ಸುದೀಪ್ 'ಪೈಲ್ವಾನ್' ಸಿನಿಮಾದಲ್ಲಿ ನಟ ರಮೇಶ್ ಅರವಿಂದ್

Recommended Video

Pailwaan movie : 'ಪೈಲ್ವಾನ್' ಸಿನಿಮಾದಲ್ಲಿ ನಟ ರಮೇಶ್ ಅರವಿಂದ್ | FILMIBEAT KANNADA

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಸದ್ಯ ರಿಲೀಸ್ ಗೆ ರೆಡಿಯಾಗಿದೆ. ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಪೈಲ್ವಾನ್ ಇದೆ ತಿಂಗಳು 12ಕ್ಕೆ ದೇಶದಾದ್ಯಂತ ತೆರೆಗೆ ಬರುತ್ತಿದೆ. ಕನ್ನಡ ಮಾತ್ರವಲ್ಲದೆ ಐದು ಭಾಷೆಯಲ್ಲಿ ಪೈಲ್ವಾನ್ ಅಬ್ಬರಿಸಲಿದೆ.

ಸದ್ಯ ಪೈಲ್ವಾನ್ ಚಿತ್ರದಿಂದ ಮತ್ತೊಂದು ಇಂಟ್ರಸ್ಟಿಂಗ್ ಮಾಹಿತಿ ಹೊರಬಿದ್ದಿದೆ. ಹೌದು, ನಟ ರಮೇಶ್ ಅರವಿಂದ್ ಪೈಲ್ವಾನ್ ಚಿತ್ರದಲ್ಲಿ ಇದ್ದಾರೆ. ಇದೇನಿದು ಕೊನೆ ಕ್ಷಣದಲ್ಲಿ ಬ್ರೇಕಿಂಗ್ ಸುದ್ದಿ ಅಂತ ಅಂದುಕೊಳ್ಳುತ್ತಿದ್ದೀರಾ. ಆದ್ರಿದು ನಿಜ. ರಮೇಶ್ ಅರವಿಂದ್ ಸಹ ಪೈಲ್ವಾನ್ ಚಿತ್ರದ ಭಾಗವಾಗಿದ್ದಾರೆ.

ಅಂದ್ಹಾಗೆ ರಮೇಶ್ ಪೈಲ್ವಾನ್ ನಲ್ಲಿ ಕಾಣಿಸಿಕೊಳ್ಳುವುದಿಲ್ಲ, ಬದಲಿದೆ ಅವರ ಧ್ವನಿ ಚಿತ್ರಮಂದಿರದಲ್ಲಿ ಕೇಳಿಸಲಿದೆ. ಹೌದು. ಪೈಲ್ವಾನ್ ಚಿತ್ರದ ಪ್ರಾರಂಭದಲ್ಲಿ ರಮೇಶ್ ಹಿನ್ನಲೆ ಧ್ವನಿ ನೀಡಿದ್ದಾರಂತೆ. ಕನ್ನಡ ವರ್ಷನ್ ಗೆ ಮಾತ್ರ ರಮೇಶ್ ಹಿನ್ನಲೆ ಧ್ವನಿ ನೀಡಿದ್ದಾರಂತೆ.

Kannada Actor Ramesh Aravind Gave Voice For Sudeep Starrer Pailwaan Film

ಇತ್ತೀಚಿಗಷ್ಟೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪೈಲ್ವಾನ್ ಚಿತ್ರದ ಆಡಿಯೋವನ್ನು ರಿಲೀಸ್ ಮಾಡಿದ್ದರು. ಈಗ ರಮೇಶ್ ಅರವಿಂದ್ ಸಹ ಸಾಥ್ ನೀಡಿದ್ದಾರೆ. ಮೊದಲ ಬಾರಿಗೆ ಕಿಚ್ಚ ಸಿಕ್ಸ್ ಪ್ಯಾಕ್ ನಲ್ಲಿ ಕಾಣಿಸಿಕೊಂಡು ಕುಸ್ತಿ ಅಖಾಡದಲ್ಲಿ ತೊಡೆ ತಟ್ಟಿ ನಿಂತಿದ್ದಾರೆ. ಚಿತ್ರಕ್ಕಾಗಿ ಸಿಕ್ಕಾಪಟ್ಟೆ ವರ್ಕೌಟ್ ಮಾಡಿರುವ ಸುದೀಪ್ ಶ್ರಮ ಟ್ರೈಲರ್ ನಲ್ಲಿ ಎದ್ದು ಕಾಣುತ್ತಿದೆ.

ಕೃಷ್ಣ ಸಾರಥ್ಯದಲ್ಲಿ ಮೂಡಿ ಬಂದಿರುವ ಪೈಲ್ವಾನ್ ಸೆಪ್ಟಂಬರ್ 12ರಂದು ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಲಾಳಂ ಮತ್ತು ಹಿಂದಿಯಲ್ಲಿ ತೆರೆಗೆ ಬರುತ್ತಿದೆ. ಈಗಾಗಲೆ ಭರ್ಜರಿ ಪ್ರಮೋಷನ್ ನಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಸುಮಾರು ಮೂರು ಸಾವಿರಕ್ಕು ಹೆಚ್ಚು ಚಿತ್ರಮಂದಿರಗಳಲ್ಲಿ ಪೈಲ್ವಾನ್ ತೆರೆಗೆ ಬರುತ್ತಿರುವುದು ವಿಶೇಷ.

ಚಿತ್ರದಲ್ಲಿ ಸುದೀಪ್ ಜೊತೆ ಬಾಲಿವುಡ್ ನಟ ಕನ್ನಡಿಗ ಸುನೀಲ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಸುನೀಲ್ ಶೆಟ್ಟಿ ಕನ್ನಡ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಇನ್ನು ಸುದೀಪ್ ಗೆ ನಾಯಕಿಯಾಗಿ ಆಕಾಂಕ್ಷ ಸಿಂಗ್ ಬಣ್ಣಹಚ್ಚಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಸಾಕಷ್ಟು ವಿಶೇಷತೆಗಳಿಂದ ಸದ್ದು ಮಾಡುತ್ತಿರುವ ಪೈಲ್ವಾನ್ ಹೇಗಿರಲಿದೆ ಎನ್ನುವ ಕುತೂಹಲಕ್ಕೆ ಇದೆ ತಿಂಗಳು 12ರಂದು ತೆರೆಬೀಳಲಿದೆ.

More from Filmibeat

English summary
Kannada actor Ramesh Aravind gave voice for Sudeep starrer Pailwaan film. This movie is directed by Krishna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X