡ ಅಭಿಮಾನಿಯಾಗಿರುವ ಪುನೀತ್ ಸಧ್ಯದಲ್ಲೇ ಇಬ್ಬರು ಒಟ್ಟಿಗೆ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ.

Recommended Video

ಪುನೀತ್ ರಾಜ್ ಕುಮಾರ್ ಗೆ ಸಿಗಲಿದೆ ಬಿಗ್ Birthday Gift..! | puneeth rajkumar

ಜಗ್ಗೇಶ್, ಡಾ.ರಾಜ್ ಕುಮಾರ್ ಅವರ ಅಫ್ಪಟ ಅಭಿಮಾನಿ. ಅದೇ ಅಭಿಮಾನ ಮತ್ತು ಪ್ರೀತಿ ಪುನೀತ್ ರಾಜ್ ಕುಮಾರ್ ಮೇಲೆಯೂ ಇಟ್ಟುಕೊಂಡಿದ್ದಾರೆ ಜಗ್ಗೇಶ್. ಸದ್ಯ ಇಬ್ಬರು ಒಟ್ಟಿಗೆ ಸಿನಿಮಾ ಮಾಡುವ ಸುದ್ದಿ ವೈರಲ್ ಆಗಿದೆ. ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡರೆ ಅಭಿಮಾನಿಗಳಿಗೆ ಡಬಲ್ ಧಮಾಕ ಆಗಲಿದೆ.

ಕನ್ನಡದ ಕೋಟ್ಯಧಿಪತಿಯಲ್ಲಿ ಅಪ್ಪು ಹೇಳಿಕೆ

ಕನ್ನಡದ ಕೋಟ್ಯಧಿಪತಿಯಲ್ಲಿ ಅಪ್ಪು ಹೇಳಿಕೆ

ಇತ್ತೀಚಿಗಷ್ಟೆ ನವರಸ ನಾಯಕ ಜಗ್ಗೇಶ್ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಸಮಯದಲ್ಲಿ ಸ್ವತಹ ಪುನೀತ್ ರಾಜ್ ಕುಮಾರ್ ಸಧ್ಯದಲ್ಲೇ ಜಗ್ಗೇಶ್ ಜೊತೆ ಸಿನಿಮಾ ಮಾಡೇ ಮಾಡುತ್ತೇನೆ ಎಂದು ಹೇಳಿದ್ದಾರೆ.

ಜಗ್ಗೇಶ್ ಸಿನಿಮಾಗಳನ್ನು ನೋಡುತ್ತಿರುತ್ತಾರೆ ಪುನೀತ್

ಜಗ್ಗೇಶ್ ಸಿನಿಮಾಗಳನ್ನು ನೋಡುತ್ತಿರುತ್ತಾರೆ ಪುನೀತ್

ಅಪ್ಪು ಜಗ್ಗೇಶ್ ಅವರ ಅಪ್ಪಟ ಅಭಿಮಾನಿ. ಸಿನಿಮಾಗಳಲ್ಲಿ ಜಗ್ಗೇಶ್ ಕಾಮಿಡಿ ದೃಶ್ಯಗಳೆಂದರೆ ತುಂಬಾ ಇಷ್ಟಪಟ್ಟು ನೋಡುತ್ತಾರಂತೆ. ಅಲ್ಲದೆ ಜಗ್ಗೇಶ್ ಅವರ ಕೆಲವು ಸಿನಿಮಾಗಳನ್ನು ಸಾಕಷ್ಟು ಬಾರಿ ನೋಡಿದ್ದಾರೆ. ಇವತ್ತಿಗೂ ಅವರ ಸಿನಿಮಾಗಳನ್ನು ನೋಡುತ್ತಿರುತ್ತಾರಂತೆ. ಜಗ್ಗೇಶ್ ಅವರ 'ತರ್ಲೆ ನನ್ನ ಮಗ' ಸಿನಿಮಾದಿಂದ 'ನೀರ್ ದೋಸೆ' ಸಿನಿಮಾವರೆಗೂ ನೋಡಿದ್ದಾರಂತೆ.

ಜಗ್ಗೇಶ್ ಈ ಡೈಲಾಗ್ ಅಪ್ಪುಗೆ ತುಂಬ ಇಷ್ಟ

ಜಗ್ಗೇಶ್ ಈ ಡೈಲಾಗ್ ಅಪ್ಪುಗೆ ತುಂಬ ಇಷ್ಟ

ಜಗ್ಗೇಶ್ ಹಾಸ್ಯವನ್ನು ತುಂಬ ಇಷ್ಟ ಪಡುವ ಅಪ್ಪುಗೆ ಜಗ್ಗೇಶ್ ಅವರ ಫೇಮಸ್ ಡೈಲಾಗ್ 'ಐತೇರಿ ಲಕಡಿ ಪಕಡಿ ಜುಮ್ಮಾ' ಅಂದ್ರೆ ಇಷ್ಟವಂತೆ. ಹಾಗಾಗಿ ವೇದಿಕೆ ಮೇಲೆ ಈ ಡೈಲಾಗ್ ಅನ್ನು ಜಗ್ಗೇಶ್ ಬಳಿ ನವರಸಗಳಲ್ಲಿ ಹೇಳಿದ್ದಾರೆ. ಅಲ್ಲದೆ ಕೊನೆಯದಾಗಿ ಜಗ್ಗೇಶ್ ಸ್ಟೈಲ್ ನಲ್ಲಿಯೂ ಹೇಳಿಸುವ ಮೂಲಕ ಎಲ್ಲರನ್ನು ನಗಿಸಿದ್ದಾರೆ.

ಯುವರತ್ನ ಚಿತ್ರದಲ್ಲಿ ಪುನೀತ್

ಯುವರತ್ನ ಚಿತ್ರದಲ್ಲಿ ಪುನೀತ್

ಪುನೀತ್ ಸದ್ಯ ಯುವರತ್ನ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಬಹು ನಿರೀಕ್ಷೆಯ ಚಿತ್ರದಲ್ಲಿ ಪವರ್ ಸ್ಟಾರ್ ಕಾಣಿಸಿಕೊಳ್ಳುತ್ತಿದ್ದಾರೆ. ಜಗ್ಗೇಶ್ ತೋತಾಪುರಿ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇಬ್ಬರ ಈ ಸಿನಿಮಾ ಕಮಿಟ್ ಮೆಂಟ್ ಮುಗಿದ ಬಳಿಕ ಜಗ್ಗೇಶ್ ಮತ್ತು ಪುನೀತ್ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

More from Filmibeat

English summary
Kannada actor Puneeth Rajkumar and Jaggesh soon come together in film. Puneeth Rajkumar announced in Kannada Kotyadhipati show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X