ಹೇಗಿತ್ತು ಗೊತ್ತೆ ರಾಷ್ಟ್ರ ಪ್ರಶಸ್ತಿ ವಿಜೇತ ನಟನ ಆಡಿಷನ್ ಅನುಭವ

ನಟ ಸಂಚಾರಿ ವಿಜಯ್ ತಮ್ಮ ನಟನೆಯ ಮೂಲಕ ದೇಶ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ದಶಕಗಳ ನಂತರ ಕನ್ನಡಕ್ಕೆ ರಾಷ್ಟ್ರ ಪ್ರಶಸ್ತಿಯನ್ನ ತಂದುಕೊಟ್ಟ ಖ್ಯಾತಿ ಅವರಿಗೆ ಇದೆ. ಪ್ರಶಸ್ತಿಯ ಬಳಿ ಸದ್ಯ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಇಂತಹ ನಟ ಈಗ ತಮ್ಮ ಆಡಿಷನ್ ಅನುಭವನ್ನು ಹಂಚಿಕೊಂಡಿದ್ದಾರೆ. ನಿರ್ದೇಶಕ ಮಂಸೋರೆ ಅವರ ಬಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಕೆಲ ಸುಂದರ ಸಾಲುಗಳನ್ನ ಸಂಚಾರಿ ವಿಜಯ್ ಬರೆದಿದ್ದು, ಅದನ್ನ ಓದಿದರೆ ಅವರ ಆಡಿಷನ್ ಅನುಭವ ಕೂಡ ತಿಳಿಯುತ್ತದೆ.

'ಹರಿವು' ಸಿನಿಮಾದ ಮೂಲಕ ಸಂಚಾರಿ ವಿಜಯ್ ನಾಯಕ ನಟನಾದರು. ಅದೇ ಸಿನಿಮಾ ಮಂಸೊರೆ ಅವರನ್ನ ಡೈರೆಕ್ಟರ್ ಆಗುವಂತೆ ಮಾಡಿತ್ತು. ಇಂತಹ ಸಿನಿಮಾದ ಹಿಂದಿನ ಒಂದು ಕುತೂಹಲಕಾರಿ ಘಟನೆಯನ್ನ ಸಂಚಾರಿ ವಿಜಯ್ ಹಂಚಿಕೊಂಡಿದ್ದಾರೆ. ಮಂಸೋರೆ 'ನಾತಿಚರಾಮಿ' ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು ಈ ಹಿನ್ನಲೆಯಲ್ಲಿ ಸಂಚಾರಿ ವಿಜಯ್

ಅಂದಗಾಗೆ, ಸಂಚಾರಿ ವಿಜಯ್ ಅವರ ನೆನಪನ್ನು ಅವರ ಸಾಲುಗಳಲ್ಲೇ ಓದಿ..

ಕಾಲೇಜು ಹುಡುಗನ ಹಾಗೆ ಕಾಣುತ್ತಿದ್ದೆ

ಕಾಲೇಜು ಹುಡುಗನ ಹಾಗೆ ಕಾಣುತ್ತಿದ್ದೆ

''ಗೊತ್ತಿಲ್ಲ ಇವರ ಬಗ್ಗೆ ಏನು ಬರೆಯೋದು ಅಂತ, ಆದರೂ ನಾಲ್ಕು ಮಾತು. ಸುಮಾರು 6 ವರ್ಷಗಳ ಹಿಂದೆ 11/11/11 ಎನ್ನುವ ಒಂದು ಚಿತ್ರಕ್ಕೆ ಎಲ್ಲರ ಹಾಗೆ ನಾನೂ ಸಹ ಸರದಿಯಲ್ಲಿ ನಿಂತು ಆಡಿಷನ್ ಕೊಡೋಕೆ ಅಂತ ಹೋಗಿದ್ದೆ, ಕಾರಣಾಂತರಗಳಿಂದ ಆಯ್ಕೆ ಆಗಲಿಲ್ಲ, ಬದಲಿಗೆ ಅದೇ ಜಾಗದಲ್ಲಿ ಮತ್ತೊಂದು ಚಿತ್ರಕ್ಕೆ ಅವಕಾಶ ಸಿಕ್ತು. ಆಗ ನಾನು ನೋಡೋಕೆ ಇನ್ನೂ ಕಾಲೇಜು ಹುಡುಗನ ಹಾಗೆ ಕಾಣುತ್ತಿದ್ದೆ ಅಂತ ಕೆಲವರು ಹೇಳೋರು.''

