ಅಮ್ಮನ ಆಸೆಯಂತೆ ಕಾದಂಬರಿ ಆಧಾರಿತ ಚಿತ್ರದಲ್ಲಿ ಪುನೀತ್?

Recommended Video

ಪುನೀತ್ ಈ ಸಿನಿಮಾ ಮಾಡಬೇಕು ಅನ್ನೋದು ಪಾರ್ವತಮ್ಮನವರ ದೊಡ್ಡ ಆಸೆ..? | FILMIBEAT KANNADA

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದ್ಯ 'ಯುವರತ್ನ' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಪುನೀತ್ ಕಾದಂಬರಿ ಆಧಾರಿತ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಜೊತೆಗೆ ಈ ಸಿನಿಮಾ ನಿರ್ದೇಶನ ಮಾಡಲು ಇಬ್ಬರು ನಿರ್ದೇಶಕರ ಹೆಸರು ಕೂಡ ಕೇಳಿ ಬರುತ್ತಿದೆ.

ಈ ಹಿಂದೆಯೆ ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ ಅವರ 'ಕನಕಾಂಗಿ ಕಲ್ಯಾಣ' ಸಿನಿಮಾ ಆಗುತ್ತಿದೆ ಎಂದು ಹೇಳಲಾಗುತ್ತಿತ್ತು. ಈ ಕಾದಂಬರಿ ಆಧಾರಿತ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಕಾಣಿಸಿಕೊಳ್ಳಲಿದ್ದಾರಂತೆ. ಕಾದಂಬರಿ ಆಧಾರಿತ ಚಿತ್ರಗಳಲ್ಲಿ ಅಭಿನಯಿಸುವುದು ಪುನೀತ್ ಅವರಿಗೂ ಆಸೆಯಿದೆ ಎಂದು ಈ ಹಿಂದೆ ಹೇಳಿಕೊಂಡಿದ್ದರು. ಹಾಗಾಗಿ ಯುವರತ್ನ ಚಿತ್ರದ ನಂತರ ಪುನೀತ್ 'ಕನಕಾಂಗಿ ಕಲ್ಯಾಣ'ದಲ್ಲಿ ಅಭಿನಯಿಸುವುದು ಪಕ್ಕಾ ಎನ್ನುತ್ತಿವೆ ಮೂಲಗಳು.

'ಕನಕಾಂಗಿ ಕಲ್ಯಾಣ' ಪಾರ್ವತಮ್ಮನವರ ಕನಸು

'ಕನಕಾಂಗಿ ಕಲ್ಯಾಣ' ಪಾರ್ವತಮ್ಮನವರ ಕನಸು

ಕುಂ.ವೀರಭದ್ರಪ್ಪನವರ 'ಕನಕಾಂಗಿ ಕಲ್ಯಾಣ' ಸಿನಿಮಾ ಮಾಡಬೇಕೆನ್ನುವುದು ಡಾ.ಪಾರ್ವತಮ್ಮನವರ ದೊಡ್ಡ ಕನಸಾಗಿತ್ತಂತೆ. ಈ ಬಗ್ಗೆ ಪಾರ್ವತಮ್ಮನವರು ಸಾಹಿತಿ ವೀರಭದ್ರಪ್ಪನವರ ಜೊತೆಯು ಚರ್ಚೆಮಾಡಿದ್ದರಂತೆ. ಕಾದಂಬರಿ ಬಗ್ಗೆ ಮೆಚ್ಚುಗೆ ಸೂಚಿಸಿದ್ದ ಪಾರ್ವತಮ್ಮ ಸಿನಿಮಾ ಮಾಡುವ ಕನಸನ್ನು ಹೊರಹಾಕಿದ್ದರಂತೆ.

