For Quick Alerts
  ALLOW NOTIFICATIONS  
  For Daily Alerts

  Rakshith Shetty Birthday: ಹುಟ್ಟುಹಬ್ಬದ ಸಂಭ್ರಮದಲ್ಲಿ ಸಿಂಪಲ್ ಸ್ಟಾರ್

  |

  ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಗೆ ಇಂದು (ಜೂನ್ 6) ಹುಟ್ಟುಹಬ್ಬದ ಸಂಭ್ರಮ. 38ನೇ ವಸಂತಕ್ಕೆ ಕಾಲಿಟ್ಟಿರುವ ರಕ್ಷಿತ್ ಶೆಟ್ಟಿ ಸಿಂಪಲ್ ಆಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕೊರೊನಾ ಲಾಕ್ ಡೌನ್ ಕಾರಣ ಅದ್ದೂರಿ ಹುಟ್ಟುಹಬ್ಬ, ಸಂಭ್ರಮಕ್ಕೆ ಬ್ರೇಕ್ ಹಾಕಲಾಗಿದೆ.

  HappyBirthdayRakshitShetty ಇಂದು ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿಗೆ ಜನ್ಮದಿನದ ಸಂಭ್ರಮ

  ಅದ್ದೂರಿತನ, ಸಂಭ್ರಮದ ಆಚರಣೆ ಇಲ್ಲದಿದ್ದರೂ ಅಭಿಮಾನಿಗಳು ಮತ್ತು ಸ್ನೇಹಿತರ ಪ್ರೀತಿಯ ಶುಭ ಹಾರೈಕೆಗಳು ರಕ್ಷಿತ್ ಸಂತಸ, ಸಂಭ್ರಮವನ್ನು ಹೆಚ್ಚು ಮಾಡಿದೆ. ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯಗಳ ಸುರಿಮಳೆಯೇ ಹರಿದು ಬರುತ್ತಿದೆ.

  ರಕ್ಷಿತ್ ಹುಟ್ಟುಹಬ್ಬದ ಪ್ರಯುಕ್ತ ಬಹುನಿರೀಕ್ಷೆಯ 777 ಚಾರ್ಲಿ ಸಿನಿಮಾತಂಡ ಟೀಸರ್ ಗಿಫ್ಟ್ ಆಗಿ ನೀಡಲು ಸಿದ್ಧತೆ ನಡೆಸಿದೆ. ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾ ಇದಾಗಿದ್ದು, ಈಗಾಗಲೇ ಪೋಸ್ಟರ್ ಮತ್ತು ಮೇಕಿಂಗ್ ವಿಡಿಯೋ ಮೂಲಕ ಅಭಿಮಾನಿಗಳ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಇದೀಗ ಹುಟ್ಟುಹಬ್ಬದ ವಿಶೇಷವಾಗಿ ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದೆ.

  777 ಚಾರ್ಲಿ ಸಿನಿಮಾ ಐದು ಭಾಷಯಲ್ಲಿ ತೆರೆಗೆ ಬರುತ್ತಿದ್ದು, ಟೀಸರ್ ಕೂಡ ಐದು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಪರಭಾಷೆಯ ಸ್ಟಾರ್ ಕಲಾವಿದರು ಚಿತ್ರದ ಟೀಸರ್ ಬಿಡುಗಡೆ ಮಾಡುತ್ತಿರುವುದು ಚಿತ್ರದ ವಿಶೇಷ. ಇನ್ನೂ ರಕ್ಷಿತ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 777 ಚಾರ್ಲಿ ಮುಗಿಯುತ್ತಿದ್ದಂತೆ ಸಪ್ತ ಸಾಗರದಾಚೆ ಎಲ್ಲೋ ಚಿತ್ರೀಕರಣ ಪ್ರಾರಂಭ ಮಾಡಿದ್ದರು. ಆದರೆ ಕೊರೊನಾ ಕಾರಣದಿಂದ ಚಿತ್ರೀಕರಣ ಸ್ಥಗಿತಗೊಳಿಸಲಾಗಿದೆ. ಈ ಸಿನಿಮಾದಿಂದನೂ ಏನಾದರೂ ವಿಶೇಷ ಉಡುಗರೆ ಸಿಕ್ಕರು ಅಚ್ಚರಿ ಇಲ್ಲ.

  'ನಮ್ ಏರಿಯಾದಲ್ಲಿ ಒಂದಿನ' ಸಿನಿಮಾದಿಂದ ತಮ್ಮ ಸಿನಿ ಪಯಣ ಪ್ರಾರಂಭ ಮಾಡಿದ ರಕ್ಷಿತ್ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಸ್ಯಾಂಲ್ ವುಡ್ ನಲ್ಲಿ ತನ್ನದೆ ಛಾಪು ಮೂಡಿಸಿದ್ದಾರೆ. ರಕ್ಷಿತ್ ಕೊನೆಯದಾಗಿ ಅವನೇ ಶ್ರೀಮನ್ನಾರಾಯಣ ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ 'ಪುಣ್ಯಕೋಟಿ', 'ಕಿರಿಕ್ ಪಾರ್ಟಿ 2', ಮತ್ತು ತಮ್ಮದೇ ನಿರ್ದೇಶನದ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ನಟಿಸಲಿದ್ದಾರೆ.

  English summary
  Kannada Actor Rakshith Shetty celebrating his birthday today.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X