ಮೊದಲ ಭೇಟಿ ಮೊದಲ ಮಾತು

ಮೊದಲ ಭೇಟಿ ಮೊದಲ ಮಾತು

''ಅಲ್ಲಿದ್ದ ಕಾಸ್ಟಿಂಗ್ ಡೈರೆಕ್ಟರ್ ಒಂದ್ ನಾಲಕ್ಕು ಸಾಲು ಸಂಭಾಷಣೆ ಕೊಟ್ಟು ಬೇರೆ ಬೇರೆ ರೀತಿಯಲ್ಲಿ ನಟನೆ ಮಾಡಿ ಅಂದ್ರು ನಾನು ಕಷ್ಟಪಟ್ಟು ಕಲಿತು ಅವರ ಮುಂದೆ ಮಾಡಿ ತೋರಿಸಿ ಏನು ಹೇಳ್ತಾರೋ ಅಂತ ಜಾತಕ ಪಕ್ಷಿಯ ಹಾಗೆ ಕಾಯ್ತಾ ಕೂತಿದ್ದೆ, ಇವರು ಒಳಗಡೆ ಏನೇನೋ ಲೆಕ್ಕಾಚಾರ ಹಾಕಿ ಬಂದವರೆ 'ನೋಡಿ ವಿಜಯ್ ನಾನೊಂದು ಸಿನಿಮಾ ಮಾಡ್ತಾ ಇದ್ದೀನಿ ಅದರಲ್ಲಿ ಒಂದು ಪ್ರಮುಖ ಪಾತ್ರ ಇದೆ ನೀವು ಮಾಡ್ತೀರಿ ಅನ್ನೋ ನಂಬಿಕೆ ನನಗಿದೆ, ಮಾಡ್ತೀರಾ?' ಅಂದ್ರು, ಮೊದಲೇ ಯಾವ್ದಾದ್ರು ಒಂದು ಪಾತ್ರ ಸಿಕ್ರೆ ಸಾಕಪ್ಪಾ ಅಂತ ಕಾಯ್ತಾ ಇದ್ದವನಿಗೆ ಸ್ವರ್ಗನೇ ಕೈಗೆ ಸಿಕ್ಕಷ್ಟು ಖುಷಿಯಾಗಿ ಹಿಂದೆ ಮುಂದೆ ನೋಡ್ದೇನೆ 'ಹೂ' ಅಂದೆ.''

ನನಗೆ ಒಳಗೊಳಗೇ ಖುಷಿ

ನನಗೆ ಒಳಗೊಳಗೇ ಖುಷಿ

''ಅವರು ಕತೆ ಹೇಳ್ತಾ 'ಇದರಲ್ಲಿ ನೀವು ಮಾಡಬೇಕಿರುವುದು ಉತ್ತರ ಕರ್ನಾಟಕದಲ್ಲಿನ ಬಡ ಕುಟುಂಬದ ರೈತ ಅದರಲ್ಲೂ ಏಳು ವರ್ಷದ ಮಗುವಿನ ತಂದೆಯ ಪಾತ್ರ' ಅಂದರು, ನನಗೆ ಒಳಗೊಳಗೇ ಖುಷಿಯಾದರೂ ಸಹ ಯಾವ ಆಂಗಲ್ನಲ್ಲೀ ನಾನು ಏಳು ವರ್ಷದ ಮಗುವಿನ ತಂದೆಯ ಹಾಗೆ ಕಾಣಿಸುತ್ತೇನೆ ಅಂತ ಅವರನ್ನ ಕೇಳಿಯೇ ಬಿಟ್ಟೆ, 'ನಿಮಗ್ಯಾಕೆ ನಾನು ನಿಮ್ಮತ್ರ ಮಾಡಿಸುತ್ತೇನೆ' ಅಂತ ಹೇಳಿ ಮೊದಲನೇ ಬಾರಿಗೆ ಒಂದು ಮುಖ್ಯ ಪಾತ್ರಕ್ಕೆ ಅವಕಾಶ ಕೊಟ್ಟು ಕೊನೆಗೂ ಆ ಪಾತ್ರ ನನ್ನ ಹತ್ತಿರ ಮಾಡಿಸಿ ಪ್ರೇಕ್ಷಕರಿಗೆ ಹತ್ತಿರಾವಾಗುವಂತೆ ಮಾಡಿದರು, ಜೊತೆಗೆ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ, ರಾಜ್ಯಪ್ರಶಸ್ತಿ ಎರಡನ್ನೂ ಪಡೆದುಕೊಂಡರು''

