»   » ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ 'ಜೂನಿಯರ್ ಅನಿಲ್', ಇವರು ಯಾರು?

ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ 'ಜೂನಿಯರ್ ಅನಿಲ್', ಇವರು ಯಾರು?

Posted By:
Subscribe to Filmibeat Kannada

'ಮಾಸ್ತಿಗುಡಿ' ದುರಂತದಲ್ಲಿ ಸಾವಿಗೀಡಾಗಿದ್ದ ಖಳನಟ ಅನಿಲ್ ನೆನಪು ಇನ್ನು ಮಾಸಿಲ್ಲ. ಅಷ್ಟರೊಳಗೆ ಅನಿಲ್ ಅವರ ಜಾಗವನ್ನ ತುಂಬಲು ಮತ್ತೊಬ್ಬ ಕಲಾವಿದನ ಎಂಟ್ರಿಯಾಗಿದೆ.

ಹೌದು, ನೋಟದಲ್ಲಿ ಹಾಗೂ ದೈಹಿಕವಾಗಿ, 'ಮಾಸ್ತಿಗುಡಿ' ಖಳನಟ ಅನಿಲ್ ಅವರನ್ನೇ ಹೋಲುವ ಇವರು, ಜೂನಿಯರ್ ಅನಿಲ್ ಎಂದೆ ಖ್ಯಾತಿ ಪಡೆದುಕೊಳ್ಳುತ್ತಿದ್ದಾರೆ.

ಅಷ್ಟಕ್ಕೂ, ಈ ಜೂನಿಯರ್ ಅನಿಲ್ ಯಾರು? 'ಮಾಸ್ತಿಗುಡಿ' ಅನಿಲ್ ಗೂ ಹಾಗೂ ಈ ನಟನಿಗೂ ಏನ್ ಸಂಬಂಧ? ಸದ್ಯ, ಯಾವ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.....

ಕನ್ನಡದಲ್ಲೊಬ್ಬ ಜೂನಿಯರ್ ಅನಿಲ್

'ಮಾಸ್ತಿಗುಡಿ' ಚಿತ್ರದ ಖಳನಾಟನಾಗಿದ್ದ ಅನಿಲ್ ಅವರನ್ನೇ ಹೋಲುವಂತೆ, ಬೆಳ್ಳಿತೆರೆಗೆ ಸಂಜಯ್ ಎಂಬ ಹೊಸ ಹುಡುಗನೊಬ್ಬ ಎಂಟ್ರಿ ಕೊಡುತ್ತಿದ್ದಾನೆ. ಇವರನ್ನ ನೋಡಿದ ಚಿತ್ರಪ್ರೇಮಿಗಳು 'ಜೂನಿಯರ್ ಅನಿಲ್' ಎಂದು ಬಿಂಬಿಸುತ್ತಿದ್ದಾರೆ.

ಲುಕ್, ಗೆಟಪ್ ನಲ್ಲಿ ಸಾಮ್ಯತೆ!

ಇದು ಕಾಕತಾಳಿಯವೋ ಅಥವಾ ಆಕಸ್ಮಿಕವೋ ಗೊತ್ತಿಲ್ಲ. ಆದ್ರೆ, ಸಂಜಯ್ ನೋಡಲು ಥೇಟ್ ಅನಿಲ್ ಅವರನ್ನೇ ಹೋಲುತ್ತಿದ್ದಾರೆ. ತಮ್ಮ ಖಡಕ್ ನೋಟ ಹಾಗೂ ತಮ್ಮ ಕಟ್ಟುಮಸ್ತಾದ ದೇಹದ ಮೂಲಕ ಗಾಂಧಿನಗರದ ಗಮನ ಸೆಳೆಯುತ್ತಿದ್ದಾರೆ.

ಯಾರು ಈ ಸಂಜಯ್?

ಸಕಲೇಶಪುರ ಮೂಲದ ಸಂಜಯ್ ಕುಮಾರ್ ಗೌಡ ಹವ್ಯಾಸಿ ಕಲಾವಿದ. ಬೆಂಗಳೂರಿನಲ್ಲಿ ಶಿಕ್ಷಣ ಮುಗಿಸಿದ ಸಂಜಯ್ ಗೆ ಕಲಾವಿದನಾಗಬೇಕು ಎಂಬ ಆಸೆ. ಹೀಗಾಗಿ, ಸಿಕ್ಕ ಅವಕಾಶಗಳನ್ನ ಬಳಿಸಿಕೊಂಡು ಚಿತ್ರೋಧ್ಯಮದ ನಂಟು ಬೆಳಸಿಕೊಂಡಿದ್ದಾರೆ.

