»   » 15 ಲಕ್ಷದ ಬೈಕ್ ಮೇಲೆ ಪವರ್ ಸ್ಟಾರ್, ಪವರ್ ಫುಲ್ ರೈಡ್

15 ಲಕ್ಷದ ಬೈಕ್ ಮೇಲೆ ಪವರ್ ಸ್ಟಾರ್, ಪವರ್ ಫುಲ್ ರೈಡ್

Posted By:
Subscribe to Filmibeat Kannada

ಸಿನಿಮಾದ ಯಾವ ಸ್ಟಾರ್ ಗಳಿಗೆ ಬೈಕ್ ಇಷ್ಟ ಇರಲ್ಲ ಹೇಳಿ ಸಾಮಾನ್ಯವಾಗಿ ಎಲ್ಲಾ ಸ್ಟಾರ್ ಗಳಿಗೂ ಬೈಕ್ ಕ್ರೇಜ್ ಇದ್ದೇ ಇರುತ್ತೆ. ಅಂದಹಾಗೆ ಇದೀಗ ಸ್ಯಾಂಡಲ್ ವುಡ್ ಸ್ಟಾರ್ ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೂ ಸಖತ್ ಸ್ಪೀಡ್ ಆಗಿ ಬೈಕ್ ಓಡಿಸೋದು ಅಂದ್ರೆ ತುಂಬಾ ಇಷ್ಟವಂತೆ.

ಜೊತೆಗೆ ಸಖತ್ ಬೈಕ್ ಕ್ರೇಜ್ ಇರುವ ಅಪ್ಪು ಅವರಿಗೂ ಬೈಕ್ ಓಡಿಸೋದು ಅಂದ್ರೆ ಸಿಕ್ಕಾಪಟ್ಟೆ ಕ್ರೇಜ್. ತೆರೆಯ ಮೇಲೆ ಸ್ಪೀಡಾಗಿ ಬೈಕ್ ಓಡಿಸುತ್ತಿದ್ದ ಪವರ್ ಸ್ಟಾರ್ ಇದೀಗ ಬರೋಬ್ಬರಿ 15 ಲಕ್ಷ ಬೆಲೆಬಾಳುವ ಯುಎಸ್ ಮೂಲದ ಆಶ್ ಕಲರ್ ನ ಇಂಡಿಯನ್ ಸ್ಕೌಟ್ ಬೈಕೊಂದನ್ನು ಖರೀದಿಸಿದ್ದಾರೆ.[ಶಿವಣ್ಣ ಮಗಳ ಮದುವೆಯಲ್ಲಿ ಸುದೀಪ್-ಪುನೀತ್ ಮಾಡಿದ್ದೇನು?]

puneeth rajkumar

1133 ಸಿಸಿಯ ಬೈಕ್ ಓಡಿಸುವ ಮಜಾನೇ ಬೇರೆ. ಇಂತಹ ವೇಗದ ಬೈಕನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಸ್ವತಃ ಸ್ಪಲ್ಪ ದೂರ ರೈಡ್ ಮಾಡಿ ಸಂಭ್ರಮಪಟ್ಟರು.[ಮದುವೆಯಲ್ಲಿ ಜನ ಜಾತ್ರೆ : ಶಿವಣ್ಣ ಕುಟುಂಬಕ್ಕೆ ಸಿಗದ ಊಟ.!]

ಒಟ್ನಲ್ಲಿ ಬರೋಬ್ಬರಿ 15 ಲಕ್ಷದಂತಹ ಭರ್ಜರಿ ಮೊತ್ತದ ಬೈಕ್ ಖರೀದಿಸಿ ಸುದ್ದಿಯಾಗಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಣ್ಣನ ಮಗಳ ಮದುವೆಯ ಸಂಭ್ರಮವನ್ನು ಮುಗಿಸಿಕೊಂಡು ತಮ್ಮ ಮುಂದಿನ ಚಿತ್ರಗಳಾದ 'ಚಕ್ರವ್ಯೂಹ', 'ದೊಡ್ಮನೆ ಹುಡುಗ', ಮುಂತಾದ ಚಿತ್ರಗಳ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

    English summary
    Kannada Actor Puneeth Rajkumar Purchased new indian Scout super Bike.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada