ಕುತೂಹಲ ಕೆರಳಿಸುವ '6ನೇ ಮೈಲಿ' ಚಿತ್ರದ ಟ್ರೈಲರ್ ನೋಡಿದ್ರಾ.?
'ನಾನು ಅವನಲ್ಲ ಅವಳು', 'ಅಲ್ಲಮ', 'ಕೃಷ್ಣ ತುಳಸಿ'... ಮುಂತಾದ ಸಿನಿಮಾಗಳಲ್ಲಿ ಭಿನ್ನ-ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿದ್ದ ನಟ ಸಂಚಾರಿ ವಿಜಯ್ ಔಟ್ ಅಂಡ್ ಔಟ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಸಿನಿಮಾ '6ನೇ ಮೈಲಿ'.
ಹಲವು ವಿಶೇಷತೆಗಳಿಂದ ಗಾಂಧಿನಗರದ ಮೂಲೆ ಮೂಲೆಯಲ್ಲೂ ತಮಟೆ ಬಾರಿಸುತ್ತಿರುವ '6ನೇ ಮೈಲಿ' ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಅಮೃತಹಸ್ತದಿಂದ '6ನೇ ಮೈಲಿ' ಸಿನಿಮಾದ ಟ್ರೈಲರ್ ನಿಮ್ಮೆಲ್ಲರ ಮುಂದೆ ಬಂದಿದೆ.
'6ನೇ ಮೈಲಿ' ಸಿನಿಮಾದ ಟ್ರೈಲರ್ ನೋಡಿದ್ರೆ, ಇದು ಪಕ್ಕಾ ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾ ಅನ್ನೋದ್ರಲ್ಲಿ ಡೌಟೇ ಬೇಡ. ದಟ್ಟಾರಣ್ಯ ಪ್ರದೇಶಗಳಲ್ಲಿ ನಡೆಯುವ ಸರಣಿ ಕೊಲೆಗಳ ಹಿಂದಿನ 'ಕ್ರೋಧ'ದ ಕಥೆಯನ್ನ ಹೊಂದಿರುವ ಸಿನಿಮಾ '6ನೇ ಮೈಲಿ' ಅನ್ನೋದು ಟ್ರೈಲರ್ ನಲ್ಲೇ ಸ್ಪಷ್ಟವಾಗಿದೆ.

ಅಷ್ಟಕ್ಕೂ, '6ನೇ ಮೈಲಿ' ನೈಜ ಘಟನೆ ಆಧಾರಿತ ಸಿನಿಮಾ. 2010 ರಿಂದ 2014 ರ ಕಾಲದಲ್ಲಿ ಪಶ್ಚಿಮ ಘಟ್ಟಗಳಲ್ಲಿ ನಡೆದಿರುವ ಘಟನೆಗಳನ್ನು ಇಟ್ಟುಕೊಂಡು ನಿರ್ದೇಶಕ ಸೀನಿ '6ನೇ ಮೈಲಿ' ಚಿತ್ರಕಥೆ ಹೆಣೆದಿದ್ದಾರೆ.
ಸಂಚಾರಿ ವಿಜಯ್, ಆರ್.ಜೆ ನೇತ್ರ, ಆರ್ ಜೆ ಸುದೇಶ್ ಭಟ್ ಸೇರಿದಂತೆ ರಂಗಭೂಮಿ ಕಲಾವಿದರ ದಂಡೇ ಸಿನಿಮಾದಲ್ಲಿದೆ.
ಹೇಳಿ ಕೇಳಿ '6ನೇ ಮೈಲಿ' ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾ. ಹೀಗಾಗಿ ಸಿನಿಮಾದಲ್ಲಿ ಹೆಚ್ಚು ಹಾಡುಗಳನ್ನು ತುರುಕಿಲ್ಲ. ಚಿತ್ರದಲ್ಲಿ ಇರುವುದು ಒಂದೇ ಹಾಡಾದರೂ, ಅದನ್ನ ಡೆಟ್ ಮೆಟಲ್ ಪ್ಯಾಟ್ರನ್ ನಲ್ಲಿ ಸಂಗೀತ ಸಂಯೋಜಿಸಿದ್ದಾರೆ ಸಾಯಿ ಕಿರಣ್. ಪ್ರತಿಭಾವಂತರ ಪ್ರಯತ್ನ ಮೆಚ್ಚಿ ಪುನೀತ್ ರಾಜ್ ಕುಮಾರ್ ತಮ್ಮ ಪಿ.ಆರ್.ಕೆ ಆಡಿಯೋ ಮೂಲಕ '6ನೇ ಮೈಲಿ' ಹಾಡನ್ನ ಮಾರುಕಟ್ಟೆಗೆ ತಂದಿದ್ದಾರೆ. ಇನ್ನೂ ಶಿವಣ್ಣ ಕೂಡ ಟ್ರೈಲರ್ ಬಿಡುಗಡೆ ಮಾಡಿದ್ದಾರೆ.
ಡಾ.ಶೈಲೇಶ್ ಕುಮಾರ್ ನಿರ್ಮಾಣ ಮಾಡಿರುವ '6ನೇ ಮೈಲಿ' ಸಿನಿಮಾ ಇದೇ ಶುಕ್ರವಾರ ಅಂದ್ರೆ ಜುಲೈ 6 ರಂದು ಬಿಡುಗಡೆ ಆಗಲಿದೆ. ಚಿತ್ರವನ್ನ ನೀವು ಥಿಯೇಟರ್ ನಲ್ಲಿ ನೋಡುವ ಮುನ್ನ ಒಮ್ಮೆ ಟ್ರೈಲರ್ ನ ನೋಡ್ಬಿಡಿ...


Click it and Unblock the Notifications











