For Quick Alerts
  ALLOW NOTIFICATIONS  
  For Daily Alerts

  ನಟ ರಿಷಿ ಹುಟ್ಟುಹಬ್ಬ: ನೋಡಿ ಸ್ವಾಮಿ ಇವನು ಇರೋದೆ ಹೀಗೆ

  |

  ಸ್ಯಾಂಡಲ್ ವುಡ್ ನಟ ರಿಷಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಹುಟ್ಟುಹಬ್ಬದ ಪ್ರಯುಕ್ತ ಇಂದು ಹೊಸ ಸಿನಿಮಾದ ಟೈಟಲ್ ಮತ್ತು ಪೋಸ್ಟರ್ ಬಿಡುಗಡೆಯಾಗಿದೆ.

  ಹೊಸ ಚಿತ್ರಕ್ಕೆ 'ನೋಡಿ ಸ್ವಾಮಿ ಇವನು ಇರೋದೆ ಹೀಗೆ' ಎಂದು ಟೈಟಲ್ ಇಡಲಾಗಿದೆ. ಈ ಶೀರ್ಷಿಕೆ ಶಂಕರ್ ನಾಗ್ ಅವರು 'ನೋಡಿ ಸ್ವಾಮಿ ನಾವ್ ಇರೋದೆ ಹೀಗೆ' ಚಿತ್ರ ನೆನಪಿಸುತ್ತೆ. ಅಂದಹಾಗೆ ಈ ಚಿತ್ರಕ್ಕೆ ಇಸ್ಲಾಹುದ್ದೀನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಇಸ್ಲಾಹುದ್ದೀನ್ ಅವರ ಚೊಚ್ಚಲ ನಿರ್ದೇಶನದ ಸಿನಿಮಾ.

  ಅಂದಹಾಗೆ ಈ ಸಿನಿಮಾ ಕನ್ನಡದ ಜೊತೆಗೆ ತೆಲುಗಿನಲ್ಲಿ ಬರ್ತಿದೆ. ಇಂದು ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾದ ಪೋಸ್ಟರ್ ನಲ್ಲಿ ರಿಷಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ರಿಷಿ ಲವ್ ಫೇಲ್ಯೂರ್ ಬಳಿಕ ಖಿನ್ನತೆಗೆ ಜಾರಿದ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ಸಮಾಜದಲ್ಲಿ ಸಂತೋಷವಾಗಿ ಕಾಣಿಸುವ ಈ ವ್ಯಕ್ತಿ ವೈಯಕ್ತಿಕವಾಗಿ ತುಂಬಾ ನೋವಿನಲ್ಲಿ ಇರುವ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಅಂದಹಾಗೆ ನಟ ರಿಷಿಗೆ ಜೋಡಿಯಾಗಿ ನಟಿ ಧನ್ಯಾ ಬಾಲಕೃಷ್ಣ ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ಧನ್ಯಾ ಎರಡನೇ ಬಾರಿ ರಿಷಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೊದಲು 'ಸಾರ್ವಜನಿಕರಿಗೆ ಸುವರ್ಣಾವಕಾಶ' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು.

  ಈಗಾಗಲೇ ಚಿತ್ರೀಕರಣ ಮುಗಿಸಿದ್ದು, ಬಿಡುಗಡೆಗೆ ತಯಾರಿ ನಡೆಸುತ್ತಿದೆ ಸಿನಿಮಾತಂಡ. ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗುತ್ತಾ ಅಥವಾ ಚಿತ್ರದಲ್ಲಿ ಬರುತ್ತಾ ಎಂದು ಕಾದುನೋಡಬೇಕು. ಇನ್ನು ನಟ ರಿಷಿ ಬಳಿ ಅನೇಕ ಸಿನಿಮಾಗಳಿವೆ. ರಾಮನವತಾರ, ಸೀರೆ, ಸಕಲಕಲಾ ವಲ್ಲಭ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  ಅಪ್ಪ ಸಾಂಗ್ ನೋಡಿ ಎಂಜಾಯ್ ಮಾಡುತ್ತಿದ್ದಾನೆ Junior Chiru | Filmibeat Kannada
  English summary
  Kannada Actor Rishi celebrating his birthday today. Nodi Swamy Ivanu Irode Heege movie poster release on his birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X