twitter
    For Quick Alerts
    ALLOW NOTIFICATIONS  
    For Daily Alerts

    ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು ವ್ಯಂಗ್ಯ ಮಾಡಿದ ರಿಯಲ್ ಸ್ಟಾರ್ ಉಪೇಂದ್ರ

    |

    Recommended Video

    Karnataka Crisis :ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು ವ್ಯಂಗ್ಯ ಮಾಡಿದ ರಿಯಲ್ ಸ್ಟಾರ್ ಉಪೇಂದ್ರ

    ರಾಜ್ಯದ ರಾಜಕೀಯದ ಸದ್ಯದ ಸ್ಥಿತಿಯನ್ನು ಕಂಡು ರಿಯಲ್ ಸ್ಟಾರ್ ಉಪೇಂದ್ರ ವ್ಯಂಗ್ಯವಾಡಿದ್ದಾರೆ. ದೋಸ್ತಿ ಸರ್ಕಾರ ಉಳಿಯುತ್ತೊ ಉರುಳಿತ್ತೊ ಎನ್ನುವ ಸ್ಥಿತಿಯಲ್ಲಿರುವ ಈ ಸಂದರ್ಭದಲ್ಲಿ ಉಪೇಂದ್ರ ಮತ ಚಲಾಯಿಸುವ ಒಂದು ದಿನ ಮಾತ್ರ ನಮಗೆ ಬೆಲೆ ಇರುತ್ತೆ, ಆಮೇಲೆ ನಾವು ಮೂಕ ಪ್ರೇಕ್ಷಕರು ಎಂದು ಟೀಕಿಸಿದ್ದಾರೆ.

    ರಾಜಕೀಯ ಹೈ ಡ್ರಾಮಕ್ಕೆ ಯಾವತ್ತು ತೆರೆಬೀಳಲಿದೆ ಎಂದು ಇಡೀ ಕರ್ನಾಟಕ ಜನತೆ ಕಾತುರದಿಂದ ಕಾಯುತ್ತಿದೆ. ಸಿ ಎಂ ಕುಮಾರ ಸ್ವಾಮಿ ವಿಶ್ವಾಸಮತ ಸಬೀತು ಮಾಡ್ತಾರಾ, ಅಥವಾ ಸಾಬೀತು ಮಾಡಲಾಗದೆ ಸಿ ಎಂ ಸ್ಥಾನಕ್ಕೆ ರಾಜಿನಾಮೆ ನೀಡುತ್ತಾರ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.

    ರಾಜ್ಯ ರಾಜಕೀಯದ ಈಗಿನ ಸ್ಥಿತಿ ನೋಡಿ ಉಪೇಂದ್ರ ಟ್ವೀಟ್ ಮಾಡಿದ್ದಾರೆ. "ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಮತ ಚಲಾಯಿಸುವ ಒಂದು ದಿನ ಮಾತ್ರ ನಮಗೆ ಬೆಲೆ ಇರುತ್ತದೆ , ಆನಂತರ ನಾವು ಮೂಕ ಪ್ರೇಕ್ಷಕರು. ನಾಯಕರಿಂದ ಪ್ರಜೆಗಳಿಗೆ ಸಂಪೂರ್ಣ ಅಧಿಕಾರ ಹಸ್ತಾಂತರ ಮಾಡಲು ಬಹುಮತ ಬೇಕು ಅದಕ್ಕೆ ಪ್ರಜೆಗಳೇ ಪ್ರಜಾಕೀಯ ಪಕ್ಷಕ್ಕೆ ಸ್ಪರ್ದಿ ಹಾಗೂ ಕಾರ್ಯಕರ್ತರಾಗಬೇಕು. ( ಮತ್ತೊಬ್ಬ ನಾಯಕ ಮಾಡಲಿ ಎಂದು ನಾವು ಕಾಯಬಾರದು)"

    Kannada actor real star Upendra tweet about current political drama

    ರಾಜಕೀಯವನ್ನು ಅಣಕಿಸುವ ಜೊತೆಗೆ ಪ್ರಜಾಕೀಯವನ್ನು ಬೆಂಬಲಿಸಿ ಇಲ್ಲಿ ಪ್ರಜೆಗಳೆ ಪಕ್ಷಕ್ಕೆ ಸ್ಪರ್ಧಿ ಹಾಗೂ ಕಾರ್ಯಕರ್ತರಾಗಿರುತ್ತರೆ ಎಂದು ಹೇಳಿದ್ದಾರೆ. ಉಪೇಂದ್ರ ಅವರ ಪ್ರಜಾಕೀಯ ಪಕ್ಷ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿತ್ತು. ರಿಯಲ್ ಸ್ಟಾರ್ ಈಗ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

    English summary
    Kannada actor real star Upendra tweet about current political drama. Upendra founder of the Prajakeeya party.
    Friday, July 19, 2019, 11:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X