For Quick Alerts
  ALLOW NOTIFICATIONS  
  For Daily Alerts

  'ಕಥಾ ಸಂಗಮ' ಮೆಚ್ಚಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

  |

  ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ 'ಕಥಾ ಸಂಗಮ'ದ ಮೂಲಕ ನಿರ್ದೇಶಕ ರಿಷಬ್ ಶೆಟ್ಟಿ ಹೊಸ ಸಾಹಸಕ್ಕೆ ಕೈಹಾಕಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇತ್ತೀಚಿಗಷ್ಟೆ 'ಕಥಾ ಸಂಗಮ' ಚಿತ್ರದ ಟ್ರೈಲರ್ ರಿಲೀಸ್ ಮಾಡಿ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿರುವ ಚಿತ್ರತಂಡ, ಈಗ ಹಾಡುಗಳನ್ನು ಬಿಡುಗಡೆ ಮಾಡಿದೆ.

  ಇತ್ತೀಚಿಗೆ ನಡೆದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಜೊತೆಗೆ ಕಥಾ ಸಂಗಮ ಟ್ರೈಲರ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೆ ಸಂದರ್ಭದಲ್ಲಿ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರನ್ನು ನೆನಪಿಸಿಕೊಂಡಿದ್ದಾರೆ.

  'ನೀವು ನನ್ನ ಸಿನಿಮಾದಲ್ಲಿ ನಟಿಸಿ' ಎಂದು ಪುನೀತ್ ಆಫರ್ ಕೊಟ್ಟಿದ್ದು ಯಾರಿಗೆ.?'ನೀವು ನನ್ನ ಸಿನಿಮಾದಲ್ಲಿ ನಟಿಸಿ' ಎಂದು ಪುನೀತ್ ಆಫರ್ ಕೊಟ್ಟಿದ್ದು ಯಾರಿಗೆ.?

  "ಪುಟ್ಟಣ್ಣ ಕಣಗಾಲ್ ಅಂದಾಕ್ಷಣ ಸಾಕ್ಷಾತ್ಕಾರ ನೆನಪಾಗುತ್ತೆ. ಕನ್ನಡ ಚಿತ್ರರಂಗವನ್ನು ಬೆಳೆಸಿದ ದೊಡ್ಡ ದೊಡ್ಡ ನಿರ್ದೇಶಕರನ್ನು ಭೇಟಿಯಾಗಿದ್ದೇನೆ, ಜೊತೆಗೆ ಅವರ ಜೊತೆ ಕೆಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದೀನಿ. ಆದರೆ ನಾನು ಪುಟ್ಟಣ್ಣ ಕಣಗಾಲ್ ಅವರನ್ನು ಭೇಟಿ ಮಾಡಿದ ನೆನಪು ನನಗಿಲ್ಲ. ಯಾಕೆ ಅಂತ ಗೊತ್ತಿಲ್ಲ. ಎಷ್ಟು ಮುಂದಾಲೋಚನೆ ಇಟ್ಟುಕೊಂಡು ಸಿನಿಮಾ ಮಾಡುತ್ತಿದ್ದರು. ಅವರು ಮಾಡಬೇಕು ಅಂತ ಅಂದುಕೊಂಡಿದ್ದ ಸಿನಿಮಾವನ್ನು ಈಗ ರಿಷಬ್ ಶೆಟ್ಟಿ ಮಾಡಿದ್ದಾರೆ" ಎಂದು ಪುನೀತ್ ಹೇಳಿದ್ದಾರೆ.

  ಕಥಾ ಸಂಗಮ ಏಳು ನಿರ್ದೇಶಕರು ಮಾಡಿರುವ ಸಿನಿಮಾ. ಇಲ್ಲಿ ಏಳು ನಿರ್ದೇಶಕರ ಏಳು ಕಥೆಗಳು ಇದೆ. ಈ ಏಳು ಕಥೆಗಳ ಸಂಗಮವೆ 'ಕಥಾ ಸಂಗಮ'. ಏಳು ಸಂಗೀತ ನಿರ್ದೇಶಕರು, ಏಳು ಛಾಯಾಗ್ರಾಹಕರು ಈ ಸಿನಿಮಾಗಾಗಿ ಕೆಲಸ ಮಾಡಿದ್ದಾರೆ. ಪುಟ್ಟಣ್ಣ ಕಣಗಾಲ್ ರವರಿಂದ ಸ್ಫೂರ್ತಿಗೊಂಡಿರುವ ರಿಷಬ್ ಶೆಟ್ಟಿ, 1975 ರಲ್ಲಿ ಬಿಡುಗಡೆ ಆದ ಪುಟ್ಟಣ್ಣ ಕಣಗಲ್ ರವರ ಜನಪ್ರಿಯ ಚಿತ್ರ 'ಕಥಾ ಸಂಗಮ' ಟೈಟಲ್ ಅನ್ನೆ ಇಲ್ಲಿ ಬಳಸಿಕೊಂಡಿರುವುದ ವಿಶೇಷ.

  English summary
  Kannada actor Puneeth Rajkumar released 'Katha Sangama' Audio. This movie is directed by seven director.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X