For Quick Alerts
  ALLOW NOTIFICATIONS  
  For Daily Alerts

  ರಕ್ಷಿತ್ ಶೆಟ್ಟಿ ನರ್ವಸ್ ಆಗಿದ್ದರಂತೆ, ಕಾರಣನೂ ಅವರೇ ಹೇಳಿದ್ದಾರೆ.!

  By Bharath Kumar
  |
  ರಕ್ಷಿತ್ ಶೆಟ್ಟಿ ಭಯಕ್ಕೆ ಕರಣ ಏನ್ ಗೊತ್ತಾ | Filmibeat Kannada

  ನಟ ರಕ್ಷಿತ್ ಶೆಟ್ಟಿ ತುಂಬಾ ನರ್ವಸ್ ಆಗಿದ್ದರಂತೆ. ಈ ಮಾತು ಕೇಳಿದ ತಕ್ಷಣ ಬಹುಶಃ ಶೆಟ್ರ ಮದುವೆ ದಿನಾಂಕ ಏನಾದರೂ ಫಿಕ್ಸ್ ಆಯ್ತಾ ಎಂಬ ಕುತೂಹಲವೇ ಹೆಚ್ಚು. ಸದ್ಯಕ್ಕೆ ಮದುವೆ ಬಗ್ಗೆ ರಕ್ಷಿತ್ ಅವರು ಯೋಚನೆ ಮಾಡಿಲ್ಲ.

  ಮತ್ತೇನು ಅಂತ ನೋಡಿದ್ರೆ, ಜೂನ್ 6 ಕ್ಕೆ ಅವರ ಬರ್ತಡೇ. ಇನ್ನೇನೂ ಒಂದೇ ದಿನ ಬಾಕಿ. ಹೀಗಾಗಿ, ಹುಟ್ಟುಹಬ್ಬದ ಬಗ್ಗೆ ಯೋಚನೆ ಮಾಡ್ತಾ ನರ್ವಸ್ ಆಗಿದ್ದಾರೆ ಅಂತ ಅನ್ಕೊಂಡ್ರೆ ಅದು ಅಲ್ಲ.

  ಜೂನ್ 6ಕ್ಕೆ ರಕ್ಷಿತ್ ಶೆಟ್ಟಿ ಕಡೆಯಿಂದ ಸ್ಪೆಷಲ್ ಗಿಫ್ಟ್ ಇದೆಯಂತೆ.! ಜೂನ್ 6ಕ್ಕೆ ರಕ್ಷಿತ್ ಶೆಟ್ಟಿ ಕಡೆಯಿಂದ ಸ್ಪೆಷಲ್ ಗಿಫ್ಟ್ ಇದೆಯಂತೆ.!

  ಹಾಗಿದ್ರೆ, ರಕ್ಷಿತ್ ಶೆಟ್ಟಿ ನರ್ವಸ್ ಆಗಲು ಬೇರೆಯದ್ದೇನೋ ಕಾರಣ ಇದೆ ಅನ್ನೋದು ಅಲ್ಲಿಗೆ ಖಾತ್ರಿಯಾಯಿತು. ಈ ಬಗ್ಗೆ ಸ್ವತಃ ಸಿಂಪಲ್ ಸ್ಟಾರ್ ಸರಣಿ ಟ್ವೀಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. ರಕ್ಷಿತ್ ಶೆಟ್ಟಿ ಮಾಡಿರುವ ಟ್ವೀಟ್ ಗಳನ್ನ ನೋಡಿದ್ರೆ, ಅವರ ನರ್ವಸ್ ಗೆ ಕಾರಣವೇನು ಎಂಬುದು ಪಕ್ಕಾ ಗೊತ್ತಾಗುತ್ತೆ. ಮುಂದೆ ಓದಿ.....

  ಜೂನ್ 6 ತುಂಬಾ ಸ್ಪೆಷಲ್

  ಜೂನ್ 6 ತುಂಬಾ ಸ್ಪೆಷಲ್

  ಜೂನ್ 6 ರಕ್ಷಿತ್ ಶೆಟ್ಟಿ ಅವರ ಹುಟ್ಟುಹಬ್ಬ. ಅದಕ್ಕಿಂತ ಸ್ಪೆಷಲ್ ಅಂದ್ರೆ, ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಮತ್ತು ಚಾರ್ಲಿ 777 ಚಿತ್ರಗಳ ಫಸ್ಟ್ ಲುಕ್ ಬಿಡುಗಡೆಯಾಗಲಿದೆ. ಹೀಗಾಗಿ, ಇದು ಅಭಿಮಾನಿಗಳಿಗೆ ಎಷ್ಟರ ಮಟ್ಟಿಗೆ ಇಷ್ಟವಾಗುತ್ತೆ ಎಂಬುದು ಅವರ ನರ್ವಸ್ ಗೆ ಕಾರಣವಾಗಿದೆ. ಅದನ್ನ ಟ್ವೀಟ್ ಮೂಲಕ ಹೊರಹಾಕಿದ್ದಾರೆ.

