'ಆಪರೇಷನ್ ಅಲಮೇಲಮ್ಮ' ಖ್ಯಾತಿಯ ನಟ ರಿಷಿ ನಿಶ್ಚಿತಾರ್ಥ

'ಆಪರೇಷನ್ ಅಲಮೇಲಮ್ಮ' ಸಿನಿಮಾದ ಖ್ಯಾತಿಯ ನಟ ರಿಷಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸ್ವಾತಿ ಎಂಬುವವರೊಂದಿಗೆ ರಿಷಿ ಹೊಸ ಬದುಕು ಶುರು ಮಾಡಿದ್ದಾರೆ.

ರಿಷಿ ಹಾಗೂ ಸ್ವಾತಿ ಅವರ ನಿಶ್ಚಿತಾರ್ಥ ಕಾರ್ಯಕ್ರಮ ಕಳೆದ ಭಾನುವಾರ (ಏಪ್ರಿಲ್ 7) ನಡೆದಿದೆ. ಹೈದರಾಬಾದಿನ ಖಾಸಗಿ ಹೋಟೆಲ್ ನಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.

ರಿಷಿ ಅವರ ಕುಟುಂಬ ಹಾಗೂ ಚಿತ್ರರಂಗದ ಕೆಲವು ಸ್ನೇಹಿತರು ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 'ಗುಳ್ಟು' ಸಿನಿಮಾದ ನಟ ನವೀನ್ ನವ ಜೋಡಿಗೆ ಶುಭ ಹಾರೈಸಿದರು.

kannada actor rishi got engaged with swathi

ಮತ್ತೊಂದು ವಿಶೇಷ ಅಂದರೆ, ರಿಷಿ ನಟನೆಯ 'ಕವಲುದಾರಿ' ಸಿನಿಮಾ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ಒಂದು ಕಡೆ ಸಿನಿಮಾದ ಸಂಭ್ರಮವಾದರೆ, ಮತ್ತೊಂದು ಕಡೆ ವೈಯಕ್ತಿಕ ಜೀವನದ ಸಂತಸದ ಕ್ಷಣದಲ್ಲಿ ರಿಷಿ ಇದ್ದಾರೆ.

'ಅನುರೂಪ' ಧಾರಾವಾಹಿಯಲ್ಲಿ ನಟಿಸಿದ್ದ ರಿಷಿ 'ಆಪರೇಷನ್ ಅಲಮೇಲಮ್ಮ' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಬಂದರು. ಆ ಸಿನಿಮಾದ ನಂತರ ಪುನೀತ್ ರಾಜ್ ಕುಮಾರ್ ಅವರ ನಿರ್ಮಾಣದ 'ಕವಲುದಾರಿ'ಗೆ ನಾಯಕರಾಗಿ ಆಯ್ಕೆ ಆದರು.

More from Filmibeat

English summary
Kannada actor, 'Operation Alamelamma' fame Rishi got engaged with swathi last sunday in hyderabad.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X