For Quick Alerts
  ALLOW NOTIFICATIONS  
  For Daily Alerts

  ಕುತೂಹಲ ಕೆರಳಿಸುವ '6ನೇ ಮೈಲಿ' ಚಿತ್ರದ ಟ್ರೈಲರ್ ನೋಡಿದ್ರಾ.?

  By Harshitha
  |
  ಸಖತ್ ಥ್ರಿಲ್ಲಿಂಗ್ ಆಗಿದೆ 6ನೇ ಮೈಲಿ ಟ್ರೇಲರ್...! | Filmibeat Kannada

  'ನಾನು ಅವನಲ್ಲ ಅವಳು', 'ಅಲ್ಲಮ', 'ಕೃಷ್ಣ ತುಳಸಿ'... ಮುಂತಾದ ಸಿನಿಮಾಗಳಲ್ಲಿ ಭಿನ್ನ-ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿದ್ದ ನಟ ಸಂಚಾರಿ ವಿಜಯ್ ಔಟ್ ಅಂಡ್ ಔಟ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಸಿನಿಮಾ '6ನೇ ಮೈಲಿ'.

  ಹಲವು ವಿಶೇಷತೆಗಳಿಂದ ಗಾಂಧಿನಗರದ ಮೂಲೆ ಮೂಲೆಯಲ್ಲೂ ತಮಟೆ ಬಾರಿಸುತ್ತಿರುವ '6ನೇ ಮೈಲಿ' ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಅಮೃತಹಸ್ತದಿಂದ '6ನೇ ಮೈಲಿ' ಸಿನಿಮಾದ ಟ್ರೈಲರ್ ನಿಮ್ಮೆಲ್ಲರ ಮುಂದೆ ಬಂದಿದೆ.

  '6ನೇ ಮೈಲಿ' ಸಿನಿಮಾದ ಟ್ರೈಲರ್ ನೋಡಿದ್ರೆ, ಇದು ಪಕ್ಕಾ ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾ ಅನ್ನೋದ್ರಲ್ಲಿ ಡೌಟೇ ಬೇಡ. ದಟ್ಟಾರಣ್ಯ ಪ್ರದೇಶಗಳಲ್ಲಿ ನಡೆಯುವ ಸರಣಿ ಕೊಲೆಗಳ ಹಿಂದಿನ 'ಕ್ರೋಧ'ದ ಕಥೆಯನ್ನ ಹೊಂದಿರುವ ಸಿನಿಮಾ '6ನೇ ಮೈಲಿ' ಅನ್ನೋದು ಟ್ರೈಲರ್ ನಲ್ಲೇ ಸ್ಪಷ್ಟವಾಗಿದೆ.

  'ಡೆತ್ ಮೆಟಲ್ ಪ್ಯಾಟ್ರನ್'ನ ಮೊದಲ ಬಾರಿಗೆ ಕನ್ನಡಕ್ಕೆ ತಂದ ಚಿತ್ರ '6ನೇ ಮೈಲಿ''ಡೆತ್ ಮೆಟಲ್ ಪ್ಯಾಟ್ರನ್'ನ ಮೊದಲ ಬಾರಿಗೆ ಕನ್ನಡಕ್ಕೆ ತಂದ ಚಿತ್ರ '6ನೇ ಮೈಲಿ'

  ಅಷ್ಟಕ್ಕೂ, '6ನೇ ಮೈಲಿ' ನೈಜ ಘಟನೆ ಆಧಾರಿತ ಸಿನಿಮಾ. 2010 ರಿಂದ 2014 ರ ಕಾಲದಲ್ಲಿ ಪಶ್ಚಿಮ ಘಟ್ಟಗಳಲ್ಲಿ ನಡೆದಿರುವ ಘಟನೆಗಳನ್ನು ಇಟ್ಟುಕೊಂಡು ನಿರ್ದೇಶಕ ಸೀನಿ '6ನೇ ಮೈಲಿ' ಚಿತ್ರಕಥೆ ಹೆಣೆದಿದ್ದಾರೆ.

  ಸಂಚಾರಿ ವಿಜಯ್, ಆರ್.ಜೆ ನೇತ್ರ, ಆರ್ ಜೆ ಸುದೇಶ್ ಭಟ್ ಸೇರಿದಂತೆ ರಂಗಭೂಮಿ ಕಲಾವಿದರ ದಂಡೇ ಸಿನಿಮಾದಲ್ಲಿದೆ.

  'ಅಂಜನೀಪುತ್ರ', 'ಟಗರು' ಬಳಿಕ ಅಪ್ಪು ಅಪ್ಪಿಕೊಂಡಿದ್ದು 'ಇದೇ' ಹಾಡನ್ನ.!'ಅಂಜನೀಪುತ್ರ', 'ಟಗರು' ಬಳಿಕ ಅಪ್ಪು ಅಪ್ಪಿಕೊಂಡಿದ್ದು 'ಇದೇ' ಹಾಡನ್ನ.!

  ಹೇಳಿ ಕೇಳಿ '6ನೇ ಮೈಲಿ' ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾ. ಹೀಗಾಗಿ ಸಿನಿಮಾದಲ್ಲಿ ಹೆಚ್ಚು ಹಾಡುಗಳನ್ನು ತುರುಕಿಲ್ಲ. ಚಿತ್ರದಲ್ಲಿ ಇರುವುದು ಒಂದೇ ಹಾಡಾದರೂ, ಅದನ್ನ ಡೆಟ್ ಮೆಟಲ್ ಪ್ಯಾಟ್ರನ್ ನಲ್ಲಿ ಸಂಗೀತ ಸಂಯೋಜಿಸಿದ್ದಾರೆ ಸಾಯಿ ಕಿರಣ್. ಪ್ರತಿಭಾವಂತರ ಪ್ರಯತ್ನ ಮೆಚ್ಚಿ ಪುನೀತ್ ರಾಜ್ ಕುಮಾರ್ ತಮ್ಮ ಪಿ.ಆರ್.ಕೆ ಆಡಿಯೋ ಮೂಲಕ '6ನೇ ಮೈಲಿ' ಹಾಡನ್ನ ಮಾರುಕಟ್ಟೆಗೆ ತಂದಿದ್ದಾರೆ. ಇನ್ನೂ ಶಿವಣ್ಣ ಕೂಡ ಟ್ರೈಲರ್ ಬಿಡುಗಡೆ ಮಾಡಿದ್ದಾರೆ.

  ಡಾ.ಶೈಲೇಶ್ ಕುಮಾರ್ ನಿರ್ಮಾಣ ಮಾಡಿರುವ '6ನೇ ಮೈಲಿ' ಸಿನಿಮಾ ಇದೇ ಶುಕ್ರವಾರ ಅಂದ್ರೆ ಜುಲೈ 6 ರಂದು ಬಿಡುಗಡೆ ಆಗಲಿದೆ. ಚಿತ್ರವನ್ನ ನೀವು ಥಿಯೇಟರ್ ನಲ್ಲಿ ನೋಡುವ ಮುನ್ನ ಒಮ್ಮೆ ಟ್ರೈಲರ್ ನ ನೋಡ್ಬಿಡಿ...

  English summary
  Watch Video: Kannada Actor Sanchari Vijay and RJ Netra starrer '6ne Maili' trailer is out.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X