For Quick Alerts
  ALLOW NOTIFICATIONS  
  For Daily Alerts

  ಕ್ರೇಜಿಸ್ಟಾರ್ ಹಾಗೆ ಎದೆ ತೋರಿಕೊಂಡು ಓಡಾಡೋ ಧೈರ್ಯ ಎಷ್ಟು ಜನರಿಗಿದೆ?

  |

  ಅಭಿಮಾನಿಗಳು ಸುಮ್ಸುಮ್ನೆ ಕ್ರೇಜಿಸ್ಟಾರ್ ಅಂತ ಕರೆದಿಲ್ಲ. ಸಿನಿಮಾ ಯಾರೂ ಮಾಡದೆ ಇರುವುದನ್ನೇ ರವಿಚಂದ್ರನ್ ಮಾಡಿ ತೋರಿಸುತ್ತಾರೆ. ಇವರಂತೆ ಸಿನಿಮಾ ತೆಗೆಯಲು ಯಾರಿಗೂ ಬರಲ್ಲ. ನಾಯಕಿಯರನ್ನು ಸ್ಪರ್ಶಿಸದೆ ರೊಮ್ಯಾನ್ಸ್ ಮಾಡಲು ಬರಲ್ಲ. ಕ್ರೇಜಿಸ್ಟಾರ್ ಸಾಂಗ್ ಶೂಟ್ ಮಾಡಲು ಬರಲ್ಲ. ಕೊನೆಗೆ ಕ್ರೇಜಿಸ್ಟಾರ್ ಹಾಗೆ ರಿಮೇಕ್ ಮಾಡುವುದಕ್ಕೂ ಬರಲ್ಲ. ಇವೆಲ್ಲವನ್ನೂ ತನ್ನ ವೃತ್ತಿ ಬದುಕಿನಲ್ಲಿ ಮಾಡಿ ತೋರಿಸಿದ್ದು ಕ್ರೇಜಿಸ್ಟಾರ್ ರವಿಚಂದ್ರನ್.

  ಅಪ್ಪನ ಅನುಸರಿಸೋಲ್ಲ, ಅದು ಬ್ಲಡ್ ಅಲ್ಲೆ ಬಂದಿದೆ

  ಸ್ಯಾಂಡಲ್‌ವುಡ್‌ನ ಈ ಕನಸುಗಾರ ತನಗೆ ತೋಚಿದ್ದನ್ನು ಮಾಡುತ್ತಾರೆ. ಅದಕ್ಕೆ ಯಾರ ಅಪ್ಪಣೆಯೂ ಕೇಳುವುದೂ ಇಲ್ಲ, ಹೇಳುವುದೂ ಇಲ್ಲ. ಹಾಗಂತ ಕೇವಲ ಪರದೆ ಮೇಲಷ್ಟೇ ರವಿಚಂದ್ರನ್ ಕ್ರೇಜಿ ಅಂದುಕೊಂಡರೆ ಅದೂ ತಪ್ಪು. ರಿಯಲ್ ಲೈಫ್‌ನಲ್ಲೂ ಕ್ರೇಜಿಸ್ಟಾರ್ ರವಿಚಂದ್ರನ್ ಬೇರೆ ಅವರ ಸ್ಟೈಲೇ ಬೇರೆ. ರವಿಮಾಮ ಬದುಕುತ್ತಿರುವ ಹಾಗೆ ಯಾರೂ ಬದುಕಲು ಸಾಧ್ಯವೇ ಇಲ್ಲ. ಸೋತರೂ ಕುಗ್ಗದ ಗೆದ್ದರೂ ಬೀಗದ ಈ ಕಲಾವಿದನ ಬದುಕೇ ರೋಚಕ.

  ರವಿಚಂದ್ರನ್ ಬದುಕಿನ ಒಂದೊಂದೇ ಪುಟಗಳನ್ನು ತೆರೆಯುತ್ತಾ ಹೋದರೆ, ಕ್ರೇಜಿ ನಿಜಕ್ಕೂ ಕ್ರೇಜಿನೇ ಅಂತ ಅನಿಸಿಬಿಡುತ್ತಾರೆ. ಇಷ್ಟು ದಿನ ರವಿಚಂದ್ರನ್ ಕೇಳಬೇಕೆನಿಸಿದರೂ ಕೇಳಲಾಗದ ಒಂದು ಪ್ರಶ್ನೆಗೆ ರವಿಚಂದ್ರನ್ ಸಲೀಸಾಗಿ ಉತ್ತರ ಕೊಟ್ಟಿದ್ದಾರೆ. ಅಂದ್ಹಾಗೆ ಪ್ರಶ್ನೆ ಏನಂದ್ರೆ, ಕ್ರೇಜಿಸ್ಟಾರ್ ಶರ್ಟ್‌ಗೆ ಗುಂಡಿ ಯಾಕೆ ಹಾಕಲ್ಲ? ಈಗಾಗಲೇ ಈ ಪ್ರಶ್ನೆ ರವಿಚಂದ್ರನ್ ಕ್ರೇಜಿ ಉತ್ತರ ಕೊಟ್ಟಿದ್ದಾರೆ.

  ಶರ್ಟ್‌ಗೆ ಗುಂಡಿ ಹಾಕಲ್ಲ ಕ್ರೇಜಿಸ್ಟಾರ್

  ಶರ್ಟ್‌ಗೆ ಗುಂಡಿ ಹಾಕಲ್ಲ ಕ್ರೇಜಿಸ್ಟಾರ್

  ರವಿಚಂದ್ರನ್ ತಾವು ತೊಡುವ ಶರ್ಟ್‌ಗೆ ಹಾಕುವ ಗುಂಡಿ ಮೂರು ಇಲ್ಲವೆ ನಾಲಕ್ಕು. ಅದಕ್ಕಿಂತ ಹೆಚ್ಚು ಗುಂಡಿ ಹಾಕಿದ್ದು ಇದೂವರೆಗೂ ಯಾರೂ ನೋಡಿಲ್ಲ ಮುಂದೆ ನೋಡುವುದೂ ಇಲ್ಲ. ಅಷ್ಟಕ್ಕೂ ಕ್ರೇಜಿಸ್ಟಾರ್ ಶರ್ಟ್ ಗುಂಡಿ ಯಾಕೆ ಹಾಕಲ್ಲ. ಈ ಪ್ರಶ್ನೆಗೆ ಉತ್ತರ ಈಗ ಸಿಕ್ಕಿದೆ. ತಮ್ಮ ಪುತ್ರ ಮನು ರವಿಚಂದ್ರನ್ ನಟಿಸಿದ ಮುಗಿಲ್‌ಪೇಟೆ ಸಿನಿಮಾ ತೆರೆಕಂಡ ಬಳಿಕ ಈ ಗುಟ್ಟನ್ನು ರಟ್ಟು ಮಾಡಿದ್ದಾರೆ. " ಮೊದಲಿನಿಂದಲೂ ನನಗೆ ಕಂಫರ್ಟ್ ಇದು. ಯಾರಿಗೂ ತೋರಿಸಿಕೊಳ್ಳುವುದಕ್ಕೋ, ಇಲ್ಲಾ ಧಿಮಾಕಿಗೋ ಶರ್ಟ್ ಗುಂಡಿ ಬಿಚ್ಚಿಲ್ಲ. ಮೊದಲಿನಿಂದಲೂ ನಾನು ಇರುವುದೇ ಹೀಗೆ" ಎಂದಿದ್ದಾರೆ ರವಿಚಂದ್ರನ್.

  ಎದೆ ತೋರಿಸುವ ಧೈರ್ಯ ಯಾರಿಗಿದೆ?

  ಎದೆ ತೋರಿಸುವ ಧೈರ್ಯ ಯಾರಿಗಿದೆ?

  "ಸೆಕ್ಸಿಯಾಗಿ ಕಾಣಬೇಕು ಅಂತಲ್ಲ. ಎದೆ ತೋರಿಸಿಕೊಂಡು ಓಡಾಡುವುದು ಯಾರಿಗೆ ಬರುತ್ತೆ? ಬಹುಶ: ಅದೇ ಧೈರ್ಯ ಇರಬೇಕು. ಮೊದಲಿನಿಂದಲೂ ಇದೇ ಧೈರ್ಯದ ಮೇಲೆ ಓಡಾಡಿಕೊಂಡಿದ್ದೆ. ಈಗ ನನ್ನ ಮಗ ಮನಸ್ಸಿನಿಂದ ನನ್ನ ಸ್ಟೈಲ್ ಅನ್ನು ಫಾಲೋ ಮಾಡುತ್ತಿದ್ದಾರೆ" ಅಂತಾರೆ ಕ್ರೇಜಿಸ್ಟಾರ್.

