'ಯುಐ' ಸಿನಿಮಾ ಫಲಿತಾಂಶದ ಬಗ್ಗೆ ಮೊದಲ ಬಾರಿ ಉಪೇಂದ್ರ ಮಾತು

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ನಟಿಸಿದ 'ಯುಐ' ಸಿನಿಮಾ ಕಳೆದ ವರ್ಷ ತೆರೆಗೆ ಬಂದಿತ್ತು. ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದ ಸಿನಿಮಾ ದೊಡ್ಡಮಟ್ಟದಲ್ಲಿ ಗೆಲ್ಲಲಿಲ್ಲ. ಸುದೀಪ್ 'ಮ್ಯಾಕ್ಸ್' ಸಿನಿಮಾ ಎದುರು ಬಂದಿದ್ದು ಅದಕ್ಕೆ ಕಾರಣ ಎನ್ನುವವರು ಇದ್ದಾರೆ.

ಡಿಸೆಂಬರ್ 20ರಂದು 'ಯುಐ'(UI) ಸಿನಿಮಾ ಬಿಡುಗಡೆ ಆಗಿತ್ತು. ಅದರ ಬೆನ್ನಲ್ಲೇ 'ಮ್ಯಾಕ್ಸ್' ಸಿನಿಮಾ ತೆರೆಗೆ ಬಂದಿತ್ತು. ಉಪ್ಪಿ ಸಿನಿಮಾ ಒಳ್ಳೆ ಓಪನಿಂಗ್ ಪಡೆದುಕೊಂಡಿತ್ತು. ಆದರೆ 'ಮ್ಯಾಕ್ಸ್' ಆರ್ಭಟ ಹೆಚ್ಚಾಗುತ್ತಿದ್ದಂತೆ ಕಲ್ಕಿ ಕಥೆ ಗೌಣವಾಗಿತ್ತು. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿದ್ದು ಸುಳ್ಳಲ್ಲ. ಕೆಲವರಿಗೆ ಉಪ್ಪಿ ಆಲೋಚನೆ, ಕಥೆ ಹೇಳಿದ್ದ ರೀತಿ ಬಹಳ ಇಷ್ಟವಾಗಿತ್ತು. ಮತ್ತೆ ಕೆಲವರಿಗೆ ಬೋರ್ ಹೊಡೆಸಿಬಿಟ್ಟಿತ್ತು.

Kannada Actor Real star Upendra Opens up On UI movie result

ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳಿಗೂ 'ಯುಐ' ಸಿನಿಮಾ ಡಬ್ ಆಗಿ ರಿಲೀಸ್ ಆಗಿತ್ತು. ವಿದೇಶಗಳಲ್ಲಿ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. 2024ರಲ್ಲಿ ವಿಶ್ವದಾದ್ಯಂತ ಅತಿಹೆಚ್ಚು ಗಳಿಕೆ ಕಂಡ ಕನ್ನಡ ಸಿನಿಮಾ ನಮ್ಮದು ಎಂದು ಚಿತ್ರತಂಡ ಪೋಸ್ಟರ್ ರಿಲೀಸ್ ಮಾಡಿತ್ತು. ಆದರೂ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಗೆಲ್ಲಲಿಲ್ಲ, ಟಿವಿಯಲ್ಲಿ ಪ್ರಸಾರವಾಗಿದ್ದ ಚಿತ್ರವನ್ನು ಹೆಚ್ಚು ಜನ ವೀಕ್ಷಿಸಿರಲಿಲ್ಲ. ಅದು ಟಿಆರ್‌ಪಿ ಬಂದಾಗ ಜಗ್ಗಜಾಹೀರಾಗಿತ್ತು. ಇದೇ ಮೊದಲ ಬಾರಿಗೆ 'ಯುಐ' ಸಿನಿಮಾ ಫಲಿತಾಂಶದ ಬಗ್ಗೆ ಉಪೇಂದ್ರ ಮಾತನಾಡಿದ್ದಾರೆ.

ಅರ್ಜುನ್ ಜನ್ಯಾ ನಿರ್ದೇಶನದ '45' ಚಿತ್ರದ ಮುಖ್ಯ ಪಾತ್ರದಲ್ಲಿ ಉಪೇಂದ್ರ ನಟಿಸುತ್ತಿದ್ದಾರೆ. ಶಿವಣ್ಣ, ರಾಜ್‌. ಬಿ ಶೆಟ್ಟಿ ಕೂಡ ಚಿತ್ರದಲ್ಲಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ರಿಲೀಸ್ ಪ್ರಯತ್ನ ನಡೀತಿದೆ. ಇತ್ತೀಚೆಗೆ ಚಿತ್ರತಂಡ ಹೈದರಾಬಾದ್, ಮುಂಬೈ, ಚೆನ್ನೈ, ಕೊಚ್ಚಿನ್‌ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಸಿನಿಮಾ ಪ್ರಚಾರ ಮಾಡುತ್ತಿದೆ. ಹೈದರಾಬಾದ್ ಸುದ್ದಿಗೋಷ್ಠಿಯಲ್ಲಿ 'ಯುಐ' ಸಿನಿಮಾ ಬಗ್ಗೆ ಪತ್ರಕರ್ತರು ಕೇಳಿದ್ದಾರೆ. ಅದಕ್ಕೆ ಉಪೇಂದ್ರ ಉತ್ತರಿಸಿದ್ದಾರೆ.

