'ಕೋಟಿಗೊಬ್ಬ' ಸುದೀಪ್ ಅಡ್ಡಾದಲ್ಲಿ ಆರ್ಮುಗಂ ರವಿಶಂಕರ್ ಕಾಣಿಸಿಕೊಂಡಿದ್ದೇಕೆ?
Recommended Video
ಕಿಚ್ಚ ಸುದೀಪ್ ಮತ್ತು ಖಳ ನಟ ರವಿಶಂಕರ್ ಕಾಂಬಿನೇಷನ್ ಅನ್ನು ಚಿತ್ರಾಭಿಮಾನಿಗಳು ಮರೆಯಲು ಸಾಧ್ಯವೆ ಇಲ್ಲ. ಕೆಂಪೇಗೌಡ ಚಿತ್ರದಲ್ಲಿ ಅಬ್ಬರಿಸಿದ್ದ ಈ ಜೋಡಿ ಆನಂತರ ಅಷ್ಟು ಮಟ್ಟಿಗೆ ಸದ್ದು ಮಾಡಿಲ್ಲ. ರವಿಶಂಕರ್ ಡೈಲಾಡ್ಸ್, ಅಭಿನಯಕ್ಕೆ ಕನ್ನಡಿಗರು ಬೆರಗಾಗಿದ್ರು.
ಕೆಂಪೇಗೌಡ ಚಿತ್ರದ ನಂತರ ಅರ್ಮುಗಂ ಅಂತಾನೆ ಖ್ಯಾತಿ ಗಳಿಸಿರುವ ರವಿಶಂಕರ್ ಸುದೀಪ್ ಜೊತೆ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ರೆ ಆರ್ಮುಗಂ ಪಾತ್ರದಷ್ಟು ಖ್ಯಾತಿ ರವಿಶಂಕರ್ ಅವರಿಗೆ ನಂತರ ಸಿಕ್ಕಿಲ್ಲ. ಆದ್ರೀಗ ರವಿಶಂಕರ್ ಮತ್ತೆ ಮಾಣಿಕ್ಯನ ಜೊತೆ ಕಾಣಿಸಿಕೊಂಡಿದ್ದಾರೆ.
ಸುದೀಪ್ ಸದ್ಯ 'ಕೋಟಿಗೊಬ್ಬ-3' ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. 'ಕೋಟಿಗೊಬ್ಬ-3' ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ. ಚಿತ್ರದ ಹೈ ವೋಲ್ಟೇಜ್ ಆಕ್ಷನ್ ದೃಶ್ಯವನ್ನು ಚಿತ್ರೀಕರಿಸಲಾಗುತ್ತಿದೆ. ಕೋಟಿಗೊಬ್ಬನ ಅಡ್ಡಾದಲ್ಲಿ ಸುದೀಪ್ ಮತ್ತು ರವಿಶಂಕರ್ ಇಬ್ಬರು ಭೇಟಿಯಾಗಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಅಂದ್ಹಾಗೆ ರವಿಶಂಕರ್ ಕೋಟಿಗೊಬ್ಬ-3 ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಕೋಟಿಗೊಬ್ಬ-2 ಚಿತ್ರದಲ್ಲಿ ರವಿಶಂಕರ್ ಎಸಿಪಿ ಕಿಶೋರ್ ಪಾತ್ರದಲ್ಲಿ ಮಿಂಚಿದ್ದರು. ಈಗ ಕೋಟಿಗೊಬ್ಬ-3 ಚಿತ್ರದಲ್ಲಿ ರವಿಶಂಕರ್ ಮತ್ತು ಕಿಚ್ಚನ ಜೋಡಿ ಮತ್ತೆ ಒಂದಾಗಿದೆ. ಅಂದ್ಮೇಲೆ ಕೋಟಿಗೊಬ್ಬ-3 ಮತ್ತಷ್ಟು ರೋಚಕವಾಗಿರುವುದರಲ್ಲಿ ಯಾವುದೆ ಅನುಮಾನವಿಲ್ಲ.
ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಕೋಟಿಗೊಬ್ಬ-3 ಚಿತ್ರೀಕರಣ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಚಿತ್ರದಲ್ಲಿ ಸುದೀಪ್ ಗೆ ನಾಯಕಿಯಾಗಿ ಮಡೋನಾ ಸೆಬಾಸ್ಟಿನ್, ಅಫ್ ತಾಬ್ ಶಿವದಾಸಾನಿ, ನವಾಬ್ ಶಾ, ಶ್ರದ್ಧಾ ದಾಸ್ ಸೇರಿದಂತೆ ಘಟಾನುಘಟಿ ಕಲಾವಿದರು ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಶಿವಕಾರ್ತಿಕ್ ನಿರ್ದೇಶನವಿದ್ದು ಸೂರಪ್ಪ ಬಾಬು ಬಂಡವಾಳ ಹೂಡಿದ್ದಾರೆ.


Click it and Unblock the Notifications











