»   » 'ಪ್ರೇಮಿಗಳ ದಿನ' ಪ್ರೇಮಲೋಕದ ರಣಧೀರನಿಗೆ ಡಬಲ್ ಸಂಭ್ರಮ

'ಪ್ರೇಮಿಗಳ ದಿನ' ಪ್ರೇಮಲೋಕದ ರಣಧೀರನಿಗೆ ಡಬಲ್ ಸಂಭ್ರಮ

Posted By:
Subscribe to Filmibeat Kannada
ಫೆಬ್ರವರಿ 14, ಕ್ರೇಜಿಸ್ಟಾರ್ ರವಿಚಂದ್ರನ್ ಅಭಿಮಾನಿಗಳಿಗೆ ಡಬಲ್ ಸಂಭ್ರಮ. ಯಾಕಂದ್ರೆ, ಫೆಬ್ರವರಿ 14 'ವ್ಯಾಲೆಂಟೈನ್ಸ್ ಡೇ', ಅಂದ್ರೆ ರವಿಚಂದ್ರನ್ ಹಬ್ಬ. ಪ್ರೀತಿ ಅಂದ್ರೆ ಕ್ರೇಜಿಸ್ಟಾರ್, ಕ್ರೇಜಿಸ್ಟಾರ್ ಅಂದ್ರೆ ಪ್ರೀತಿ ಎಂಬುದು ಅವರ ಅಭಿಮಾನಿಗಳ ಅಭಿಪ್ರಾಯ.

'ವ್ಯಾಲೆಂಟೈನ್ಸ್ ಡೇ' ದಿನವೇ ರವಿಚಂದ್ರನ್ ಅವರ ವಿವಾಹ ವಾರ್ಷಿಕೋತ್ಸವ ಎಂಬುದು ಮತ್ತೊಂದು ಸಂಭ್ರಮ. ಹೌದು, ಫೆಬ್ರವರಿ 14 ರವಿಚಂದ್ರನ್ ಹಾಗೂ ಅವರ ಪತ್ನಿ ಸುಮತಿ ಅವರು ಮದುವೆಯಾದ ದಿನ. ಹೀಗಾಗಿ, 'ವ್ಯಾಲೆಂಟೈನ್ಸ್ ಡೇ' ಬಂದ್ರೆ, ರವಿಮಾಮನ ಅಭಿಮಾನಿಗಳಿಗೆ ಡಬಲ್ ಸಂಭ್ರಮ.

Kannada Actor Ravichandran Celebrated 31st Marriage Anniversary

1986 ಫೆಬ್ರವರಿ 14 ರಂದು ರವಿಚಂದ್ರನ್ ಹಾಗೂ ಸುಮತಿ ಅವರ ಮದುವೆ ನೆರವೇರಿತ್ತು. ಇದೀಗ 31 ವರ್ಷಗಳು ಯಶಸ್ವಿಯಾಗಿ, ಸಂತೋಷವಾಗಿ ಜೀವನ ಇವರಿಬ್ಬರು ನಡಸಿದ್ದಾರೆ. ರವಿಚಂದ್ರನ್ ಅವರಿಗೆ, ವಿಕ್ರಂ, ಮನೋರಂಜನ್ ಮತ್ತು ಗೀತಾಂಜಲಿ ಮೂವರು ಮಕ್ಕಳಿದ್ದಾರೆ.

ಕಳೆದ ವರ್ಷ 'ಅಪೂರ್ವ' ಎಂಬ ಅಪರೂಪದ ಚಿತ್ರವನ್ನ ನಿರ್ದೇಶನ ಮಾಡಿದ್ದರು, ಅದರ ಜೊತೆಗೆ 'ಲಕ್ಷ್ಮಣ', 'ಮುಂಗಾರು ಮಳೆ-2', ಚಿತ್ರಗಳಲ್ಲಿ ಅಭಿನಯಿಸಿದ್ದರು. ಸದ್ಯ, ರವಿಚಂದ್ರನ್ ಅವರು ಸುದೀಪ್ ಅಭಿನಯದ 'ಹೆಬ್ಬುಲಿ' ಚಿತ್ರದಲ್ಲಿ ನಟಿಸಿದ್ದಾರೆ. ಒಟ್ನಲ್ಲಿ, ಸತತ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನ ರಂಜಿಸುತ್ತಿರುವ ರವಿಚಂದ್ರನ್ ಹಾಗೂ ಸಮುತಿ ಅವರಿಗೆ ನಮ್ಮ ಕಡೆಯಿಂದಲೂ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳನ್ನ ತಿಳಿಸೋಣ.....

English summary
Crazy star V Ravichandran and His wife Sumathi Celebrated their 31st Marriage Anniversary on Valentine's Day.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada