For Quick Alerts
  ALLOW NOTIFICATIONS  
  For Daily Alerts

  ಅಂತೂ-ಇಂತೂ ರವಿಮಾಮನಿಗೆ ಕೂಡಿಬಂತು 'ಅಪೂರ್ವ' ಘಳಿಗೆ

  By Suneetha
  |

  ಸ್ಯಾಂಡಲ್ ವುಡ್ ನ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸತತ ಮೂರು ವರ್ಷಗಳ ಕನಸು ಮುಂದಿನ ವಾರ ನನಸಾಗುತ್ತಿದೆ. ಸ್ವತಃ ಅವರೇ ನಿರ್ಮಾಣದ ಜೊತೆಗೆ ನಿರ್ದೇಶನ ಮಾಡಿರುವ ಅವರ ಕನಸಿನ ಕೂಸು 'ಅಪೂರ್ವ' ಸಿನಿಮಾ ಮುಂದಿನ ಶುಕ್ರವಾರ, ಮೇ 27ಕ್ಕೆ ಅದ್ದೂರಿಯಾಗಿ ಇಡೀ ಕರ್ನಾಟಕದಾದ್ಯಂತ ತೆರೆ ಕಾಣುತ್ತಿದೆ.

  ಅಂದಹಾಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಬೆಂಗಳೂರಿನ ಗಾಂಧಿನಗರದಲ್ಲಿರುವ 'ಕಪಾಲಿ' ಚಿತ್ರಮಂದಿರದ ಮೇಲೆ ಅದೇನೋ ಸೆಂಟಿಮೆಂಟ್ ಇರುವ ಕಾರಣ ಅವರ ಕನಸಿನ ಚಿತ್ರ 'ಅಪೂರ್ವ'ವನ್ನು ಅದೇ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಈ ಹಿಂದೆ ರವಿಚಂದ್ರನ್ ಅವರ 'ಪ್ರೇಮಲೋಕ' ಮತ್ತು 'ರಣಧೀರ' ಸಿನಿಮಾ ಇದೇ ಚಿತ್ರಮಂದಿರದಲ್ಲಿ ತೆರೆ ಕಂಡು ಯಶಸ್ವಿಯಾಗಿತ್ತು.[ಅಭಿಮಾನಿಗಳು ಕೇಳಿದ 2 ಪ್ರಶ್ನೆಗಳಿಗೆ ಕ್ರೇಜಿಸ್ಟಾರ್ ಕೊಟ್ಟ ಉತ್ತರ]

  ಈ ಚಿತ್ರದಲ್ಲಿ ಸ್ಯಾಂಡಲ್ ವುಡ್ ನ ಹಲವಾರು ಸ್ಟಾರ್ ನಟರು ಹೀಗೆ ಬಂದು ಹಾಗೆ ಹೋಗಿದ್ದಾರೆ. ವಿಶೇಷವಾಗಿ ರವಿಚಂದ್ರನ್ ಅವರು ತಮ್ಮ ಮಗ ಅಂತ ಹೇಳಿಕೊಳ್ಳುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಈ ಚಿತ್ರಕ್ಕೆ ತಮ್ಮ ವಿಶಿಷ್ಟ ಧ್ವನಿಯ ಜೊತೆಗೆ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.[ಕನ್ನಡ ರಾಜ್ಯೋತ್ಸವ ಪ್ರಯುಕ್ತ ರವಿಚಂದ್ರನ್ 'ಅಪೂರ್ವ' ಕೊಡುಗೆ]

  'ಅಪೂರ್ವ' ಚಿತ್ರದಲ್ಲಿ ಸುದೀಪ್ ಅವರು ಕೈ ಜೋಡಿಸಿದ್ದಕ್ಕಾಗಿ ಯಾವುದೇ ರೀತಿಯ ಸಂಭಾವನೆಯನ್ನು ಪಡೆದುಕೊಂಡಿಲ್ಲ, ಅಷ್ಟೇ ಯಾಕೆ ಮೇಕಪ್ಪ್ ಚಾರ್ಚ್ ಕೂಡ ಮಾಡಿಲ್ಲ ಎಂಬ ವಿಚಾರವನ್ನು ಖುದ್ದು ರವಿಮಾಮ ತಿಳಿಸಿದ್ದಾರೆ.[ಚಕಿತಗೊಳಿಸುವ ರವಿಚಂದ್ರನ್ 'ಅಪೂರ್ವ' ಸಂಗತಿಗಳು]

  19 ವರ್ಷದ ಯುವತಿ ಮತ್ತು 61 ವರ್ಷದ ಹಿರಿಯನ ಕಥೆಯಾಧರಿತ 'ಅಪೂರ್ವ' ಸಿನಿಮಾ ಸೆಟ್ಟೇರಿದ್ದು 2013ರಲ್ಲಿ. ಇಡೀ ಚಿತ್ರದ ಶೂಟಿಂಗ್ ಬರೀ ಲಿಫ್ಟ್ ಒಂದರಲ್ಲಿ ನಡೆದಿದೆ.

  ಈ ಮೊದಲು ಚಿತ್ರದ ಬಿಡುಗಡೆ ಹಲವಾರು ಬಾರಿ, ಹಲವು ಕಾರಣಗಳಿಂದ ಮುಂದೂಡಲ್ಪಟ್ಟಿತು. ಇದೀಗ ರವಿಚಂದ್ರನ್ ಅವರಿಗೆ ಸಂಪೂರ್ಣ ತೃಪ್ತಿಯಾದ ನಂತರ ಕೊನೆಗೂ 'ಅಪೂರ್ವ' ಮುಂದಿನ ವಾರ ಎಲ್ಲಾ ಚಿತ್ರಮಂದಿರಗಳಲ್ಲಿ ದರ್ಶನ ಭಾಗ್ಯ ಕರುಣಿಸಿದ್ದಾಳೆ.

  English summary
  Kannada Actor Ravichandran's Kannada Movie 'Apoorva' which is produced and directed by him is likely to release in Kapali theater on the 27th of May. Kapali is considered to be lucky for Ravichandran.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X