ರಕ್ಷಿತ್ ಶೆಟ್ಟಿ ಸಿನಿಮಾ ಪಯಣಕ್ಕೆ 10 ವರ್ಷದ ಸಂಭ್ರಮ: ಗೆಳೆಯನಿಗೆ ಶುಭಹಾರೈಸಿದ ರಿಷಬ್ ಶೆಟ್ಟಿ

ಸ್ಯಾಂಡಲ್ ವುಡ್ ನ 'ಸಿಂಪಲ್ ಸ್ಟಾರ್' ಎಂದೇ ಖ್ಯಾತಿಗಳಿಸಿರುವ ನಟ ರಕ್ಷಿತ್ ಶೆಟ್ಟಿ ಬಣ್ಣದ ಲೋಕದ ಪಯಣಕ್ಕೆ 10 ವರ್ಷದ ಸಂಭ್ರಮ. ಇಂದು ದೊಡ್ಡ ನಟನಾಗಿ ಬೆಳೆದುನಿಂತಿರುವ ರಕ್ಷಿತ್ ಯಶಸ್ಸಿನ ಹಿಂದೆ ಅವರ ಪರಿಶ್ರಮವೂ ಅಷ್ಟೇ ಇದೆ. ಸಾಕಷ್ಟು ಏಳು ಬೀಳುಗಳ ನಡುವೆ ರಕ್ಷಿತ್ ಇಂದು ಪ್ಯಾನ್ ಇಂಡಿಯಾ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ.

Recommended Video

Rakshith Shetty ಸಿನಿ ಪಯಣಕ್ಕೆ 10 ವರ್ಷ | Filmibeat Kannada

'ನಮ್ ಏರಿಯಲ್ ಒಂದು ದಿನ' ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ರಕ್ಷಿತ್ ಗೆ ಈ ಸಿನಿಮಾ ಹೇಳುವಷ್ಟು ಯಶಸ್ಸು ತಂದು ಕೊಟ್ಟಿಲ್ಲ. ಮೊದಲ ಸಿನಿಮಾವೇ ದೊಡ್ಡ ನಿರಾಸೆ ಮಾಡಿಸಿತು. ಆ ನಂತರ ಬಂದ 'ತುಘಲಕ್' ಸಿನಿಮಾ ಕೂಡ ಬಾಕ್ಸ್ ಆಫೀಸ್ ನಲ್ಲಿ ಸೋಲು ಕಂಡಿತು. ಛಲಬಿಡದ ರಕ್ಷಿತ್ 'ಸಿಂಪಲ್ ಆಗಿ ಒಂದು ಲವ್ ಸ್ಟೋರಿ' ಸಿನಿಮಾ ಮೂಲಕ ಮತ್ತೆ ಕನ್ನಡ ಸಿನಿಮಾ ಪ್ರಿಯರ ಮುಂದೆ ಬಂದರು.

ಈ ಸಿನಿಮಾ ರಕ್ಷಿತ್ ಸಿನಿ ಜೀವನವನ್ನೆ ಬದಲಾಯಿಸಿತು. ಆ ನಂತರ ಸಿಂಪಲ್ ಸ್ಟಾರ್ ಸ್ಯಾಂಡಲ್ ವುಡ್ ನಲ್ಲಿ ಖ್ಯಾತಿಗಳಿಸಿದರು. ಗಾಡ್ ಫಾದರ್ ಇಲ್ಲದೆ ಚಿತ್ರರಂಗದಲ್ಲಿ ಬೆಳೆಯುವುದು ಅಷ್ಟು ಸುಲಭವಲ್ಲ. ಆದರೆ ರಕ್ಷಿತ್ ಬೆಳೆದು ತೋರಿಸಿದರು. ಕೇವಲ ನಟನಾಗಿ ಮಾತ್ರವಲ್ಲದೆ, ನಿರ್ದೇಶಕನಾಗಿ, ನಿರ್ಮಾಪಕನಾಗಿಯೂ ಖ್ಯಾತಿಗಳಿಸಿದ್ದಾರೆ. ಮುಂದೆ ಓದಿ..