  ರಕ್ಷಿತ್ ಶೆಟ್ಟಿ ಈಗ 8 ಪ್ಯಾಕ್ಸ್ ನಾರಾಯಣರಕ್ಷಿತ್ ಶೆಟ್ಟಿ ಈಗ 8 ಪ್ಯಾಕ್ಸ್ ನಾರಾಯಣ

  ಮೂರು ದಿನಗಳ ಹಿಂದೆ

  ''ಮೂರು ದಿನಗಳ ಹಿಂದೆ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಎರಡನೇ ಹಂತದ ಚಿತ್ರೀಕರಣ ಮುಗಿಸಿ ಬಿಜಾಪುರದಿಂದ ವಾಪಸ್ ಆಗುವ ವೇಳೆ ನಾನು ತುಂಬಾ ನರ್ವಸ್ ಆಗಿದ್ದೇ. ಯಾಕಂದ್ರೆ, ಜೂನ್ 6ಕ್ಕೆ ಫಸ್ಟ್ ಲುಕ್ ಬಿಡುಗಡೆ ಮಾಡುತ್ತೇವೆ ಎಂದು ನೀಡಿದ್ದ ಭರವಸೆಯನ್ನ ಈಡೇರಿಸುತ್ತೇವಾ ಎಂಬುದು ಕಾಡುತ್ತಿತ್ತು.?''

  ನಾನು ಚಿಂತಿಸುವ ಅಗತ್ಯವಿಲ್ಲ

  ''ಯಾವಾಗ ನಾವು ಅದ್ಭುತ ತಂಡವನ್ನು ಹೊಂದಿರುತ್ತೇವೋ ಆಗ ನಾವು ಚಿಂತಿಸುವ ಅಗತ್ಯವಿಲ್ಲ. ಯಾವುದು ಅಸಾಧ್ಯವಲ್ಲ. 'ಅವನೇ ಶ್ರೀಮನ್ನಾರಾಯಣ' ಚಿತ್ರದ ಫಸ್ಟ್ ಲುಕ್ ಟೀಸರ್ ಕಳೆದ ರಾತ್ರಿ ಸಿದ್ಧವಾಗಿದೆ. ಮತ್ತು ಲೈವ್ ರೆಕಾರ್ಡಿಂಗ್ ಮತ್ತು ಫೈನಲ್ ಮಿಕ್ಸಿಂಗ್ ಗಾಗಿ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮಧ್ಯರಾತ್ರಿಯೇ ಚೆನ್ನೈಗೆ ತೆರಳಿದ್ದಾರೆ''

  ಖಂಡಿತಾ ಇಷ್ಟವಾಗುತ್ತೆ

  VFX ಕೆಲಸವು ಅಂತಿಮ ಹಂತದಲ್ಲಿದೆ ಮತ್ತು ಅದರಲ್ಲಿರುವ ವಿಷಯಗಳನ್ನು ತುಂಬಾ ಕೂಲ್ ಆಗಿದೆ. ಈ ಫಸ್ಟ್ ಲುಕ್ ಗಾಗಿ ನೀವು ಎದುರುನೋಡಬಹುದು. ಖಂಡಿತಾ ನಿಮಗೆ ಅದು ಇಷ್ಟವಾಗುತ್ತೆ ಎಂದು ನಾನು ನಂಬಿದ್ದೇನೆ. ಈಗ ಕೃತಜ್ಞತೆಯ ಸಲುವಾಗಿ ಒಂದು ಸಣ್ಣ ಶೂಟಿಂಗ್. ನಂತರ ನಾನು ನಿದ್ದೆ ಮಾಡುತ್ತೇನೆ'' ಎಂದು ರಕ್ಷಿತ್ ಶೆಟ್ಟಿ ತಮ್ಮ ಅನುಭವವನ್ನ ಹಂಚಿಕೊಂಡಿದ್ದಾರೆ.

  English summary
  kannada actor rakshith shetty has taken his twitter account to express his opinion about avane srimannarayana movie teaser. teaser will be released on june 6th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X