ಧಾರವಾಹಿಯಲ್ಲಿ ನಟನೆ!

ಸದ್ಯ, 'ಕಸ್ತೂರಿ ವಾಹಿನಿ'ಯಲ್ಲಿ ಪ್ರಸಾರವಾಗುತ್ತಿರುವ 'ಅಣ್ಣಯ್ಯ' ಧಾರವಾಹಿಯಲ್ಲಿ ನೆಗಿಟೀವ್ ಪಾತ್ರವನ್ನ ಸಂಜಯ್ ನಿರ್ವಹಿಸುತ್ತಿದ್ದಾರೆ.

'ಪ್ರೋಡಕ್ಷನ್ ನಂ-1' ಸಿನಿಮಾದಲ್ಲಿ ನಟನೆ!

ಧಾರವಾಹಿಯ ಜೊತೆಯಲ್ಲಿ 'ಪ್ರೋಡಕ್ಷನ್ ನಂ-1' ಎಂಬ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸದ್ಯದಲ್ಲೇ ಈ ಚಿತ್ರವೂ ಸೆಟ್ಟೇರಲಿದೆ.

'ಅನಿಲ್'ಗೂ 'ಸಂಜಯ್'ಗೂ ಏನ್ ಸಂಬಂಧ!

ಅಂದ್ಹಾಗೆ, ಮಾಸ್ತಿಗುಡಿ ಖಳನಟ ಅನಿಲ್ ಗೂ ಹಾಗೂ ಸಂಜಯ್ ಗೂ ಯಾವುದೇ ಸಂಬಂಧವಿಲ್ಲ. ಇದುವರೆಗೂ ಇವರಿಬ್ಬರು ಭೇಟಿ ಕೂಡ ಮಾಡಿಲ್ಲ.

ಹೆಚ್ಚು ಚಿತ್ರಗಳು ಮಾಡುವ ಆಸೆ!

ಸಿಕ್ಕ ಅವಕಾಶಗಳನ್ನ ಬಳಸಿಕೊಂಡು ಪಾತ್ರಗಳಿಗಾಗಿ ಸಿದ್ದವಾಗುತ್ತಿರುವ ಸಂಜಯ್, ಮುಂದೆ ಹೆಚ್ಚು ಹೆಚ್ಚು ಚಿತ್ರಗಳಲ್ಲಿ ನಟಿಸುವ ಉದ್ದೇಶ ಹೊಂದಿದ್ದಾರೆ. ಅದಕ್ಕಾಗಿ, ಸಖತ್ ತಯಾರಿ ನಡೆಸುತ್ತಿದ್ದಾರೆ.

ಅನಿಲ್ ಜಾಗ ತುಂಬಲು ಸಂಜಯ್ ರೆಡಿ!

ಅನಿಲ್ ಅವರನ್ನ ಕಳೆದುಕೊಂಡಿದ್ದ ಸ್ಯಾಂಡಲ್ ವುಡ್ ಚಿತ್ರರಂಗಕ್ಕೆ ಸಂಜಯ್ ಹೊಸ ಎಂಟ್ರಿಯಾಗುತ್ತಿದ್ದಾರೆ. ಸದ್ಯ, ಸಂಜಯ್ ಅವರ ತಯಾರಿ ನೋಡುತ್ತಿದ್ದರೇ, ಭವಿಷ್ಯದಲ್ಲಿ ಒಬ್ಬ ಉತ್ತಮ ವಿಲನ್ ಆಗುವ ಭರವಸೆ ಹುಟ್ಟಿಸಿದ್ದಾರೆ. ಈ ಮೂಲಕ ಅನಿಲ್ ಜಾಗವನ್ನ ತುಂಬಲು ಸಂಜಯ್ ಗೆ ಉತ್ತಮ ಅವಕಾಶ ಇದಾಗಿದೆ ಎನ್ನಬಹುದು.

English summary
Kannada New Actor Sanjay is looking Same like Maasthi gudi villain Anil. here is the pics of Sanjay.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X