ಉಡುಪಿ ಮೂಲದವರು

ಉಡುಪಿ ಮೂಲದವರು

ಉಡುಪಿ ಮೂಲದವರಾದ ರಕ್ಷಿತ್ ಓದಿದ್ದು ಉಡುಪಿಯಲ್ಲಿ. ಮಂಗಳೂರಿನಲ್ಲಿ ಇಂಜಿನಿಯರಿಂಗ್ ಮುಗಿಸಿದ ರಕ್ಷಿತ್ ಆ ನಂತರ ಎರಡೂ ವರ್ಷ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡಿದ್ದಾರೆ. ಆದರೆ ಸಿನಿಮಾ ಮೇಲಿನ ಪ್ರೀತಿ, ಕನಸು ರಕ್ಷಿತ್ ಅವರನ್ನು ಚಿತ್ರರಂಗಕ್ಕೆ ಕರೆತಂದಿದೆ.

ಮೊದಲ ನಿರ್ದೇಶನ

ಮೊದಲ ನಿರ್ದೇಶನ

'ಉಳಿದವರು ಕಂಡಂತೆ' ಸಿನಿಮಾ ಮೂಲಕ ರಕ್ಷಿತ್ ಚೊಚ್ಚಲ ಸಿನಿಮಾ ನಿರ್ದೇಶನ ಮಾಡಿ ಗೆದ್ದು ಬೀಗಿದರು. ರಕ್ಷಿತ್ ನಿರ್ದೇಶನದ ಮೊದಲ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು. ಕರಾವಳಿ ಬ್ಯಾಕ್ ಡ್ರಾಪ್ ನಲ್ಲಿ ಮೂಡಿಬಂದ ಈ ಸಿನಿಮಾ ಕರಾವಳಿ ಭಾಗದವರಿಗೆ ಮಾತ್ರವಲ್ಲದೆ ಕನ್ನಡ ಸಿನಿಮಾಪ್ರಿಯರನ್ನು ಮಂತ್ರಮುಗ್ದಗೊಳಿಸಿತು.

ಸಿನಿಮಾಗಳ ಸಕ್ಸಸ್

ಸಿನಿಮಾಗಳ ಸಕ್ಸಸ್

ಉಳಿದವರು ಕಂಡಂತೆ ಸಿನಿಮಾ ನಂತರ ರಕ್ಷಿತ್ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ಬಡಿಸುತ್ತಾ ಬಂದಿದ್ದಾರೆ. ರಿಕ್ಕಿ, ಗೋಧಿ ಬಣ್ಣ ಸಾಧಾರಣ ಮೈಕಟ್ಟು ಕಿರಿಕ್ ಪಾರ್ಟಿ ಮತ್ತು ಅವನೇ ಶ್ರೀಮನ್ನಾರಾಯಣ ಸಿನಿಮಾಗಳು ರಕ್ಷಿತ್ ಗೆ ಸಿನಿಮಾ ಜೀವನನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದಿದೆ.

ಕಿರಿಕ್ ಪಾರ್ಟಿ ಯಶಸ್ಸು

ಕಿರಿಕ್ ಪಾರ್ಟಿ ಯಶಸ್ಸು

2016ರಲ್ಲಿ ಬಂದ ಕಿರಿಕ್ ಪಾರ್ಟಿ ಸಿನಿಮಾ ರಕ್ಷಿತ್ ಸಿನಿಮಾ ಬದುಕಿಗೆ ಹೊಸ ಇಮೇಜ್ ತಂದುಕೊಟ್ಟಿತು. ಸ್ಯಾಂಡಲ್ ವುಡ್ ಮಾತ್ರವಲ್ಲದೆ ಬೇರೆ ಭಾಷೆಯವರು ಈ ಸಿನಿಮಾ ನೋಡಿ ಹಾಡಿಹೊಗಳಿದರು. ನಂತರ ಅವನೇ ಶ್ರೀಮನ್ನಾರಾಯಣ ಸಿನಮೂಲಕಮೂಲಕ ಪ್ಯಾನ್ ಇಂಡಿಯಾ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ಇಂದು ದೊಡ್ಡ ಮಟ್ಟದ ಅಭಿಮಾನಿ ಬಳಗ ಹೊಂದಿರುವ ರಕ್ಷಿತ್ ಗೆ ಶುಭಾಶಯಗಳ ಮಹಾಪೂರವೆ ಹರಿದು ಬರುತ್ತಿದೆ.

