»   » ಸುದೀಪ್ ಗಾಗಿ ಚೋರರ ಕಥೆ ಹೆಣೆಯುತ್ತಿರುವ ರಕ್ಷಿತ್

ಸುದೀಪ್ ಗಾಗಿ ಚೋರರ ಕಥೆ ಹೆಣೆಯುತ್ತಿರುವ ರಕ್ಷಿತ್

By: ಸೋನು ಗೌಡ
Subscribe to Filmibeat Kannada

ಸ್ಯಾಂಡಲ್ ವುಡ್ ಸ್ಟಾರ್ ರಕ್ಷಿತ್ ಶೆಟ್ಟಿ 'ಉಳಿದವರು ಕಂಡಂತೆ' ಚಿತ್ರದ ನಂತರ ಮುಂದಿನ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರಕ್ಕೆ ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್ ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ.

ಹೌದು 'ಉಳಿದವರು ಕಂಡಂತೆ' ಖ್ಯಾತಿಯ ನಟ ಕಮ್ ನಿರ್ದೇಶಕ ರಕ್ಷಿತ್ ಶೆಟ್ಟಿ ನಿರ್ದೇಶನದ ಮುಂದಿನ ಚಿತ್ರ 'ಥಗ್ಸ್ ಆಫ್ ಮಾಲ್ಗುಡಿ' ಗೆ ಕಿಚ್ಚ ಸುದೀಪ್ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Kannada Actor Rakshit Shetty Begins work on his next film with Kichcha Sudeep

ಇದೀಗ ಲೇಟೇಸ್ಟ್ ಮಾಹಿತಿ ಏನಪ್ಪಾ ಅಂದ್ರೆ ರಕ್ಷಿತ್ ಶೆಟ್ಟಿ ಅವರ 'ಥಗ್ಸ್ ಆಫ್ ಮಾಲ್ಗುಡಿ' ಚಿತ್ರದ ಸ್ಕ್ರಿಪ್ಟ್ ತಯಾರಾಗುತ್ತಿದ್ದು, ಆದಷ್ಟು ಬೇಗನೆ ಮುಗಿಸಿ ಜನವರಿ ತಿಂಗಳಿನಲ್ಲಿ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಾಗುವುದು ಎಂದು ಫಿಲ್ಮಿಬೀಟ್ ಕನ್ನಡಕ್ಕೆ ತಿಳಿಸಿದ್ದಾರೆ.

ಈ ಹಿಂದೆ 'ಬಿಗ್ ಬಾಸ್' ರಿಯಾಲಿಟಿ ಶೋ ಸೆಟ್ ನಲ್ಲಿ ಕಿಚ್ಚ ಸುದೀಪ್ ಅವರನ್ನು ಭೇಟಿಯಾಗಿದ್ದ, ರಕ್ಷಿತ್ ಶೆಟ್ಟಿ ಸುದೀಪ್ ಅವರಿಗೋಸ್ಕರ ಒಂದು ಚಿತ್ರ ಮಾಡುವುದಾಗಿ ಹೇಳಿದ್ದರು. ಆದಕ್ಕೆ ಸುದೀಪ್ ಕೂಡ ರಕ್ಷಿತ್ ಶೆಟ್ಟಿಯೊಂದಿಗೆ ಮುಂದಿನ ಪ್ರಾಜೆಕ್ಟ್ ಗೆ ರೆಡಿ ಅಂತಾನೂ ಹೇಳಿದ್ದರು.

ಇದೀಗ 'ಉಳಿದವರು ಕಂಡಂತೆ' ಚಿತ್ರಕ್ಕೆ ಬೆಸ್ಟ್ ಡೈರೆಕ್ಟರ್ ಆವಾರ್ಡ್ ಕೂಡ ಪಡೆದುಕೊಂಡಿರುವ ರಕ್ಷಿತ್ ಶೆಟ್ಟಿ 'ಥಗ್ಸ್ ಆಫ್ ಮಾಲ್ಗುಡಿ'ಯಲ್ಲಿ ಬ್ಯಸಿಯಾಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದಷ್ಟು ಬೇಗನೆ ನೆರವೇರಿದರೆ ಇದೇ ಜನವರಿಯಲ್ಲಿ, ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್, ರಕ್ಷಿತ್ ಕಾಂಬಿನೇಷನ್ ನಲ್ಲಿ ಅದ್ದೂರಿ ಚಿತ್ರ ಸೆಟ್ಟೇರಲಿದೆ.

'ಉಳಿದವರು ಕಂಡಂತೆ' ಚಿತ್ರದಲ್ಲಿ ಉಳಿದವರಿಗೆ ಕಾಣಲು ಬಿಟ್ಟ ರಕ್ಷಿತ್ ಶೆಟ್ಟಿ ಇಲ್ಲಿ ಅದ್ಯಾರಿಗೆ ಬಿಟ್ಟುಕೊಡುತ್ತಾರೆ ಅನ್ನೋದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ. ಒಟ್ಟಿನಲ್ಲಿ ಕಿಚ್ಚ ಸುದೀಪ್ ಕಂಡಂತೆ 'ಥಗ್ಸ್ ಆಫ್ ಮಾಲ್ಗುಡಿ'.

English summary
Kannada Actor-Director Rakshit Shetty Begins work on his next film 'Thugs of Malgudi' with Kichcha Sudeep.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada