ಸಂಭ್ರಮದಿಂದ ಮುದ್ದು ಮಡದಿಯ ಬರ್ತಡೇ ಆಚರಿಸಿದ ಅಪ್ಪು

By Suneetha

ಎಲ್ಲರ ಪ್ರೀತಿಯ ಅಪ್ಪು ಅಲಿಯಾಸ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಮತ್ತು ಪುನೀತ್ ಅವರ ಹುಟ್ಟುಹಬ್ಬಕ್ಕೆ ಕೇವಲ ಮೂರೇ ದಿನಗಳ ಅಂತರ ಇರೋದು ಅನ್ನೋ ವಿಷಯ ಹೆಚ್ಚಿನವರಿಗೆ ಗೊತ್ತಿಲ್ಲ.

ಹೌದು ಎಲ್ಲರ ಮೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಮಾರ್ಚ್ 17 ರಂದು ಪುನೀತ್ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರೆ, ಮಾರ್ಚ್ 14ರಂದು ಪುನೀತ್ ಅವರ ಪತ್ನಿ ಅಶ್ವಿನಿ ಅವರು ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಳ್ಳುತ್ತಾರೆ.[ಪತ್ನಿ ಅಶ್ವಿನಿಗೆ ಅಚ್ಚರಿಯ ಉಡುಗೊರೆ ನೀಡಿದ ಅಪ್ಪು]

ಅಂದಹಾಗೆ ಈ ಬಾರಿ ಕೂಡ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಅವರು ತಮ್ಮ ಹುಟ್ಟುಹಬ್ಬವನ್ನು ಸಂಭ್ರಮದಿಂದ ಪತಿ ಪುನೀತ್ ರಾಜ್ ಕುಮಾರ್ ಅವರ ಜೊತೆ ಆಚರಿಸಿಕೊಂಡಿದ್ದಾರೆ. ಎಂದಿನಂತೆ ಈ ಬಾರಿ ಕೂಡ ಪತ್ನಿಯ ಹುಟ್ಟುಹಬ್ಬವನ್ನು ವಿಶೇಷವಾಗಿ ಅಪ್ಪು ಅವರು ಸೆಲೆಬ್ರೇಟ್ ಮಾಡಿದ್ದಾರೆ.[ಪುನೀತ್ ಡ್ಯುಯೆಟ್ ಗೆ ಕಾಜಲ್ ಅಗರ್ ವಾಲ್ ಚಮಕ್]

ಪುನೀತ್ ಅವರ ಪತ್ನಿ ಅಶ್ವಿನಿ ಅವರು ಪುನೀತ್ ರಾಜ್ ಕುಮಾರ್ ಅವರ ಜೊತೆ ಆಚರಿಸಿಕೊಂಡ ಹುಟ್ಟುಹಬ್ಬದ ಸಂಭ್ರಮದ ಚಿತ್ರಗಳನ್ನು ನೋಡಲು ಸ್ಲೈಡ್ಸ್ ಕ್ಲಿಕ್ ಮಾಡಿ...

ಸಿಂಪಲ್ ಸೆಲೆಬ್ರೇಷನ್

ಸಿಂಪಲ್ ಸೆಲೆಬ್ರೇಷನ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ತಮ್ಮ ಮುದ್ದು ಮಡದಿ ಅಶ್ವಿನಿ ಅವರ ಹುಟ್ಟುಹಬ್ಬವನ್ನು ಕ್ಯೂಟ್ ಆಗಿ ಹಾಗೂ ಭಾರಿ ಸಿಂಪಲ್ ಆಗಿ ಮನೆಯಲ್ಲಿಯೇ ಆಚರಿಸಿದರು.

ಸಿಂಪಲ್ ಪ್ಲ್ಯಾನ್

ಸಿಂಪಲ್ ಪ್ಲ್ಯಾನ್

ಪವರ್ ಸ್ಟಾರ್ ಪುನೀತ್ ಅವರ ಹುಟ್ಟುಹಬ್ಬವನ್ನು ಇಡೀ ಅಭಿಮಾನಿ ಬಳಗದವರು ಬಹಳ ಸಂಭ್ರಮದಿಂದ ಗ್ರ್ಯಾಂಡ್ ಆಗಿ ಆಚರಿಸಿದರೆ, ಪುನೀತ್ ಅವರು ಮಾತ್ರ ತಮ್ಮ ಮನೆಯೊಡತಿಯ ಹುಟ್ಟುಹಬ್ಬವನ್ನು ಸಿಂಪಲ್ ಪ್ಲ್ಯಾನ್ ಮಾಡುವ ಮೂಲಕ ಮನೆಯಲ್ಲಿಯೇ ಆಚರಿಸಿದರು.

ಚಾಕಲೇಟ್ ಫ್ಲೇವರ್ ಕೇಕ್

ಚಾಕಲೇಟ್ ಫ್ಲೇವರ್ ಕೇಕ್

ಮುದ್ದು ಪತ್ನಿ ಅಶ್ವಿನಿ ಅವರು ಇಷ್ಟಪಡುವ ಚಾಕಲೇಟ್ ಫ್ಲೇವರ್ ಕೇಕ್ ತರಿಸಿರುವ ಅಪ್ಪು ಅವರು ಖುದ್ದು ಪತ್ನಿಯ ಪಕ್ಕ ನಿಂತು ಕೇಕ್ ಕಟ್ ಮಾಡಿಸಿ ಹುಟ್ಟುಹಬ್ಬವನ್ನು ಆಚರಿಸಿದರು.

ಹುಟ್ಟುಹಬ್ಬದ ಶುಭಾಶಯಗಳು ಅಶ್ವಿನಿ

ಹುಟ್ಟುಹಬ್ಬದ ಶುಭಾಶಯಗಳು ಅಶ್ವಿನಿ

1999ರಲ್ಲಿ ಅಶ್ವಿನಿ ಅವರ ಕೈ ಹಿಡಿದ ಅಪ್ಪು ಅವರು ಪತ್ನಿಯನ್ನು ದೊಡ್ಮನೆಯ ಯುವರಾಣಿ ತರ ನೋಡಿಕೊಳ್ಳುತ್ತಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಅಶ್ವಿನಿ ಅವರಿಗೆ ನಮ್ಮ ಕಡೆಯಿಂದಲೂ ವಿಶ್ ಯೂ ಹ್ಯಾಪಿ ಬರ್ತ್ ಡೇ.

More from Filmibeat

English summary
Power Star Puneeth Rajkumar's wife Ashwini celebrated her birthday on March 14th. The Actor celebrated his wife's birthday at his residence in a simple manner. The photo of Puneeth Rajkumar-Ashwini clicked at the celebration is here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X