For Quick Alerts
  ALLOW NOTIFICATIONS  
  For Daily Alerts

  ರವಿಚಂದ್ರನ್ ಅವರ ಮುದ್ದು ಮಕ್ಕಳು ಒಂದೇ ಫ್ರೇಮ್ ನಲ್ಲಿ ಸೆರೆಯಾದಾಗ....

  By Bharath Kumar
  |

  ಕ್ರೇಜಿಸ್ಟಾರ್ ರವಿಚಂದ್ರನ್ ಕನ್ನಡದ ಸ್ಟಾರ್ ನಟ, ನಿರ್ದೇಶಕ, ನಿರ್ಮಾಪಕ, ಸಂಗೀತ ನಿರ್ದೇಶಕ, ಸಂಕಲನಕಾರ, ಬರಹಗಾರ, ಹೀಗೆ ಒಂದೇ ಮಾತಿನಲ್ಲಿ ಹೇಳುವುದಾದರೇ ಚಿತ್ರರಂಗದ ಸಕಲಕಲಾವಲ್ಲಭ.

  ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಮೂವರು ಮಕ್ಕಳು. ಒಂದು ಹೆಣ್ಣು (ಗೀತಾಂಜಲಿ) ಮತ್ತು ಇಬ್ಬರು ಗಂಡು ಮಕ್ಕಳು (ಮನೋರಂಜನ್ ಮತ್ತು ವಿಕ್ರಮ್). ರವಿಚಂದ್ರನ್ ಅವರ ಮೂವರು ಮಕ್ಕಳು ಒಂದೇ ಫ್ರೆಮ್ ನಲ್ಲಿ ಕಾಣಿಸಿಕೊಳ್ಳುವುದು ಬಹಳ ಅಪರೂಪ. ಆದ್ರೀಗ, ಮೂವರು ಮಕ್ಕಳು ಒಟ್ಟಿಗೆ ಇರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಸಿಕ್ಕಾಪಟ್ಟೆ ಲೈಕ್ಸ್ ಮಾಡುತ್ತಿದ್ದಾರೆ.

  ಈ ನಟಿ ಮದುವೆಯಾದಾಗ ರವಿಚಂದ್ರನ್ ಹಾರ್ಟ್ ಬ್ರೇಕ್ ಆಗಿತ್ತಂತೆ!

  ಅಂದ್ಹಾಗೆ, ರವಿಚಂದ್ರನ್ ಹಿರಿಯ ಮಗ ಮನೋರಂಜನ್ ಸ್ಯಾಂಡಲ್ ವುಡ್ ನಲ್ಲಿ ಚೊಚ್ಚಲ ಚಿತ್ರದ ಬಿಡುಗಡೆಯ ಸಂಭ್ರಮದಲ್ಲಿದ್ದಾರೆ. ಮನೋರಂಜನ್ ಅಭಿನಯದ 'ಸಾಹೇಬ' ಜುಲೈ ತಿಂಗಳಲ್ಲಿ ತೆರೆಕಾಣಲಿದೆ. ತಮಿಳಿನ 'ವಿಐಪಿ' ಚಿತ್ರದ ರೀಮೇಕ್ ನಲ್ಲೂ ಅಭಿನಯಿಸಿದ್ದಾರೆ. ಇದರ ಜೊತೆಗೆ 'ಚಂಗುಮಣಿ' ಎಂಬ ಹೆಸರಿನಲ್ಲಿ ಸಿನಿಮಾವೊಂದು ಘೋಷಣೆ ಆಗಿದೆ. ಹೀಗೆ, ಮೊದಲನೇ ಚಿತ್ರ ಬಿಡುಗಡೆಯಾಗುವುದಕ್ಕೆ ಮುಂಚೆಯೇ ಮನೋರಂಜನ್ ಕನ್ನಡದಲ್ಲಿ ಬ್ಯುಸಿ ನಟ ಎನಿಸಿಕೊಂಡಿದ್ದಾರೆ.

  ರವಿಚಂದ್ರನ್ ಅವರಿಂದ ಕೇಸ್ ಹಾಕಿಸಿಕೊಂಡಿದ್ದ ಹೀರೋಯಿನ್ ಇವರೇ.!

  ಇನ್ನು ರವಿಚಂದ್ರನ್ ಅವರ ಎರಡನೇಯ ಮಗ ವಿಕ್ರಮ್ ನಾಯಕನಾಗಿ ಪರಿಚಯ ಆಗ್ತಾರೆ ಎನ್ನಲಾಗುತ್ತಿದ್ದರೂ ಇದು ಇನ್ನು ಸಾಧ್ಯವಾಗಲಿಲ್ಲ. ಈ ಹಿಂದೆ ರವಿಚಂದ್ರನ್ ಮತ್ತು ಪ್ರಿಯಾಂಕ ಉಪೇಂದ್ರ ಅಭಿನಯಿಸಿದ್ದ 'ಕ್ರೇಜಿಸ್ಟಾರ್' ಚಿತ್ರದಲ್ಲಿ ವಿಕ್ರಮ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

  'ಸಾಹೇಬ'ನ ಬಿಡುಗಡೆಗೆ ಎದುರಾಯ್ತು ವಿಘ್ನ.!

  English summary
  Kannada Actor Ravichandran Children's Rare Photo. Geethanjali, Manoranjan, And Vikram Captured in One Frame.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X