  ರವಿಚಂದ್ರನ್‌ಗೆ ಶರ್ಟ್ ಕಾಲರ್ ಎತ್ತಿನೇ ಅಭ್ಯಾಸ

  ರವಿಚಂದ್ರನ್‌ಗೆ ಶರ್ಟ್ ಕಾಲರ್ ಎತ್ತಿನೇ ಅಭ್ಯಾಸ

  ರವಿಚಂದ್ರನ್ ಬದುಕಿದ ರೀತಿನೇ ಹಾಗೇ. ಏನು ಹೇಳಬೇಕೆಂದಿದ್ದರೂ ನೇರಾ ನೇರ. ಅಷ್ಟೆ ಯಾಕೆ, ಕ್ರೇಜಿಸ್ಟಾರ್ ಉಡುಗೆ ತೊಡುಗೆನೂ ಅವರು ಹುಟ್ಟಾಕಿದ್ದೇ ಟ್ರೆಂಡ್ ಆಗಿಬಿಡುತ್ತಿತ್ತು. "ನನಗೆ ಮೊದಲಿನಿಂದ ಶರ್ಟ್ ಕಾಲರ್ ಎತ್ತಿ ಓಡಾಡಿ ಆಭ್ಯಾಸ. ಶರ್ಟ್ ಕಾಲರ್ ಯಾವಾಗಲೂ ನಿಂತಿರಬೇಕು. ಅದಕ್ಕೆ ನಾನು ಮೊದಲಿನಿಂದ ಶರ್ಟ್‌ಗೆ ಗುಂಡಿ ಹಾಕುವುದಿಲ್ಲ." ಎನ್ನುತ್ತಾರೆ ರವಿಮಾಮ.

  ಅಪ್ಪನಂತೆ ಶರ್ಟ್ ಗುಂಡಿ ಬಿಚ್ಚಿದ ಮನು

  ಅಪ್ಪನಂತೆ ಶರ್ಟ್ ಗುಂಡಿ ಬಿಚ್ಚಿದ ಮನು

  ರವಿಚಂದ್ರನ್ ಪುತ್ರ ಮನು ರವಿಚಂದ್ರನ್ ಕೂಡ ಅಪ್ಪನ ಹಾದಿಯನ್ನೇ ಹಿಡಿದಿದ್ದಾರೆ. ಕಳೆದ ವಾರವಷ್ಟೇ ತೆರೆಕಂಡಿದ್ದ ಮುಗಿಲ್‌ಪೇಟೆ ಸಿನಿಮಾದಲ್ಲಿ ಕ್ರೇಜಿಸ್ಟಾರ್‌ರಂತೆ ಶರ್ಟ್ ಗುಂಡಿ ಬಿಚ್ಚಿದ್ದಾರೆ. ಇದು ಈಗ ಸ್ಯಾಂಡಲ್‌ವುಡ್‌ನಲ್ಲಿ ಚರ್ಚೆಯಾಗುತ್ತಿದೆ. ಈ ಕಾರಣಕ್ಕೆ ರವಿಚಂದ್ರನ್ ಪುತ್ರ ಮನಸ್ಸಿನಿಂದ ಶರ್ಟ್ ಗುಂಡಿ ಬಿಚ್ಚಿದ್ದಾನೆ ಎಂದಿದ್ದಾರೆ. ಪುತ್ರನ ಮುಗಿಲ್ ಪೇಟೆ ಚಿತ್ರದ ಬಗ್ಗೆ ಕ್ರೇಜಿಸ್ಟಾರ್ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ಹಾಡುಗಳಿಂದ ಹಿಡಿದು ಕಥೆವರೆಗೂ ಕ್ರೇಜಿಗೆ ಹಿಡಿಸಿದೆ. ಅದಕ್ಕೆ ಬಿಡುಗಡೆಯಾದ ದಿನವೇ ತಾವೇ ವಿಮರ್ಶೆನೂ ಮಾಡಿದ್ದಾರೆ.

  English summary
  Recently crazy star Ravichandra reveals secret about why he always kept his shirt open. Now his son Manu Ravichandran also follows his footsteps.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X