ಸೌತ್ ಅಮೆರಿಕದಲ್ಲಿ ಪುನೀತ್ ಜಾಲಿ: ಇಲ್ಲಿದೆ ವಿಡಿಯೋ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವಿದೇಶ ಪ್ರವಾಸ ಕೈಕೊಂಡು ಅನೇಕ ದಿನಗಳಾಗಿದ್ದವು. ಸದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಪವರ್ ಸ್ಟಾರ್ ಕುಟುಂಬ ಸಮೇತ ಸೌತ್ ಅಮೆರಿಕ ಫ್ಲೈಟ್ ಹತ್ತಿದ್ದರು.
ಮಕ್ಕಳಿಗೆ ಬೇಸಿಗೆ ರಜೆ ಇದ್ದ ಕಾರಣ ಪುನೀತ್ ಮತ್ತು ಪತ್ನಿ ಅಶ್ವಿನಿ ಸೌತ್ ಅಮೇರಿಕಾ ಕಡೆ ಪಯಣ ಬೆಳೆಸಿದ್ದರು. ಅಲ್ಲಿಯ ಸುಂದರ ತಾಣಗಳನ್ನು ಸುತ್ತಾಡಿ ಸಖತ್ ಜಾಲಿ ಮಾಡಿದ್ದಾರೆ. ಪೆರು, ಚಿಲಿ, ಕ್ಯೋಸ್ಕೊ ಸೇರಿದಂತೆ ಅನೇಕ ತಾಣಗಳಲ್ಲಿ ಸುತ್ತಾಡಿದ್ದಾರೆ.
ಅಚ್ಚರಿ ಅಂದ್ರೆ ಪವರ್ ಸ್ಟಾರ್ ರೋಮಾಂಚನಕಾರಿ ಸಾಹಸ ಮಾಡಿದ್ದಾರೆ. ಹೌದು, ಸ್ಕೈಡೈವಿಂಗ್ ಮಾಡುವು ಮೂಲಕ ಅಭಿಮಾನಿಗಳ ಹಾರ್ಟ್ ಬೀಟ್ ಹೆಚ್ಚಿಸಿದ್ದಾರೆ. ಸುಮಾರು ನಿಮಿಶಗಳ ಕಾಲ ಪವರ್ ಸ್ಟಾರ್ ಆಕಾಶದಲ್ಲಿ ಹಾರಾಡಿ ಅಚ್ಚರಿ ಮೂಡಿಸಿದ್ದಾರೆ.

ವಾಟರ್ ಫಾಲ್ಸ್, ಬೋಟಿಂಗ್ ಸೇರಿದಂತೆ ಕುಟುಂಬದ ಜೊತೆ ಮಸ್ತ್ ಮಜಾಮಾಡಿದ್ದಾರೆ ಪುನೀತ್ ಫ್ಯಾಮಿಲಿ. 'ಯುವರತ್ನ' ಚಿತ್ರದಲ್ಲಿ ಬ್ಯುಸಿ ಇರುವ ಪವರ್ ಸ್ಟಾರ್ ಚಿತ್ರೀಕರಣದಿಂದ ಕೊಂಚ ರೆಸ್ಟ್ ಪಡೆದು ದಕ್ಷಿಣ ಅಮೆರಿಕಾ ಟ್ರಿಪ್ ಮುಗಿಸಿ ವಾಪಾಸ್ ಆಗಿದ್ದಾರೆ.
ವಿಶೇಷ ಅಂದ್ರೆ ಪುನೀತ್ ರಾಜ್ ಕುಮಾರ್ ಸುತ್ತಾಡಿದ ಪ್ರದೇಶಗಳನ್ನೆಲ್ಲ ವಿಡಿಯೋ ಮಾಡಿದ್ದಾರೆ. ಸೌತ್ ಅಮೆರಿಕದ ಪ್ರತಿಯೊಂದು ಪ್ರದೇಶಕ್ಕು ಎಂಟ್ರಿ ಕೊಟ್ಟ ರೋಚಕ ಕ್ಷಣಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿಸಿದ್ದಾರೆ. ಪುನೀತ್ ಪ್ರವಾಸದ ವಿಡಿಯೋ ಈಗ ಸಾಮಾಜಿಕಾ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.


Click it and Unblock the Notifications











