ಹುಟ್ಟುಹಬ್ಬದ ದಿನ ಬಿಂದಾಸ್ ಹುಲಿ ಡ್ಯಾನ್ಸ್ ಮಾಡಿದ ರಕ್ಷಿತ್ ಶೆಟ್ಟಿ

Recommended Video

Avane Srimannarayana Movie: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅದ್ಧೂರಿಯಾಗಿ ಹುಟ್ಟುಹಬ್ಬ

ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಸುಮಾರು ವರ್ಷದಿಂದ ಅಭಿಮಾನಿಗಳಿಂದ ದೂರ ಇದ್ದ ರಕ್ಷಿತ್ ಈ ಬಾರಿಯ ಹುಟ್ಟುಹಬ್ಬದ ಮೂಲಕ ಭರ್ಜರಿ ಎಂಟ್ರಿಯೊಂದಿಗೆ ದರ್ಶನ ನೀಡಿದ್ದಾರೆ.

ರಕ್ಷಿತ್ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಸಖತ್ ಟ್ರೀಟ್ ಕೂಡ ಸಿಕ್ಕಿದೆ. ಸಿಂಪಲ್ ಸ್ಟಾರ್ ಅಭಿನಯದ ಹೊಸ ಸಿನಿಮಾಗಳ ಪೋಸ್ಟರ್ಸ್ ರಿಲೀಸ್ ಆಗಿದೆ. ಜೊತೆಗೆ ಬಹು ನಿರೀಕ್ಷೆಯ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಟೀಸರ್ ರಿಲೀಸ್ ಆಗಿದೆ.

ಸಖತ್ ಸಂತಸದಲ್ಲಿರುವ ರಕ್ಷಿತ್ ಹುಟ್ಟುಹಬ್ಬದ ದಿನ ಮಸ್ತ್ ಮಜಾ ಮಾಡಿದ್ದಾರೆ. ಡ್ಯಾನ್ಸ್ ಮಾಡಿ ಕುಣಿದು ಕೊಪ್ಪಳಿಸಿದ್ದಾರೆ. ವಿಶೇಷವಾಗಿ ರಕ್ಷಿತ್ ಹುಲಿ ಹೆಜ್ಜೆ ಹಾಕಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂದೆ ಓದಿ..

ರಕ್ಷಿತ್ ಹುಲಿ ಡ್ಯಾನ್ಸ್ ಸಖತ್ ವೈರಲ್

ರಕ್ಷಿತ್ ಹುಲಿ ಡ್ಯಾನ್ಸ್ ಸಖತ್ ವೈರಲ್

ಹುಟ್ಟುಹಬ್ಬದ ದಿನ ರಕ್ಷಿತ್ ಮಸ್ತ್ ಮಜಾ ಮಾಡಿದ್ದಾರೆ. ಸ್ನೇಹಿತರೊಂದಿದೆ ಕೇಕ್ ಕತ್ತರಿಸಿ ನಂತರ ಬಿಂದಾಸ್ ಹೆಜ್ಜೆ ಹಾಕಿದ್ದಾರೆ. ವಿಶೇಷವಾಗಿ ರಕ್ಷಿತ್ ಅವರ ಹುಲಿ ಡ್ಯಾನ್ಸ್ ಅಭಿಮಾನಿಗಳ ಹಾಟ್ ಫೇವರಿಟ್. ಜನ್ಮದ ದಿನದ ಸಂಭ್ರಮದಲ್ಲಿ ಹುಲಿ ಕುಣಿತಮಾಡಿದ್ದಾರೆ. ಈ ವೀಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಸ್ನೇಹಿತರ ಜೊತೆ ಹುಟ್ಟುಹಬ್ಬ

