ಮತ್ತೆ ನಿರ್ದೇಶನಕ್ಕೆ ಮರಳಿದ ರಿಯಲ್ ಸ್ಟಾರ್ ಉಪೇಂದ್ರ

Recommended Video

I Love You Kannada Movie:ಉಪ್ಪಿ 2 ಆದ್ಮೇಲೆ ಮತ್ತೆ ನಿರ್ದೇಶನದತ್ತ ಉಪ್ಪಿ | FILMIBEAT KANNADA

ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾಗಳೆಂದ್ರೆನೆ ವಿಭಿನ್ನ ವಿನೂತನ. ಒಂದು ಕಾಲದಲ್ಲಿ ಚಿತ್ರಾಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತಿದ್ದ ರಿಯಲ್ ಸ್ಟಾರ್, ನಿರ್ದೇಶನ ಮಾಡದೆ ಅನೇಕ ವರ್ಷಗಳೆ ಆಗಿವೆ. ಉಪ್ಪಿ ಯಾವಾಗ ಆಕ್ಷನ್ ಕಟ್ ಹೇಳ್ತಾರೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಆದ್ರೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಹೌದು, ರಿಯಲ್ ಸ್ಟಾರ್ ಮುಂದಿನ ವರ್ಷ ಸಿನಿಮಾ ನಿರ್ದೇಶನ ಮಾಡುವ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಉಪೇಂದ್ರ ಅವರು ಪ್ರಜಾಕೀಯಕ್ಕೆ ಇಳಿದಾಗಿನಿಂದ ಸಿನಿಮಾ ರಂಗ ಬಿಟ್ಟುಬಿಡ್ತಾರಾ ಎನ್ನುವ ಅನುಮಾನ ಅನೇಕರನ್ನು ಕಾಡಿತ್ತು.

ಆದ್ರೀಗ 'ಐ ಲವ್ ಯು' ಸಿನಿಮಾ ಮೂಲಕ ಮತ್ತೆ ಎಂಟ್ರಿ ಕೊಡ್ತಿದ್ದಾರೆ. ಸದ್ಯ 'ಐ ಲವ್ ಯು' ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. 'ಐ ಲವ್ ಯು' ಸಿನಿಮಾ ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲೂ ತೆರೆಗೆ ಬರುತ್ತಿದೆ. ಇತ್ತೀಚಿಗಷ್ಟೆ ಚಿತ್ರದ ತೆಲುಗು ಆಡಿಯೋವನ್ನು ವಿಶಾಖಪಟ್ಟಣದಲ್ಲಿ ರಿಲೀಸ್ ಮಾಡಲಾಗಿದೆ.

Kannada actor realstar Upendra returns direction

ಈ ಸಂದರ್ಭದಲ್ಲಿ ಮಾತನಾಡಿದ ಉಪೇಂದ್ರ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿದ್ದಾರೆ. ಅಚ್ಚರಿ ಅಂದ್ರೆ ಉಪ್ಪಿಯ ನಿರ್ದೇಶನದ ಸಿನಿಮಾ ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲೂ ತಯಾರಾಗುತ್ತಂತೆ. ಉಪೇಂದ್ರ ಸಾಕಷ್ಚು ತೆಲುಗು ಚಿತ್ರದಲ್ಲೂ ಮಿಂಚಿದ್ದಾರೆ. ಹಾಗಾಗಿ ತೆಲುಗು ಚಿತ್ರರಂಗ ಉಪೇಂದ್ರ ಅವರಿಗೇನು ಹೊಸದಲ್ಲ.

'ಉಪ್ಪಿ-2' ಸಿನಿಮಾ ನಂತರ ಉಪೇಂದ್ರ ಮತ್ತೆ ನಿರ್ದೇಶನಕ್ಕೆ ಇಳಿದಿರಲಿಲ್ಲ. ಸಿನಿಮಾ ನಿರ್ದೇಶನದ ಬಗ್ಗೆ ಕೇಳಿದ್ರೆ ಪ್ರಜಾಕೀಯನೆ ಮುಂದಿನ ಸಿನಿಮಾ ಆದ್ರೂ ಆಗಬಹುದು ಎಂದು ಒಗಟಾಗಿ ಹೇಳುತ್ತಿದ್ದರು. ಸದ್ಯ ನಿರ್ದೇಶನ ಮಾಡುವ ಬಗ್ಗೆ ಬಹಿರಂಗ ಪಡಿಸಿರುವ ಉಪೇಂದ್ರ ಮತ್ಯಾವ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಸದ್ಯದಲ್ಲೆ ಉಪ್ಪಿ ನಿರ್ದೇಶನದ ಹೊಸ ಸಿನಿಮಾದ ಮಾಹಿತಿ ಗೊತ್ತಾಗಲಿದೆ.

More from Filmibeat

English summary
Kannada actor real star Upendra returns direction. He is planning to direct the next film in Kannada and Telugu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X