»   » ರಿಕ್ಕಿ ಅಲಿಯಾಸ್ ರಕ್ಷಿತ್ ಶೆಟ್ಟಿ ಕಂಡಂತೆ 'ಜಾತ್ರೆ'

ರಿಕ್ಕಿ ಅಲಿಯಾಸ್ ರಕ್ಷಿತ್ ಶೆಟ್ಟಿ ಕಂಡಂತೆ 'ಜಾತ್ರೆ'

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಸ್ಟಾರ್ ಚೇತನ್ ಚಂದ್ರ ಅಭಿನಯದ 'ಜಾತ್ರೆ' ಚಿತ್ರದ ಆಡಿಯೋ ರಿಲೀಸ್ ಆಗಿದ್ದು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ 'ಉಳಿದವರು ಕಂಡಂತೆ' ಖ್ಯಾತಿಯ ರಕ್ಷಿತ್ ಶೆಟ್ಟಿ ಪಾಲ್ಗೊಂಡಿದ್ದರು.

ಇದೀಗ 'ಜಾತ್ರೆ' ಚಿತ್ರತಂಡದಿಂದ ಲೇಟೆಸ್ಟ್ ಸುದ್ದಿ ಏನಪ್ಪಾ ಅಂದ್ರೆ ರಿಕ್ಕಿ ಅಲಿಯಾಸ್ ರಕ್ಷಿತ್ ಶೆಟ್ಟಿ ರವಿ ತೇಜಾ ಆಕ್ಷನ್-ಕಟ್ ಹೇಳುತ್ತಿರುವ 'ಜಾತ್ರೆ' ಚಿತ್ರದಲ್ಲಿ ಗೆಸ್ಟ್ ರೋಲ್ ಮಾಡುತ್ತಿದ್ದಾರಂತೆ.

Kannada actor Rakshith Shetty to played guest appearance In kannada movie 'Jaatre'

ನಿರ್ಮಾಪಕರ ಮಾತಿನ ಮೇರೆಗೆ ಇದೀಗ ರಕ್ಷಿತ್ ಶೆಟ್ಟಿ ಅವರು 'ಜಾತ್ರೆ' ಚಿತ್ರದಲ್ಲಿ ಗೆಸ್ಟ್ ರೋಲ್ ಮಾಡಲು ಒಪ್ಪಿಕೊಂಡಿದ್ದಾರಂತೆ. ಈಗಾಗಲೇ 'ಗೋಧಿ ಬಣ್ಣ ಸಾಧರಣ ಮೈ ಕಟ್ಟು' ಚಿತ್ರದಲ್ಲಿ ಬ್ಯುಸಿಯಾಗಿರುವ ರಿಕ್ಕಿಗೆ ಸದ್ಯಕ್ಕೆ ಕೈ ತುಂಬಾ ಪ್ರಾಜೆಕ್ಟ್ ಗಳಿವೆ.

'ಪ್ರೇಮಿಸಂ', 'ಕುಂಭರಾಶಿ' ಮುಂತಾದ ಚಿತ್ರಗಳ ನಂತರ ನಾಪತ್ತೆಯಾಗಿದ್ದ ನಾಯಕ ಚೇತನ್ ಚಂದ್ರ ಸದ್ಯಕ್ಕೆ ಗಡ್ಡಾ ವಿಜಿ ನಿರ್ದೇಶನದ 'ಪ್ಲಸ್' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ 'ಜಾತ್ರೆ' ಚಿತ್ರದ ಮೂಲಕ ಮತ್ತೊಮ್ಮೆ ಸ್ಯಾಂಡಲ್ ವುಡ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ.

Kannada actor Rakshith Shetty to played guest appearance In kannada movie 'Jaatre'

ಕೆ.ರಾಮಸ್ವಾಮಿ ಬ್ಯಾನರಡಿಯಲ್ಲಿ ಮೂಡಿಬರುತ್ತಿರುವ 'ಜಾತ್ರೆ' ಚಿತ್ರದಲ್ಲಿ ಐಶ್ವರ್ಯ ನಾಗ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಮಾತ್ರವಲ್ಲದೇ ಚಿತ್ರಕ್ಕೆ ಸ್ಪೆಷಲ್ ಆಗಿ ಚೇತನ್ ಚಂದ್ರ ಸಿಕ್ಸ್ ಪ್ಯಾಕ್ ದೇಹ ಬೆಳೆಸಿದ್ದು, ಕ್ಲಾಸ್ ಜೊತೆಗೆ ಮಾಸ್ ಲುಕ್ ನಲ್ಲಿ ಮಿಂಚಿದ್ದಾರೆ.

ಒಟ್ನಲ್ಲಿ ಭಾರಿ ನಿರೀಕ್ಷೆ ಇಟ್ಟುಕೊಂಡಿರುವ 'ಜಾತ್ರೆ' ಚೇತನ್ ಚಂದ್ರ ಅವರಿಗೆ ಸಿಲ್ವರ್ ಸ್ಕ್ರೀನ್ ನಲ್ಲಿ ಯಶಸ್ಸು ತಂದುಕೊಡುವಲ್ಲಿ ಯಶಸ್ವಿಯಾಗಬಹುದೇ ಅನ್ನೋದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

English summary
Kannada actor Rakshith Shetty has made a guest appearance in kannada movie 'Jaatre' and he himself disclosed during the audio release of the film held in last week. 'Jaatre' features Kannada actor Chetan Chandra, Actress Aishwarya Nag in the lead role. The movie is directed by Raviteja.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada