ನಟಿ ರಶ್ಮಿಕಾ ಮಂದಣ್ಣ ಮದುವೆಯಾಗುವ ಹುಡುಗ ಹೀಗಿರಬೇಕಂತೆ.!
ಸ್ಯಾಂಡಲ್ ವುಡ್ ನಟಿ ರಶ್ಮಿಕಾ ಮಂದಣ್ಣ ಈಗ ಟಾಲಿವುಡ್ ಇಂಡಸ್ಟ್ರಿಯ ಬಹು ಬೇಡಿಕೆಯ ನಟಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತ, ಸ್ಟಾರ್ ನಟರ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಗಿಟ್ಟಿಸಿಕೊಳ್ಳುತ್ತಿರುವ ರಶ್ಮಿಕಾ ಯಶಸ್ಸಿನ ಶಿಖರ ಏರುತ್ತ ಸಾಗಿದ್ದಾರೆ.
ಈಗಾಗಲೆ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಮತ್ತು ಅಲ್ಲು ಅರ್ಜುನ್ ಸೇರಿದಂತೆ ಸಾಕಷ್ಟು ಸ್ಟಾರ್ ನಟರ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿರುವ ರಶ್ಮಿಕಾ, ಈಗ ಡಿಯರ್ ಕಾಮ್ರೇಡ್ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಐದು ಭಾಷೆಯಲ್ಲಿ ತೆರೆಗೆ ಬರುತ್ತಿರುವ ಡಿಯರ್ ಕಾಮ್ರೇಡ್ ಗಾಗಿ ರಶ್ಮಿಕಾ ದಕ್ಷಿಣ ಭಾರತವನ್ನು ಸುತ್ತುತ್ತಿದ್ದಾರೆ.
ಈ ಸಮಯದಲ್ಲಿ ರಶ್ಮಿಕಾ ತಾನು ಮದುವೆಯಾಗುವ ಹುಡುಗನ ಹೇಗಿರಬೇಕು ಎನ್ನುವ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ. ರಕ್ಷಿತ್ ಶೆಟ್ಟಿ ಜೊತೆ ಬ್ರೇಕ್ ಅಪ್ ಆದ ನಂತರ ರಶ್ಮಿಕಾ ಮದುವೆಯಾಗುವ ಹುಡುಗನ ಬಗ್ಗೆ ಹೇಳಿರುವುದು ರಶ್ಮಿಕಾ ಸಧ್ಯದಲ್ಲೇ ಮದುವೆ ಆಗುತ್ತಾರಾ ಎನ್ನುವ ಅನುಮಾನ ಮೂಡಿದೆ.

ಆಲ್ಕೋಹಾಲ್ ಓಕೆ, ನೋ ಸ್ಮೋಕ್
ರಶ್ಮಿಕಾ ಮದುವೆಯಾಗುವ ಹುಡುಗ ಸ್ಮೋಕ್ ಮಾಡಬಾರದಂತೆ. ಯಾಕಂದ್ರೆ ರಶ್ಮಿಕಾಗೆ ಸ್ಮೋಕ್ ಅಂದ್ರೆ ಆಗುವುದಿಲ್ಲವಂತೆ. ಸಿಗರೇಟು ಸೇದುವವರನ್ನು ತುಂಬ ದ್ವೇಷ ಮಾಡುತ್ತಾರೆ. ಇನ್ನು ಆಲ್ಕೋಹಾಲ್ ತಗೊಂಡ್ರೆ ಏನು ಪರವಾಗಿಲ್ಲವಂತೆ. ಹಾಗಂತ ಕುಡುಕ ಆಗಿರಬಾರದಂತೆ. ಸಾಮಾನ್ಯ ಡ್ರಿಂಕ್ಸ್ ಪರವಾಗಿಲ್ಲವಂತೆ.

ರೋಮ್ಯಾಂಟಿಕ್ ಆಗಿರಬೇಕು
ರಶ್ಮಿಕಾ ಮದುವೆಯಾಗುವ ಹುಡುಗ ತುಂಬ ರೋಮ್ಯಾಂಟಿಕ್ ಆಗಿರಬೇಕಂತೆ. ಸೀರಿಯಸ್ ಆಗಿ ಇರಬಾರದಂತೆ. ತುಂಬ ಒಳ್ಳೆಯ ವ್ಯಕ್ತಿಯಾಗಿರಬೇಕಂತೆ. ಆತನ ವೈಬ್ ರಶ್ಮಿಕಾಗೆ ಇಷ್ಟವಾಗುವಂತೆ ಇರಬೇಕಂತೆ. ರಶ್ಮಿಕಾಳ ಇಷ್ಟ, ಕಷ್ಟ ಕೇಳದಿದ್ರು ಪರವಾಗಿಲ್ಲ ಅಂತೆ ಆದ್ರೆ ಆತ ರಶ್ಮಿಕಾ ಬಳಿ ಸುಳ್ಳು ಹೇಳಬಾರದಂತೆ.

ವಯಸ್ಸಿನ ಅಂತರ ಅಡ್ಡಿಯಿಲ್ಲ
ರಶ್ಮಿಕಾಗೆ ವಯಸ್ಸಿನ ಅಂತರ ಪರವಾಗಿಲ್ಲವಂತೆ. ಹುಡುಗನ ವಯಸ್ಸು ಎಷ್ಟಿದ್ದರು ಪರವಾಗಿಲ್ಲ, ಅಂತರದ ಬಗ್ಗೆ ತೊಂದರೆ ಇಲ್ಲ ಅಂತ ಹೇಳಿದ್ದಾರೆ. ರಶ್ಮಿಕಾ ಜೊತೆ ಹೆಚ್ಚು ಸಮಯ ಕಳೆಯಬೇಕಂತೆ. ಎಷ್ಟೆ ಕೆಲಸವಿದ್ದರು ರಶ್ಮಿಕಾಗಾಗಿ ಪ್ರತ್ಯೇಕ ಸಮಯ ಕೊಡುವಂತಹ ಹುಡುಗ ಬೇಕಂತೆ.

ಉದ್ದ ಇರಬೇಕು, ನೋ ಸಿಕ್ಸ್ ಪ್ಯಾಕ್
ರಶ್ಮಿಕಾ ಮದುವೆ ಆಗುವ ಹುಡುಗ ಉದ್ದ ಇರಬೇಕಂತೆ. ರಶ್ಮಿಕಾ 5.5 ಅಡಿ ಎತ್ತರವಿದ್ದಾರಂತೆ. ಆದ್ರೆ ಹುಡುಗ ರಶ್ಮಿಕಾಗಿಂತ ಎತ್ತರವಿರಬೇಕಂತೆ. ಇನ್ನು ಸಿಕ್ಸ್ ಪ್ಯಾಕ್ ಇರುವ ಹುಡುಗ ಬೇಡವಂತೆ. ಆದ್ರೆ ವರ್ಕೌಟ್ ಮಾಡಿ ಫಿಟ್ ಅಂಡ್ ಫೈನ್ ಆಗಿರಬೇಕಂತೆ.


Click it and Unblock the Notifications