ಸೂಕ್ಷ್ಮ ಸಂವೇದನೆಯ ಮನಸ್ಸಿನ ವ್ಯಕ್ತಿ

ಸೂಕ್ಷ್ಮ ಸಂವೇದನೆಯ ಮನಸ್ಸಿನ ವ್ಯಕ್ತಿ

''ಹರಿವು ಚಿತ್ರ ಬಹಳಷ್ಟು ಪ್ರೇಕ್ಷಕರ ಮನಸ್ಸನ್ನು ಕಲಕಿದ್ದು ಯೂಟ್ಯೂಬ್ ನಲ್ಲಿ 2 ಲಕ್ಷಕ್ಕೂ ಹೆಚ್ಚು ಜನ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಆದರೆ ಥಿಯೇಟರ್ ಗೆ ತರಬೇಕು ಅಂತ ಶತಪ್ರಯತ್ನ ಮಾಡಿ ಕೊನೆಗೂ ಆಗದೆ ಕೈಚೆಲ್ಲಿ ಕೂರಬೇಕಾಯ್ತು ಆ ಕೊರಗು ಈಗಲೂ ಇದೆ. ಇಷ್ಟು ಪೀಠಿಕೆ ಯಾಕೆ? ಯಾರಿಗೆ? ಅಂತೀರ ಅವರು ಮತ್ಯಾರು ಅಲ್ಲ "ಹರಿವು" ಖ್ಯಾತಿಯ "ನಾತಿಚರಾಮಿ" ಚಿತ್ರದ ನಿರ್ದೇಶಕ "ಮಂಸೋರೆ", ಸೂಕ್ಷ್ಮ ಸಂವೇದನೆಯ ಮನಸ್ಸಿನ ವ್ಯಕ್ತಿ.

ಮಗದಷ್ಟು ಒಳ್ಳೆಯ ಚಿತ್ರಗಳನ್ನು ಮಾಡಿ

ಮಗದಷ್ಟು ಒಳ್ಳೆಯ ಚಿತ್ರಗಳನ್ನು ಮಾಡಿ

'ಹರಿವು' ಸಿನಿಮಾ ಮಾಡುವಾಗ ನಾವು ಪಟ್ಟ ಕಷ್ಟ ಅನುಭವಿಸಿದ ನೋವು, ನಿರ್ಮಾಪಕರು ಸಿಗದೇ ಪರದಾಡಿದ ದಿನಗಳು ಕೊನೆಗೆ ನಮ್ಮ ಸ್ನೇಹಿತರನ್ನೇ ಕಾಡಿ ಬೇಡಿ ನಾವು ದಿನಗೂಲಿ ಕೆಲಸ ಮಾಡಿಯಾದರೂ ನಿಮ್ಮ ಹಣ ವಾಪಸ್ಸು ಕೊಡ್ತೀವಿ ಅಂತ ಮಾತು ಕೊಟ್ಟು ಹಣ ಹಾಕಿಸಿ ಸಿನಿಮಾ ಮಾಡಿದ ದಿನಗಳು ಇನ್ನೂ ಮನಸ್ಸಿನಲ್ಲಿ ಹಸಿಯಾಗಿವೆ. ಇಂಥ ಈ 'ಮಂಸೋರೆ'ಯವರಿಗೆ ಈಗಲೂ ಸಹ ಅದೇ ತಾಳ್ಮೆ,ಅದೇ ಹಟ, ಅದೇ ಸಿನಿಮಾ ಧ್ಯಾನ ಎಳ್ಳಷ್ಟೂ ಬದಲಾಗಿಲ್ಲ ಮುಂದೆಯೂ ಹೀಗೆಯೇ ಇರಿ ಮತ್ತಷ್ಟು ಮಗದಷ್ಟು ಒಳ್ಳೆಯ ಚಿತ್ರಗಳನ್ನು ಮಾಡಿ ಅದರಲ್ಲಿ ನಮಗೊಂದು ಅವಕಾಶ ಕೊಡಿ.

More from Filmibeat

English summary
Kannada actor Sanchari Vijay shared his audition experience.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X