ಚೆನ್ನೈನಲ್ಲಿ ಕುರಿ ಕಾಯುತ್ತಿರುವ ನಟಿ ರಶ್ಮಿಕಾ ಮಂದಣ್ಣ
ಸ್ಯಾಂಡಲ್ ವುಡ್ ನ ಕಿರಿಕ್ ಸುಂದರಿ ರಶ್ಮಿಕಾ ಮಂದಣ್ಣ ಸದ್ಯ ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ರಶ್ಮಿಕಾ ಚೆನ್ನೈನಲ್ಲಿ ಕುರಿ ಕಾಯುವ ಕೆಲಸ ಮಾಡುತ್ತಿದ್ದಾರೆ. ಅಚ್ಚರಿ ಎನಿಸಿದರು ಇದು ನಿಜ. ರಶ್ಮಿಕಾ ಈಗ ಕುರಿಕಾಯುವುದರಲ್ಲಿ ಬ್ಯುಸಿಯಾಗಿದ್ದಾರೆ.
ಲಂಗ ದಾವಣಿ ತೊಟ್ಟು, ಕೈಯಲ್ಲಿ ಉದ್ದನೆಯ ಕೋಲು ಹಿಡಿದು ಕುರಿಗಳನ್ನು ಕಾಯುವಲ್ಲಿ ಬ್ಯುಸಿಯಾಗಿದ್ದಾರೆ. ಅಂದ್ಹಾಗೆ ರಶ್ಮಿಕಾ ಕುರಿಕಾಯುತ್ತಿರುವುದು ಸಿನಿಮಾಗಾಗಿ. ಹೌದು, ರಶ್ಮಿಕಾ ಸೀರಿಯಸ್ ಆಗಿ ಕುರಿ ಕಾಯುತ್ತಿರುವುದು ತಮಿಳು ಸಿನಿಮಾಗಾಗಿ. ಪಾತ್ರಕ್ಕಾಗಿ ರಶ್ಮಿಕಾ ಸಂಪೂರ್ಣ ಬದಲಾಗಿದ್ದಾರೆ. ಈ ಫೋಟೋ ನೋಡುತ್ತಿದ್ದರೆ ಚಿತ್ರದಲ್ಲಿ ರಶ್ಮಿಕಾ ಡಿ ಗ್ಲಾಮ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ ಎಂದು ಅನಿಸುತ್ತೆ.

ತಮಿಳು ನಟ ಕಾರ್ತಿಗೆ ಕಿರಿಕ್ ಸುಂದರಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಸುಲ್ತಾನ್ ಎಂದು ಟೈಟಲ್ ಇಡುವ ಸಾಧ್ಯತೆ ಇದೆ. ಆದ್ರೆ ಟೈಟಲ್ ಚಿತ್ರತಂಡ ಇನ್ನೂ ಬಹಿರಂಗ ಪಡಿಸಿಲ್ಲ. ಚಿತ್ರಕ್ಕೆ ಭಾಗ್ಯರಾಜ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಶ್ಮಿಕಾ ಕುರಿ ಕಾಯುತ್ತಿರುವ ಫೋಟೋಗಳ ಜೊತೆಗೆ ತರಕಾರಿ ಮಾರುವ ಫೋಟೋ ಕೂಡ ರಿವೀಲ್ ಆಗಿದೆ.

ಚಿತ್ರದಿಂದ ಸದ್ಯ ಹೊರ ಬಂದಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೊದಲ ತಮಿಳು ಚಿತ್ರದಲ್ಲಿ ರಶ್ಮಿಕಾ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲವಿತ್ತು. ಆದ್ರೀಗ ಆ ಕುತೂಹಲಕ್ಕೆ ತೆರೆಬಿದ್ದಿದೆ. ರಶ್ಮಿಕಾ ಅಪ್ಪಟ ಹಳ್ಳಿ ಹುಡುಗಿಯಾಗಿ ಮಿಂಚಿದ್ದಾರೆ.


Click it and Unblock the Notifications











