ಬಹು ದಿನಗಳ ನಂತರ ಫೇಸ್ ಬುಕ್ ಲೈವ್ ಬಂದ ರಕ್ಷಿತ್ ಹೇಳಿದ್ದೇನು?

Recommended Video

Rakshit Shetty Gave Avane Srimannarayana Updates On Facebook Live| FILMIBEAT KANNADA

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿಮಾನಿಗಳ ಮುಂದೆ ಬರದೆ ವರ್ಷಗಳೆ ಆಗಿದೆ. 'ಕಿರಿಕ್ ಪಾರ್ಟಿ' ಸಿನಿಮಾ ನಂತರ ರಕ್ಷಿತ್ ಈಗ 'ಅವನೇ ಶ್ರೀಮನ್ನಾರಾಯಣ' ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಪ್ರಾರಂಭವಾಗಿ ಎರಡು ವರ್ಷದ ಮೇಲಾಗಿದೆ ಆದರು ರಕ್ಷಿತ್ ಸಿನಿಮಾದ ಬಗ್ಗೆ ಹೆಚ್ಚು ಅಪ್ ಡೇಟ್ಸ್ ಸಿಗುತ್ತಿಲ್ಲ ಎನ್ನುವುದು ಅಭಿಮಾನಿಗಳ ಬೇಸರವಾಗಿತ್ತು.

ಆದ್ರೀಗ ಸ್ವತಃ ರಕ್ಷಿತ್ ಫೇಸ್ ಬುಕ್ ಲೈವ್ ಬರುವ ಮೂಲಕ ಬಹು ನಿರೀಕ್ಷೆಯ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಬಗ್ಗೆ ಒಂದಿಷ್ಟು ಇಂಟ್ರಸ್ಟಿಂಗ್ ವಿಚಾರವನ್ನು ಹಂಚಿಕೊಂಡಿದ್ದಾರೆ. "ಚಿತ್ರದ ಲೈವ್ ರೆಕಾರ್ಡಿಂಗ್ ಮೆಸಿಡೋನಿಯಾದಲ್ಲಿ ನಡೆಯುತ್ತಿದೆ. ಮುಂಬೈ ಮತ್ತು ಚೆನ್ನೈನಲ್ಲಿ ರೆಕಾರ್ಡಿಂಗ್ ಮಾಡಿದ್ವಿ, ಆದರೆ ಮೊದಲ ಬಾರಿಗೆ ಮೆಸಿಡೋನಿಯಾದಲ್ಲಿ ರೆಕಾರ್ಡಿಂಗ್ ಮಾಡುತ್ತಿದ್ದೇವೆ" ಎಂದು ಹೇಳಿದ್ದರು.

ಅಜ್ಜು ಅಂದ್ರೆ ಅಜನೀಶ್ ಮತ್ತು ರಕ್ಷಿತ್ ಇಬ್ಬರು ಮೆಸಿಡೋನಿಯಾಗೆ ಹೋಗಬೇಕಿತ್ತಂತೆ. ಪೋಸ್ಟ್ ಪ್ರೊಡಕ್ಷನ್ ಕೆಲಸದ ಹಿನ್ನಲೆ ಮೆಸಿಡೋನಿಯಾ ಹೋಗುವುದನ್ನು ನಿಲ್ಲಿಸಿ ಅಜ್ಜು ಸ್ಟುಡಿಯೋದಲ್ಲಿ ಸ್ಕೈಪ್ ಮೂಲಕ ರೆಕಾರ್ಡಿಂಗ್ ಮಾಡುತ್ತಿದ್ದಾರೆ. ಈ ರೆಕಾರ್ಡಿಂಗ್ ಪ್ರೋಸೆಸ್ ಅನ್ನು ಫೇಸ್ ಬುಕ್ ಲೈವ್ ಮೂಲಕ ಅಭಿಮಾನಿಗಳಿಗೆ ತೋರಿಸಿದ್ದಾರೆ ರಕ್ಷಿತ್.

Kannada Actor Rakshith Shetty Came In Facebook Live After Long

ಈಗಾಗಲೆ ಚೆನ್ನೈನಲ್ಲಿ ಒಂದು ವರ್ಷನ್ ರೆಕಾರ್ಡಿಂಗ್ ಮಾಡಿದ್ದಾರಂತೆ. ಆದ್ರೀಗ ಮೆಸಿಡೋನಿಯಾದಲ್ಲಿ ರೆಕಾರ್ಡಿಂಗ್ ಮಾಡುತ್ತಿದ್ದಾರೆ. ಚೆನ್ನೈ ಮತ್ತು ಮೆಸಿಡೋನಿಯಾದಲ್ಲಿ ಮಾಡಿದ ರೆಕಾರ್ಡಿಂಗ್ ಗುಣಮಟ್ಟದಲ್ಲಿ ಎಷ್ಟು ವ್ಯತ್ಯಾಸವಿರಲಿದೆ ಎಂದು ಪ್ರಯೋಗ ಮಾಡುತ್ತಿದ್ದಾರಂತೆ. ಯಾಕಂದ್ರೆ ಮೆಸಿಡೋನಿಯಾದಲ್ಲಿರುವ ರೆಕಾರ್ಡಿಂಗ್ ಸ್ಟುಡಿಯೋ ಹಾಗೆಯೆ ಬೆಂಗಳೂರಿನಲ್ಲಿಯೂ ಮಾಡಬೇಕೆನ್ನುವುದು ರಕ್ಷಿತ್ ಮತ್ತು ಅಜನೀಶ್ ಕನಸಂತೆ.

Kannada Actor Rakshith Shetty Came In Facebook Live After Long

ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇರುವ ಚಿತ್ರತಂಡ ಎಲ್ಲವು ಅಂದುಕೊಂಡಂತೆ ಆದರೆ ಡಿಸೆಂಬರ್ ನಲ್ಲಿ ಸಿನಿಮಾ ರಿಲೀಸ್ ಮಾಡುವ ಸಾಧ್ಯತೆ ಇದೆ. ಸದ್ಯ ರೆಕಾರ್ಡಿಂಗ್ ನಲ್ಲಿ ನಿರತವಾಗಿರುವ ಅವನೇ ಶ್ರೀಮನ್ನಾರಾಯಣ ಟ್ರೈಲರ್ ಮುಂದಿನ ವಾರ ರಿಲೀಸ್ ಆಗುವ ಸಾಧ್ಯತೆ ಇದೆ.

More from Filmibeat

English summary
Kannada actor Rakshith Shetty came in Facebook live after long for Avane Srimannarayana updates.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X