ಸ್ನೇಹಿತರ ಜೊತೆ ಹುಟ್ಟುಹಬ್ಬ

ರಕ್ಷಿತ್ ಈ ಬಾರಿ ಸ್ನೇಹಿತರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ನಿರ್ಮಾಪಕ ಪುಷ್ಕರ್ ಮಲ್ಲಿಖಾರ್ಜುನಯ್ಯ, ಅವನೇ ಶ್ರೀಮನ್ನಾರಾಯಣ ಚಿತ್ರತಂಡ ಮತ್ತು 777ಚಾರ್ಲಿ ಚಿತ್ರತಂಡ ರಕ್ಷಿತ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗಿಯಾಗಿದ್ರು. ಜೊತೆಗೆ ರಕ್ಷಿತ್ ಆಪ್ತ ಸ್ನೇಹಿತರ ಬಳಗ ಕೂಡ ಭಾಗಿಯಾಗಿ, ರಕ್ಷಿತ್ ಜೊತೆ ಸಖತ್ ಸ್ಟೆಪ್ ಹಾಕಿ ಎಂಜಾಯ್ ಮಾಡಿದ್ದಾರೆ.

ಅಭಿಮಾನಿಗಳಿಗೆ ಸಿಕ್ತು ಭರ್ಜರಿ ಗಿಫ್ಟ್

ಅಭಿಮಾನಿಗಳಿಗೆ ಸಿಕ್ತು ಭರ್ಜರಿ ಗಿಫ್ಟ್

ರಕ್ಷಿತ್ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಭರ್ಜರಿ ಟ್ರೀಟ್ ಸಿಕ್ಕಿದೆ. 'ಅವನೇ ಶ್ರೀಮನ್ನಾರಾಯಣ' ಚಿತ್ರದ ಟೀಸರ್ ಮತ್ತು '777 ಚಾರ್ಲಿ' ಚಿತ್ರದ ಇಂಟ್ರಸ್ಟಿಂಗ್ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಜೊತೆಗೆ ರಕ್ಷಿತ್ ಸಾಮಾಜಿಕ ಜಾಲತಾಣಕ್ಕೆ ವಾಪಸ್ ಬಂದಿದ್ದಾರೆ.

ಶ್ರೀಮನ್ನಾರಾಯಣನಿಗೆ ಅಭಿಮಾನಿಗಳು ಫಿದಾ

ಶ್ರೀಮನ್ನಾರಾಯಣನಿಗೆ ಅಭಿಮಾನಿಗಳು ಫಿದಾ

ರಕ್ಷಿತ್ ನಾಯಕನಾಗಿ ಮಿಂಚಿರುವ 'ಅನವೇ ಶ್ರೀಮನ್ನಾರಾಯಣ' ಟೀಸರ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಟೀಸರ್ ನೋಡಿ ಚಿತ್ರಪ್ರಿಯರು ಫಿದಾ ಆಗಿದ್ದಾರೆ. ಸುಮಾರು ಎರಡು ವರ್ಷಗಳಿಂದ ಕಾಯಿಸಿದ್ದ ರಕ್ಷಿತ್ ಕೊನೆಗೂ ಅಭಿಮಾನಿಗಳಿಗೆ ಶ್ರೀಮನ್ನಾರಾಯಣ ಮೂಲಕ ಭರ್ಜರಿ ಟ್ರೀಟ್ ಕೊಟ್ಟಿದ್ದಾರೆ. 'ಅವನೇ ಶ್ರೀಮನ್ನಾರಾಯಣ' ಸಚಿನ್ ರವಿ ಸಾರಥ್ಯದಲ್ಲಿ ಮೂಡಿಬಂದ ಸಿನಿಮಾ. ಚಿತ್ರಕ್ಕೆ ಪುಷ್ಕರ್ ಮಲ್ಲಿಖಾರ್ಜುನಯ್ಯ ಬಂಡವಾಳ ಹೂಡಿದ್ದಾರೆ.

More from Filmibeat

English summary
Kannada actor Rakshith Shetty huli dance on his birthday. This video is going viral. Rakshith Shetty celebrated his 36th birthday in June 6th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X