"ನನ್ನನ್ನ ಬಿಟ್ರೆ ಕೃಷ್ಣನ ಪಾತ್ರ ಯಾರು ಮಾಡ್ತಾರೆ": ರವಿಚಂದ್ರನ್
Recommended Video
ಕುರುಕ್ಷೇತ್ರ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವ ಬಿಗ್ ಬಜೆಟ್ ಚಿತ್ರದಲ್ಲಿ ಒಂದು. ಮಹಾಭಾರತದ ಕಥೆ, 3ಡಿ ಎಫೆಕ್ಟ್, ಬಹುತಾರಗಣ ಇರುವ ಸಿನಿಮಾ. ಸುಮಾರು ಎರಡು ವರ್ಷಗಳಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಕುರುಕ್ಷೇತ್ರ ರಸದೌತಣ ನೀಡಿದೆ.
ಚಿತ್ರ ರಿಲೀಸ್ ಗೂ ಮೊದಲು ಕೃಷ್ಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರವಿಚಂದ್ರನ್ ಬಗ್ಗೆ ಕೆಲಲವು ಅಸಮಾಧಾನ ವ್ಯಕ್ತಡಿಸುತ್ತಿದ್ದರು. ಕೃಷ್ಣ ಪಾತ್ರಕ್ಕೆ ರವಿಚಂದ್ರನ್ ಹೇಗೆ ಸೂಟ್ ಆಗ್ತಾರೆ. ಕೃಷ್ಣ ಅಂದ್ರೆ ತೆಳ್ಳಗೆ ಇರಬೇಕು ಎಂದೆಲ್ಲ ಮಾತುಗಳು ಕೇಳಿಬರುತ್ತಿತ್ತು.
ಆದ್ರೆ ಸಿನಿಮಾ ರಿಲೀಸ್ ಆದ್ಮೇಲೆ ಕೃಷ್ಣನ ಪಾತ್ರಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಯ್ತು. ಈ ಬಗ್ಗೆ ರವಿಮಾಮ ಕೂಡ ಮಾತನಾಡಿದ್ದಾರೆ. ಇತ್ತೀಚಿಗೆ ರವಿ ಬೋಪಣ್ಣ ಸಿನಿಮಾ ಮಾಧ್ಯಮ ಗೋಷ್ಠಿಯಲ್ಲಿ ಭಾಗಿಯಾಗಿದ್ದ ರವಿಚಂದ್ರನ್ ಕುರುಕ್ಷೇತ್ರ ಕೃಷ್ಣನ ಪಾತ್ರದ ಬಗ್ಗೆ ಹೇಳಿದ್ದಾರೆ.

"ನನ್ನ ಬಿಟ್ಟು ಕರ್ನಾಟಕದಲ್ಲಿ ಬೇರೆ ಕೃಷ್ಣನ ಹೆಸರು ಹೇಳಿ ನೋಡೋಣ, ಇವರು ಕೃಷ್ಣ ಮಾಡಬ ಹುದಿತ್ತು ಅಂತ ಹೇಳಿ" ಎಂದು ಪ್ರಶ್ನೆ ಮಾಡಿದ್ದಾರೆ. "ಹೊಟ್ಟೆ ಇದ್ರು ಕೂಡ ನನ್ನೇ ನೋಡಬೇಕು. ಆದ್ರೆ ಕೃಷ್ಣ ಪಾತ್ರದಲ್ಲಿ ಹೊಟ್ಟೆ ಕಾಣುವುದಿಲ್ಲ. ಯಾಕಂದ್ರೆ ನಾನ್ ವೆಜ್ ತಿನ್ನೋದನ್ನ ಬಿಟ್ಟಿದ್ದೆ. ಯಾವುದೆ ಪಾತ್ರ ಅಭಿನಯಿಸಲು ಇಳಿದಾಗ ಆ ಪಾತ್ರದ ಒಳಗೆ ಹೋಗುತ್ತೇನೆ. ಅದು ಎಷ್ಟೆ ಗಂಟೆ ಆದ್ರು ಆ ಪಾತ್ರದಲ್ಲೆ ಮುಳುಗಿರುತ್ತೀನಿ" ಎಂದು ಹೇಳುವ ಮೂಲಕ ಕೃಷ್ಣ ಬಗ್ಗೆ ಮಾತನಾಡುತ್ತಿದ್ದವರ ಬಾಯಿ ಮುಚ್ಚಿಸಿದ್ದಾರೆ.
ರವಿಚಂದ್ರನ್ ಸದ್ಯ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ರವಿ ಬೋಪಣ್ಣ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ರಾಜೇಂದ್ರ ಪೊನ್ನಪ್ಪ ಚಿತ್ರ ಕೂಡ ಸಾಲಲ್ಲಿ ಇದೆ. ರವಿ ಬೋಪಣ್ಣ ಚಿತ್ರಕ್ಕಾಗಿ ರವಿಚಂದ್ರನ್ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