ಕಾಮನ್ ಡಿಪಿ ರಿಲೀಸ್ ಮಾಡಿ ಅಭಿಮಾನಿಗಳ ಶುಭಾಶಯ

ಕಾಮನ್ ಡಿಪಿ ರಿಲೀಸ್ ಮಾಡಿ ಅಭಿಮಾನಿಗಳ ಶುಭಾಶಯ

ಅಭಿಮಾನಿಗಳ ಜೊತೆಗೆ ಚಿತ್ರರಂಗದ ಗಣ್ಯರು ವಿಶ್ ಮಾಡುತ್ತಿದ್ದಾರೆ. ರಕ್ಷಿತ್ ಶೆಟ್ಟಿ ಕಾಮನ್ ಡಿಪಿ ರಿಲೀಸ್ ಮಾಡಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಾರೆ. ಇನ್ನೂ ವಿಶೇಷ ಅಂದರೆ ರಕ್ಷಿತ್ ಶೆಟ್ಟಿ ಗೆಳೆಯ ರಿಷಬ್ ಶೆಟ್ಟಿ 10 ವರ್ಷ ತುಂಬಿದ ಸಂಭ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ರಿಷಬ್ ಶೆಟ್ಟಿ ವಿಶ್

ರಿಷಬ್ ಶೆಟ್ಟಿ ವಿಶ್

"ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ ನನ್ನ ಸ್ನೇಹಿತ ರಕ್ಷಿತ್ ಚಿತ್ರರಂಗಕ್ಕೆ ಪ್ರವೇಶಿಸಿ‌ ಇಂದಿಗೆ 10 ವರ್ಷ. ಮಗಾ, ಕನ್ನಡ ಚಿತ್ರರಂಗವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕೆಂಬ ನಿನ್ನ‌ ಆಸೆ, ಕನಸು, ಹಂಬಲ ಎಲ್ಲದಕ್ಕೂ ಮೀರಿದ್ದು. ನಿನ್ನ ಮುಂದಿನ ಸಿನಿ ಜೀವನ ಇನ್ನಷ್ಟು ಸಿಹಿಯಾಗಿರಲಿ ಎಂದು ಹಾರೈಸುತ್ತೇನೆ".

ರಕ್ಷಿತ್ ಶೆಟ್ಟಿ ಬಳಿ ಇರುವ ಸಿನಿಮಾಗಳು

ರಕ್ಷಿತ್ ಶೆಟ್ಟಿ ಬಳಿ ಇರುವ ಸಿನಿಮಾಗಳು

ರಕ್ಷಿತ್ ಶೆಟ್ಟಿ ಸದ್ಯ 2 ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 777 ಚಾರ್ಲಿ, ಸಪ್ತಸಾಗರದಾಚೆ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಈ ಎರಡು ಸಿನಿಮಾಗಳು ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ. ರಕ್ಷಿತ್ ಮತ್ತಷ್ಟು ಸಿನಿಮಾಗಳನ್ನು ಮಾಡಲಿ, ಉತ್ತಮ ಸಿನಿಮಾಗಳನ್ನು ನೀಡಿಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎನ್ನುವುದು ಅಭಿಮಾನಿಗಳ ಆಶಯ.

More from Filmibeat

English summary
Kannada Actor Rakshith Shetty completes 10 years in film industry. Rakshit Shetty debut cinema in 2010.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X