Don't Miss!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- News Chardham Yatra Guidelines 2024: ಚಾರ್ಧಾಮ್ ಯಾತ್ರೆಗೆ ಹೋಗುವಾಗ ಈ ವಸ್ತುಗಳನ್ನು ಬ್ಯಾಗ್ ಅಲ್ಲಿ ಇಟ್ಟುಕೊಳ್ಳಿ....
- Automobiles ಹೊಸ ಜೀಪ್ ರಾಂಗ್ಲರ್ ಸಂಪೂರ್ಣ ರಿವ್ಯೂ ವಿಡಿಯೋ: ಆಫ್ರೋಡ್ನಲ್ಲಿ ಇದನ್ನು ಮೀರಿಸುವವರಿಲ್ಲ!
- Lifestyle ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಅವತಾರದಲ್ಲಿ ರಾಕಿ ಭಾಯ್ ಮಿಂಚಿಂಗ್
Recommended Video
ರಾಕಿಂಗ್ ಸ್ಟಾರ್ ಯಶ್ ಸದ್ಯ ಬಹು ನಿರೀಕ್ಷೆಯ 'ಕೆಜಿಎಫ್-2 'ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಮಂಡ್ಯ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ, ಸುಮಲತಾ ಅವರ ಗೆಲುವಿನ ನಂತರ ಸ್ವಾಭಿಮಾನಿ ಸಮಾವೇಶದಲ್ಲೂ ಭಾಗಿಯಾಗಿ ಮಂಡ್ಯ ಜನತೆಗೆ ಧನ್ಯವಾದ ತಿಳಿಸಿದ ನಂತರ ರಾಕಿ ಭಾಯ್ ಈಗ ಮತ್ತೆ ಕೆಜಿಎಫ್ ಕಡೆ ಮುಖ ಮಾಡಿದ್ದಾರೆ.
ಸದ್ಯ ಚಿತ್ರಕ್ಕಾಗಿ ವರ್ಕೌಟ್ ನಲ್ಲಿ ಬ್ಯುಸಿ ಇರುವ ಯಶ್ ಇದೆ ತಿಂಗಳು 6ರಿಂದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಮೈಸೂರಿನಲ್ಲಿ ನಡೆಯುವ ಚಿತ್ರೀಕಣದಲ್ಲಿ ಹಾಜರಾಗುವ ಮೂಲಕ 'ಚಾಪ್ಟರ್-2' ಚಿತ್ರವನ್ನು ಮೈಸೂರಿನಿಂದ ಪ್ರಾರಂಭಿಸುತ್ತಿದ್ದಾರೆ.
ಜೂನ್ ಮೊದಲ ವಾರದಿಂದ 'ಕೆಜಿಎಫ್-2' ಚಿತ್ರೀಕರಣಕ್ಕೆ ರಾಕಿ ಭಾಯ್ ಎಂಟ್ರಿ
ಇದರ ನಡುವೆ ರಾಕಿ ಭಾಯ್ ಹೊಸ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಉದ್ದ ಕೂದಲು ಮತ್ತು ಉದ್ದ ದಾಡಿ ಬಿಟ್ಟಿರುವ ಯಶ್ ರಾಯಲ್ ಲುಕ್ ಅಭಿಮಾನಿಗಳ ನಿದ್ದೆ ಗೆಡಿಸಿದೆ. ಈ ಫೋಟೋ ಈಗ ಯಾವ ಚಿತ್ರದ್ದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ.
ಅಂದ್ಹಾಗೆ ಈ ಹೊಸ ಫೋಟೋ ಜಾಹಿರಾತು ಒಂದರ ದೃಶ್ಯವಂತೆ. ಈ ಫೋಟೋ ಯಶ್ ಅವರ ಹೊಸ ಚಿತ್ರದ್ದು ಆಗಿರಬಹುದು ಎನ್ನುವ ಕುತೂಹಲ ಅಭಿಮಾನಿಗಳಿತ್ತು. ಆದ್ರೆ ಈ ಹೊಸ ಲುಕ್ ಜಾಹಿರಾತಿನ ಫೋಟೋ ಶೂಟ್ ಎಂದು ಹೇಳಲಾಗುತ್ತಿದೆ.
'ಕೆಜಿಎಫ್' ಚಿತ್ರದಲ್ಲೂ ಯಶ್ ಉದ್ದ ಕೂದಲು ಮತ್ತು ದಾಡಿ ಬಿಟ್ಟಿದ್ದರು. ಪಾರ್ಟ-2 ನಲ್ಲೂ ಅದೇ ಲುಕ್ ನಲ್ಲಿ ಮಿಂಚಲಿದ್ದಾರೆ. ಮೊದಲ ಭಾಗಕ್ಕಿಂತ 'ಕೆಜಿಎಫ್ ಪಾರ್ಟ್-2' ಮತ್ತಷ್ಟು ಅದ್ಧೂರಿಯಾಗಿರಲಿದೆಯಂತೆ. ಚಿತ್ರದಲ್ಲಿ ಬಾಲಿವುಡ್ ಸ್ಟಾರ್ಸ್ ಸಹ ಕಾಣಿಸಿಕೊಳ್ಳುತ್ತಿದ್ದಾರೆ.