»   » ಕನ್ನಡ ಚಿತ್ರರಂಗದ ಹಿರಿಯ ನಟ ಸಂಕೇತ್ ಕಾಶಿ ನಿಧನ

ಕನ್ನಡ ಚಿತ್ರರಂಗದ ಹಿರಿಯ ನಟ ಸಂಕೇತ್ ಕಾಶಿ ನಿಧನ

Posted By:
Subscribe to Filmibeat Kannada

ಕನ್ನಡದ ಹಿರಿಯ ನಟ ಸಂಕೇತ್ ಕಾಶಿ ಅವರು ಅನಾರೋಗ್ಯದ ಹಿನ್ನಲೆಯಲ್ಲಿ ಇಂದು (ಆಗಸ್ಟ್ 6) ನಿಧನ ಹೊಂದಿದ್ದಾರೆ. 'ಉಲ್ಟಾಪಲ್ಟಾ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಖ್ಯಾತಿ ಗಳಿಸಿದ ನಟ ಸಂಕೇತ್ ಕಾಶಿ ಅವರು ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು.

ಈ ಹಿನ್ನಲೆಯಲ್ಲಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆ ಮೂಡಲಪಾಳ್ಯಗೆ ದಾಖಲು ಮಾಡಲಾಗಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಇಂದು ಮಧ್ಯಾಹ್ನ 3.30ಕ್ಕೆ ನಿಧನ ಹೊಂದಿದ್ದಾರೆ.

Kannada Actor Sanketh Kashi is no more

'ಉಲ್ಪಾಪಲ್ಟಾ' ಸೇರಿದಂತೆ 'ನಮ್ಮೂರ ಮಂದಾರ ಹೂವೇ', 'ಜೋಗಿ', 'ಉಪ್ಪಿದಾದಾ ಎಂಬಿಬಿಎಸ್', 'ಜಂಗ್ಲಿ', 'ಕಿರಾತಕ' ಸೇರಿದಂತೆ ಸುಮಾರು 115ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಹೆಚ್ಚಾಗಿ ಕಾಲೇಜು ಪ್ರಿನ್ಸಿಪಾಲ್ ಹಾಗು ಹಾಸ್ಯ ನಟನ ಪಾತ್ರಗಳಲ್ಲಿ ಮಿಂಚುತ್ತಿದ್ದರು.

ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ ಕೆಲವು ಸಿನಿಮಾಗಳಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಕೈಯಿಂದ ಜಾಸ್ತಿ ಕೆನ್ನೆಗೆ ಹೊಡೆಸಿಕೊಂಡವರು ಎಂದರೆ ಅದು ನಟ ಸಂಕೇತ್ ಕಾಶಿ ಎಂದೇ ಹೇಳಬಹುದು. ಸಾಕಷ್ಟು ಸಿನಿಮಾಗಳಲ್ಲಿ 'ಕುಡುಕನ' ಪಾತ್ರ ಮಾಡುತ್ತಾ ಕಾಮಿಡಿ ಮಾಡುತ್ತಿದ್ದ ಸಂಕೇತ್ ಕಾಶಿ ಅವರನ್ನು ಕಳೆದುಕೊಂಡ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.

English summary
Kannada movie 'Ulta Palta' fame actor Sanketh Kashi died Today (August 6th) at 3.30 Pm.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada