ದಶಕಗಳ ನಂತರ ಕಂಪ್ಲೀಟ್ ಆಗಿ ಬದಲಾದರು ಕ್ರೇಜಿ ಸ್ಟಾರ್
Recommended Video

ರವಿಚಂದ್ರನ್ ಎಂದ ತಕ್ಷಣ ಕಪ್ಪು ಶಾರ್ಟ್, ಕಪ್ಪು ಟೋಪಿ, ಗಡ್ಡ ನಮ್ಮ ಕಣ್ಣು ಮುಂದೆ ಬರುತ್ತದೆ. ಆದರೆ, ಈಗ ಕ್ರೇಜಿಸ್ಟಾರ್ ಕಂಪ್ಲೀಟ್ ಆಗಿ ಬದಲಾಗಿದ್ದಾರೆ. ಟೀ ಶರ್ಟ್ ಹಾಕಿ, ಕ್ಲೀನ್ ಶೇವ್ ಮಾಡಿ ಹೊಸ ಲುಕ್ ನಲ್ಲಿ ಎಂಟ್ರಿ ಕೊಟ್ಟಿದ್ದಾರೆ.
ರವಿಚಂದ್ರನ್ ಅವರ ಈ ಫೋಟೋ ನೋಡಿದವರಿಗೆ ಇದು ಅವರೇನ ಎನ್ನುವ ಮಟ್ಟಿಗೆ ಅಚ್ಚರಿ ಉಂಟು ಮಾಡಿದೆ. ಆ ರೀತಿ ಸಂಪೂರ್ಣ ಹೊಸ ಅವತಾರದಲ್ಲಿ ಕ್ರೇಜಿ ಸ್ಟಾರ್ ಕಾಣಿಸಿಕೊಂಡಿದ್ದಾರೆ. ವಯಸ್ಸು ಆಗದ ಹಾಗೆ ಕಾಣುತ್ತಿದ್ದ ರವಿಚಂದ್ರನ್ ಈಗ ಇನ್ನಷ್ಟು ಯಂಗ್ ಆಗಿದ್ದಾರೆ. ದಶಕಗಳ ನಂತರ ಬೇರೆ ಲುಕ್ ಅನ್ನು ರವಿಮಾಮ ಟ್ರೈ ಮಾಡಿದ್ದಾರೆ.
ಅಂದಹಾಗೆ, ರವಿಚಂದ್ರನ್ ಅವರ ಈ ಹೊಸ ಲುಕ್ ಯಾವ ಸಿನಿಮಾಗೆ ಎಂಬ ಮಾಹಿತಿ ಮುಂದಿದೆ ಓದಿ...

ಹೊಸ ಲುಕ್ ನಲ್ಲಿ ಕ್ರೇಜಿ ಸ್ಟಾರ್
ರವಿಚಂದ್ರನ್ ಈಗ ಹೊಸ ಸಿನಿಮಾ ಮಾಡುತ್ತಿದ್ದಾರೆ. ವಿಭಿನ್ನ ರೀತಿಯ ಕಥೆ ಹೊಂದಿರುವ ಈ ಚಿತ್ರಕ್ಕಾಗಿ ರವಿಚಂದ್ರನ್ ತಮ್ಮ ಲುಕ್ ಬದಲಿಸಿಕೊಂಡಿದ್ದಾರೆ. ಚಿತ್ರದ ಪಾತ್ರಕ್ಕೆ ತಕ್ಕಂತೆ ರವಿಮಾಮ ರೆಡಿ ಆಗಿದ್ದಾರೆ. ರವಿಚಂದ್ರನ್ ಅವರ ಈ ಹೊಸ ಲುಕ್ ಫೋಟೋಗಳು ಸಖತ್ ವೈರಲ್ ಆಗಿವೆ.

ಯಾವ ಸಿನಿಮಾ?
ನಿರ್ಮಾಪಕ ಕೆ.ಮಂಜು ಮತ್ತು ಗುಜ್ವಲ್ ಪುರುಷೋತ್ತಮ್ ಅವರ ನಿರ್ಮಾಣದಲ್ಲಿ ರವಿಚಂದ್ರನ್ ಒಂದು ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕಾಗಿ ವಿಶೇಷ ಲುಕ್ ಅನ್ನು ಪ್ರಯತ್ನ ಮಾಡಲಾಗಿದೆ. ಕೆ.ಮಂಜು ಜೊತೆಗೆ ಆಪ್ತರಾಗಿರುವ ರವಿಚಂದ್ರನ್ ಈ ಹಿಂದೆ ಅವರ ಬ್ಯಾನರ್ ನಲ್ಲಿ ಸಿನಿಮಾ ಮಾಡಿದ್ದಾರೆ. ಅಲ್ಲದೆ, ಕೆ.ಮಂಜು ಮಗನ 'ಪಡ್ಡೆಹುಲಿ' ಚಿತ್ರದಲ್ಲಿಯೂ ರವಿಚಂದ್ರನ್ ನಟಿಸಿದ್ದಾರೆ.

'ಜಿಗರ್ ಥಂಡ' ನಿರ್ದೇಶಕ
2016 ತಮಿಳಿನಲ್ಲಿ ಬಂದ 'ಧ್ರವಂಗಳ್ ಪದಿನಾರು' ಚಿತ್ರದಿಂದ ಸ್ಫೂರ್ತಿ ಪಡೆದು ಈ ಸಿನಿಮಾ ಮಾಡಲಾಗುತ್ತಿದೆಯಂತೆ. ಈ ಹಿಂದೆ 'ಜಿಗರ್ ಥಾಂಡ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಶಿವಗಣೇಶ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಶ್ರೀ ಕಾಂತ್ ಸಂಭಾಷಣೆ ಬರೆಯುತ್ತಿದ್ದಾರೆ.

ಇನ್ನು ಟೈಟಲ್ ಫಿಕ್ಸ್ ಆಗಿಲ್ಲ
ರವಿಚಂದ್ರನ್ ಅವರ ಈ ಹೊಸ ಸಿನಿಮಾಗೆ ಇನ್ನು ಟೈಟಲ್ ಫಿಕ್ಸ್ ಆಗಿಲ್ಲ. ಇದೊಂದು ಥಿಲ್ಲರ್ ಸಿನಿಮಾವಾಗಿದ್ದು, ಅಚ್ಯುತ ಕುಮಾರ್, ಯಶ್ ಶೆಟ್ಟಿ, ನಿಸರ್ಗ, ಚೇತನ್, ಅರ್ಜುನ್ ಗೌಡ, ಚೈತ್ರಾ ರಾವ್ ನಟಿಸುತ್ತಿದ್ದಾರೆ.

ವಿಭಿನ್ನ ಲುಕ್ ಗಳಲ್ಲಿ ರವಿಚಂದ್ರನ್
ರವಿಚಂದ್ರನ್ ಸದ್ಯ ಹೊಸ ಹೊಸ ಪಾತ್ರಗಳ ಮೂಲಕ ಹೊಸ ರೀತಿಯ ಲುಕ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ಕುರುಕ್ಷೇತ್ರ' ಸಿನಿಮಾದಲ್ಲಿ ಕೃಷ್ಣನಾಗಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ. 'ರಾಜೇಂದ್ರ ಪೊನ್ನಪ್ಪ', 'ಪಡ್ಡೆ ಹುಲಿ' ಚಿತ್ರಗಳ ಬಳಿಕ ಉಪೇಂದ್ರ ಜೊತೆಗೆ ಒಂದು ಸಿನಿಮಾವನ್ನು ರವಿಚಂದ್ರನ್ ಮಾಡುತ್ತಿದ್ದಾರೆ.


Click it and Unblock the Notifications