ದುನಿಯಾ ಸೂರಿ ಬಳಿಯು ಚರ್ಚೆ

ದುನಿಯಾ ಸೂರಿ ಬಳಿಯು ಚರ್ಚೆ

'ಕನಕಾಂಗಿ ಕಲ್ಯಾಣ' ಕಾದಂಬರಿಗೆ ನಿರ್ದೇಶಕ ದುನಿಯಾ ಸೂರಿ ಸಿನಿಮಾ ರೂಪ ಕೊಡುತ್ತಾರೆ ಎಂದು ಹೇಳಲಾಗುತ್ತಿದೆ. ಯಾಕಂದ್ರೆ ಪಾರ್ವತಮ್ಮ ರಾಜ್ ಕುಮಾರ್ ಈ ಹಿಂದೆಯೆ ಅಂದ್ರೆ ಜಾಕಿ ಸಿನಿಮಾದ ಸಮಯದಲ್ಲಿ ಸೂರಿ ಬಳಿ ಹೇಳಿಕೊಂಡಿದ್ದರಂತೆ. ಆದರೆ ಪಾರ್ವತಮ್ಮ ನಿಧನದ ನಂತರ ಆ ವಿಚಾರ ಕೂಡ ಅಲ್ಲಿಗೆ ನಿಂತು ಹೋಗಿದೆ.

ಸೂರಿ ನಿರ್ದೇಶನ ಮಾಡುತ್ತಾರಾ?

ಸೂರಿ ನಿರ್ದೇಶನ ಮಾಡುತ್ತಾರಾ?

ಪಾರ್ವತಮ್ಮ ಅವರ ಆಸೆಯನ್ನು ಸೂರಿ ಬಳಿ ಹೇಳಿಕೊಂಡಿದ್ದರಿಂದ 'ಕನಕಾಂಗಿ ಕಲ್ಯಾಣ' ಚಿತ್ರಕ್ಕೆ ಸೂರಿ ನಿರ್ದೇಶನ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. 'ಪಾಕ್ ಕಾರ್ನ್ ಮಂಕಿ ಟೈಗರ್' ಚಿತ್ರದಲ್ಲಿ ಬ್ಯುಸಿ ಇರುವ ಸೂರಿ ಈ ಸಿನಿಮಾದ ನಂತರ 'ಕನಕಾಂಗಿ ಕಲ್ಯಾಣ' ಕೈಗೆತ್ತಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದ್ರೆ ಸೂರಿ ಇಷ್ಟು ದೊಡ್ಡ ಸಿನಿಮಾವನ್ನು ಮಾಡಲು ಸಾಧ್ಯವಿಲ್ಲ, ಜೊತೆಗೆ ಆ ಕಾಲವನ್ನು ರಿ ಕ್ರಿಯೇಟ್ ಮಾಡುವುದು ಕಷ್ಟ, ತುಂಬ ತಾಳ್ಮೆ ಬೇಕು ಎನ್ನುವ ಕಾರಣಕ್ಕೆ ಸುಮ್ಮನಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಅಪ್ಪುಗೆ ನಿರ್ದೇಶನ ಮಾಡುತ್ತಾರಾ ಕೃಷ್ಣ?

ಅಪ್ಪುಗೆ ನಿರ್ದೇಶನ ಮಾಡುತ್ತಾರಾ ಕೃಷ್ಣ?

'ಕನಕಾಂಗಿ ಕಲ್ಯಾಣ' ನಿರ್ದೇಶನದಿಂದ ಸೂರಿ ಹಿಂದೆ ಸರಿದ ಮೇಲೆ ಆ ಜಾಗದಲ್ಲಿ ಪೈಲ್ವಾನ್ ಕೃಷ್ಣ ಹೆಸರು ಕೇಳಿ ಬರುತ್ತಿದೆ. ಕಾದಂಬರಿ ಆಧಾರಿತ ಚಿತ್ರವನ್ನು ತೆರೆ ಮೇಲೆ ತರಲು ಕೃಷ್ಣ ಆಸಕ್ತಿ ತೋರಿದ್ದಾರಂತೆ. ಹಾಗಾಗಿ ಈ ಸಿನಿಮಾವನ್ನು ಕೃಷ್ಣ ಮಾಡುವ ಸಾಧ್ಯತೆ ಇದೆ. ಸದ್ಯ ಪೈಲ್ವಾನ್ ರಿಲೀಸ್ ಗೆ ಕಾಯುತ್ತಿರುವ ಕೃಷ್ಣ ನಂತರ 'ಕನಕಾಂಗಿ ಕಲ್ಯಾಣ' ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

More from Filmibeat

English summary
Kannada actor Puneeth Rajkumar might act in a novel based Kanakaangi Kalyana film. Kanakangi Kalyana penned by write Kum Veerabhadrappa
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X