ನಿರೀಕ್ಷಿತ ಮಟ್ಟದಲ್ಲಿ 'ಯುಐ' ಸಿನಿಮಾ ಸದ್ದು ಮಾಡಲಿಲ್ಲ. ಕೆಲವರಿಗೆ ಇಷ್ಟವಾಗಲಿಲ್ಲ, ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಎಂದು ಪತ್ರಕರ್ತರೊಬ್ಬರು ಉಪೇಂದ್ರ ಅವರನ್ನು ಕೇಳಿದ್ದಾರೆ. ಅದಕ್ಕೆ ಉತ್ತರಿಸಿರುವ ಉಪ್ಪಿ "ಯುಐ ಸಿನಿಮಾ ಅರ್ಥ ಆಗುವುದು ಕೊಂಚ ಕಷ್ಟ. ನನಗೂ ಗೊತ್ತು ಅದು. ನಾನು ಇದನ್ನು ಏಳೆಂಟು ವರ್ಷದಿಂದ ಹೇಳುತ್ತಿದ್ದೇನೆ. ಈ ಚಿತ್ರದಲ್ಲಿ ಕೊಂಚ ಸ್ಟ್ರಾಂಗ್ ಆಗಿ ಹೇಳಿದ್ದೇನೆ. ಇನ್ನು ಐದಾರು ವರ್ಷಗಳಲ್ಲಿ ಇದೆಲ್ಲಾ ನಿಮಗೆ ಅರ್ಥವಾಗುತ್ತದೆ" ಎಂದು ಉಪ್ಪಿ ಹೇಳಿದ್ದಾರೆ.

Kannada Actor Real star Upendra Opens up On UI movie result

"ಸಿನಿಮಾ ಅರ್ಥ ಆಗುವವರಿಗೆ ಅರ್ಥ ಆಗಿದೆ. ಇದರಲ್ಲಿ ಪ್ರಯೋಗ ಏನು ಮಾಡಿದ್ದೆ ಅಂದ್ರೆ, ಚಿತ್ರಮಂದಿರದಲ್ಲಿ ಕೂತು ಸಿನಿಮಾ ನೋಡುವವರೇ ವಿಲನ್‌ಗಳು. ಅದನ್ನು ಜೀರ್ಣಿಸಿಕೊಳ್ಳಲು ಕಷ್ಟ. ನೀವು ಯಾವಾಗಲೂ ತೆರೆಮೇಲೆ ಹೀರೊ, ವಿಲನ್‌ಗಳನ್ನು ನೋಡುತ್ತಿದ್ರು. ಆದರೆ ಈ ಚಿತ್ರದಲ್ಲಿ ಏನಪ್ಪಾ ನನಗೆ ಹೇಳ್ತಿದ್ದಾರಲ್ಲ ಅಂತ, ಅರ್ಥ ಆಗಿದ್ದರೂ ಅರ್ಥವಾಗಲಿಲ್ಲ ಎಂದು ನಾಟಕ ಮಾಡುತ್ತಿದ್ದಾರೆ" ಎಂದು ಉಪೇಂದ್ರ ನಕ್ಕಿದ್ದಾರೆ.

ಯುಗಾದಿ ಸಂಭ್ರಮದಲ್ಲಿ 'ಯುಐ' ಸಿನಿಮಾ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಸಂಜೆ 4. 30ಕ್ಕೆ ಸಿನಿಮಾ ಹಾಕಲಾಗಿತ್ತು. ಆದರೆ ಆ ಸಮಯದಲ್ಲಿ ಕೇವಲ 1.7 (15 to 50 ಅರ್ಬನ್) ಟಿಆರ್‌ಪಿ ಸಿಕ್ಕಿದೆ. ಇದು ಕಿರುತೆರೆಯಲ್ಲಿ ಸ್ಟಾರ್ ನಟನ ಚಿತ್ರಕ್ಕೆ ಸಿಕ್ಕ ಬಹಳ ಕಡಿಮೆ ಟಿಆರ್‌ಪಿ ಎಂದು ಭಾವಿಸಲಾಗಿತ್ತು. ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಚಿತ್ರ ಕೂಡ 'ಯುಐ'ಗಿಂತ ಒಳ್ಳೆ ಟಿಆರ್‌ಪಿ ಪಡೆದಿತ್ತು. ಕೆ. ಪಿ ಶ್ರೀಕಾಂತ್ ಹಾಗೂ ಜಿ. ಮನೋಹರನ್ ನಿರ್ಮಾಣದ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದರು.

More from Filmibeat

English summary
Upendra reacts on why UI movie didn't reached expectations, why movie failure
Read more about: upendra ui kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X